ಒಟಿಟಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಬಾಲಿವುಡ್ ನಟ ಶಾರುಖ್!

ಬಾಲಿವುಡ್ನ ಖ್ಯಾತ ನಟ ಶಾರುಖ್ ಖಾನ್ ಅವರು ಕಳೆದ ನಾಲ್ಕು ವರ್ಷಗಳಿಂದ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. ನಾಲ್ಕು ವರ್ಷಗಳ ಹಿಂದೆ ಅವರು ವಿಶೇಷ ಪ್ರಯೋಗದೊಂದಿಗೆ ನಟಿಸಿದ ‘ಝೀರೋ’ ಸಿನಿಮಾ ಯಶಸ್ಸು ಕಾಣಲಿಲ್ಲ. ನಂತರದಲ್ಲಿ, ಅವರ ಮಗ ಆರ್ಯನ್ ಖಾನ್ ಅವರು ಡ್ರಗ್ಸ್ ಕೇಸ್ನಲ್ಲಿ ಸಿಲುಕಿಕೊಂಡರು. ತಮ್ಮ ಮಗನನ್ನು ಜೈಲಿನಿಂದ ಹೊರ ತರುವಲ್ಲಿ ಶಾರೂಖ್ ಬ್ಯುಸಿಯಾದರು. ನಂತರದಲ್ಲಿ ಲತಾ ಮಂಗೇಶ್ಕರ್ ಅವರು ನಿಧನರಾದ ಬಳಿಕ, ಶಾರೂಖ್ ಅವರ ವಿರುದ್ದ ಫೇಕ್ನ್ಯೂಸ್ಗಳೂ ಹರಿದಾಡಿದವು. ಈ ಎಲ್ಲಾ ಸವಾಲುಗಳಿಂದ ಹೊರ ಬಂದಿರುವ ಶಾರೂಖ್, ಈಗ ಓಟಿಟಿಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಕೊರೊನಾ ಕಾರಣದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಹಲವಾರು ಸಿನಿಮಾಗಳು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾಗಿವೆ. ಹಲವು ಸಿನಿಮಾಗಳು ಓಟಿಟಿಯಲ್ಲಿ ಯಶಸ್ಸು ಕಂಡಿವೆ. ಇದೀಗ ಶಾರೂಖ್ ಅವರೂ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಅನುರಾಗ್ ಕಶ್ಯಪ್ ನಿರ್ದೇಶನದ ವೆಬ್ ಸರಣಿಯಲ್ಲಿ ನಟಿಸುತ್ತಿರುವ ಶಾರೂಖ್, ದೊಡ್ಡ ಪರದೆಯಿಂದ ಮೊಬೈಲ್ನ ಸಣ್ಣ ಪರದೆಯಲ್ಲಿ ಮುಂಚಿಲು ಮುಂದಾಗಿದ್ದಾರೆ. ಅವರು ನಟಿಸುತ್ತಿರುವ ವೆಬ್ ಸೀರೀಸ್ ಡಿಸ್ನಿ+ ಹಾಟ್ಸ್ಟಾರ್ನಲ್ಲಿ ಬಿಡುಗಡೆಯಾಗಲಿದೆ.
ಇತ್ತೀಚೆಗೆ ಸ್ವತಃ ಶಾರೂಖ್ ಖಾನ್ ಅವರೇ ತಾವು ಓಟಿಟಿಯಲ್ಲಿ ಬಿಡುಗಡೆಯಾಗುವ ವೆಬ್ ಸೀರೀಸ್ನಲ್ಲಿ ಕಾಣಿಸಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದರು. ಪೋಸ್ಟರ್ ನೋಡಿದ ಶಾರೂಖ್ ಅಭಿಮಾನಿಗಳು ಶಾರುಖ್ ಅವರು ತಮ್ಮದೇ ಹೊಸ ಒಟಿಟಿ ಫ್ಯ್ಲಾಟ್ ಫಾರ್ಮ್ ಲಾಂಚ್ ಮಾಡುತ್ತಿದ್ದಾರೆ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದರು, ನಂತರ, ಶಾರೂಖ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿಂದೆ, ಬೆಳ್ಳಿತೆರೆಯ ಮೇಲೆ ಯಶಸ್ಸು ಕಾಣಲು ವಿಫಲರಾದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರು ಅವಕಾಶಗಳ ಕೊರತೆಯಿಂದಾಗಿ ವೆಬ್ ಸಿರೀಸ್ನತ್ತ ಮುಖ ಮಾಡಿದ್ದರು. ಅವರು ‘ಸೆಕ್ರಡ್ ಗೇಮ್ಸ್’ ಹೆಸರಿನ ವೆಬ್ ಸರಣಿಯು ನೆಟ್ ಫ್ಲಿಕ್ಸ್ ನಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು.
ಅದೇ ರೀತಿಯಲ್ಲಿ, ಹಲವಾರು ಹಿಂದಿ ಮತ್ತು ದಕ್ಷಿಣ ಭಾರತದ ಸಿನಿ ತಾರೆಯರು ಓಟಿಟಿ ಫ್ಲಾಟ್ ಫಾರ್ಮ್ಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಿಭಿನ್ನ ರೀತಿಯ ಕಥಾಹಂದರವುಳ್ಳ ವೆಬ್ ಸಿರೀಸ್ ಗಳಾದ ‘ದಿ ಫ್ಯಾಮಿಲಿ ಮ್ಯಾನ್’, ‘ಅನಿರ್ವಸರಿ ಸ್ಪೆಷಲ್’, ’ಬ್ರಿತ್: ಇಂತು ದಿ ಶ್ಯಾಡೋಸ್’ಗಳಲ್ಲಿ ನಟಿ ಪ್ರಿಯಾ ಮಣಿ, ನಿತ್ಯ ಮೆನನ್, ಸಮಂತಾ ರುತ್ ಪ್ರಭು ಅವರು ನಟಿಸಿದ್ದಾರೆ.
ಮಾತ್ರವಲ್ಲದೆ, ನಟ ನೀರಜ್ ಮಾಧವ್, ಅಜೇಯ್ ದೇವ್ಗನ್, ಸೈಫ್ ಅಲಿ ಖಾನ್, ಇಮ್ರಾನ್ ಹಶ್ಮಿ, ಅಲಿ ಫಜಲ್, ರಾಜ್ ಕುಮಾರ್ ರಾವ್, ಬಾಬಿ ಡಿಯೋಲ್, ಮನೋಜ್ ಬಾಜ್ಪೆಯೀ ಸೇರಿದಂತೆ ಅನೇಕರು ಭಿನ್ನ ವೆಬ್ ಸರಣಿಗಳಲ್ಲಿ ನಟಿಸಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Related Posts

Leave a Reply

Your email address will not be published.

How Can We Help You?