ದೆಹಲಿಯಿಂದ ಕತಾರ್ನ ದೋಹಾಗೆ ಹೊರಟ್ಟಿದ್ದ ವಿಮಾನ ತುರ್ತು ಭೂ ಸ್ಪರ್ಶ

ನವದೆಹಲಿ: ದೆಹಲಿಯಿಂದ ಕತಾರ್ನ ದೋಹಾಗೆ ಹೊರಟ್ಟಿದ್ದ ಪ್ರಯಾಣಿಕ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡ ಕಾರಣ ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.
ವಿಮಾನವು ಕರಾಚಿಯಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಪ್ರಯಾಣಿಕರನ್ನು ಕ್ರಮವಾಗಿ ಮೆಟ್ಟಿಲುಗಳ ಮೂಲಕ ಹೊರಗೆ ಇಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ. ಬೆಳಗಿನ ಜಾವ 3:50ಕ್ಕೆ ದೆಹಲಿಯಿಂದ ಪ್ರಯಾಣ ಆರಂಭಿಸಿದ್ದ ವಿಮಾನವು ಬೆಳಿಗ್ಗೆ 5:30ಕ್ಕೆ ಕರಾಚಿಯಲ್ಲಿ ಇಳಿಯಿತು.
‘ದೆಹಲಿಯಿಂದ ದೋಹಾಗೆ ಪ್ರಯಾಣಿಸಬೇಕಿದ್ದ QR579 ವಿಮಾನವು ಮಾರ್ಚ್ 21ರಂದು ಕರಾಚಿಯ ಕಡೆಗೆ ತಿರುಗಿಸಲಾಯಿತು. ಸರಕು ಸಂಗ್ರಹ ವಿಭಾಗದಲ್ಲಿ ಹೊಗೆ ಕಾಣಿಸಿಕೊಂಡ ಸೂಚನೆ ಸಿಕ್ಕಿದ್ದರಿಂದ ತುರ್ತು ನಿರ್ಧಾರ ಕೈಗೊಳ್ಳಲಾಯಿತು’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.