ತುಳು ಪಾತೆರ್ಗ ತುಳು ಒರಿಪಾಗ ದುಬೈ : 8ನೇ ವರ್ಷದ ಗೌಜಿಗಮ್ಮತ್ತ್ ,ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮ

ತುಳು ಪಾತೆರ್ಗ ತುಳು ಒರಿಪಾಗ ದುಬೈ ಇದರ 8ನೇ ವರ್ಷದ ಗೌಜಿಗಮ್ಮತ್ತ್ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು ಮಾರ್ಚ್ 20ರಂದು ದುಬೈಯ ಝಬೀಲ್ ಪಾರ್ಕ್ ನಲ್ಲಿ ಅದ್ದೂರಿಯಾಗಿ ನಡೆಯಿತು.

ತುಳುನಾಡಿನ ಸಂಪ್ರದಾಯದಂತೆ ಭಾಗವಹಿಸಲು ಬಂದಂತಹ ತುಳು ಭಾಂದವರನ್ನು ಬೆಲ್ಲ ನೀರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಲಾಯಿತು. ದುಬೈಯ ಖ್ಯಾತ ಉದ್ಯಮಿ ಹಾಗೂ ತಂಡದ ಗೌರವ ಮಾರ್ಗದರ್ಶಕರು ಆದಂತಹ ಅಜ್ಮಲ್ ಸಯ್ಯಿದ್ ಹಾಗೂ ಶ್ರೀಮತಿ ಅಸ್ಮಾತ್ ಅಜ್ಮಲ್ ದಂಪತಿಗಳು ಕಳಸೆಗೆ ಸೇರಿನಿಂದ ಭತ್ತವನ್ನು ತುಂಬಿಸವ ಮೂಲಕ ಕಾರ್ಯಕ್ರವನ್ನು ಉದ್ಘಾಟಿಸಿದರು. ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಭಾಕರ್ ಶೆಟ್ಟಿ, ಸತೀಶ್ ಉಲ್ಲಾಳ್, ಶ್ರೀಮತಿ ಬೇಬಿ ಕೋಟ್ಯಾನ್, ನೋವೆಲ್ ಅಲ್ಮೇಡ, ಆನಂದ ಬೈಲೂರು ಹಾಗೂ ಸಂದೀಪ್ ಕಾರ್ಕಳ ಉಪಸ್ಥಿತರಿದ್ದರು.

dubai

ದಕ್ಷಿತ್ ಪ್ರೇಮ್ ಜೀತ್ ರವರನ್ನು ಅಮರ್ ನಂತೂರು ಅಡಿಕೆಮರದ ಹಾಳೆಯಲ್ಲಿ ಕುಳ್ಳಿರಿಸಿ ಎಳೆಯುದರ ಮೂಲಕ ತುಳುನಾಡಿನ ಆಟಗಳಿಗೆ ಚಾಲನೆ ನೀಡಿದರು. ಭಾಗವಹಿಸಲು ಬಂದ ತುಳುವರನ್ನು ನೊಗ , ಬಲ್ಲ್, ನಾಯೆರ್,ಅಡ್ಡಪಲಾಯಿ ಎಂಬ ನಾಲ್ಕು ತಂಡಗಳಾಗಿ ವಿಂಗಡಿಸಿ ನಂತರ ತುಳುನಾಡಿನ ಕ್ರೀಡೆಗಳಾದ ಕಬ್ಬಡಿ, ಲಗೋರಿ, ಹಗ್ಗ ಜಗ್ಗಾಟ , ಸೈಕಲ್ ಚಕ್ರ ಓಟ, ರಸಪ್ರಶ್ನೆ ಚಿತ್ರದ ಆಟ ಅಭಿನಯದ ಆಟ , ಮಕ್ಕಳಿಗೆ ಕಪ್ಪೆಜಿಗಿತ, ಲಿಂಬು ಚಮಚ, ಪುಸ್ತಕದ ಓಟ, ಮುಂತಾದ ಆಟಗಳನ್ನು ಹಮ್ಮಿಕೊಳ್ಳಲಾಯಿತು. ನಾಲ್ಕು ತಂಡಗಳಿಗೆ ನೀಡಿದ ವಿಷಯಗಳಾದ ಬಯಕೆ ಬೊಕ್ಕ ತೊಟ್ಟಿಲ್ ಪಾಡುನ ಕ್ರಮ, ಅಂಗನವಾಡಿ, ಮಾಮಿ ಮರ್ಮಲ್, ಜಾತ್ರೆ ಬೊಕ್ಕ ಕೊರಿದ ಕಟ್ಟ ವಿಷಯದ ಬಗ್ಗೆ ತಂಡದ ಅಭಿನಯ ಎಲ್ಲರ ಮನ ಸೂರೆ ಗೊಂಡಿತು. ನೋವೆಲ್ ಅಲ್ಮೇಡಾ ಮತ್ತು ಅಮರ್ ನಂತೂರ್ ರವರು ಆಟೋಟಗಳನ್ನು ನಿರ್ವಹಿಸಿದರು.

dubai

ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಮ್ಮಿಕೊಳ್ಳಲಾದ ಕ್ರೀಡೆಗಳನ್ನು ಶ್ರೀಮತಿ ಸುಪ್ರಿಯಾ ಆದರ್ಶ್ ಶೆಟ್ಟಿಯವರು ನೀರ್ವಹಿಸಿದರು. 350 ಕ್ಕಿಂತಲೂ ಹಿಚ್ಚಿನ ತುಳುವರು ಅತೀ ಉತ್ಸಹದಿಂದ ಆಟೋಟಗಳಲ್ಲಿ ಬಾಗವಹಿಸಿ ಸಂತೋಷ ಪಟ್ಟರು. ತದನಂತರ ದುಬಾಯಿಯ ಯಕ್ಷಗಾನ ಕಲಾವಿದ , ಸಮಾಜ ಸೇವಕಾರದ ಶ್ರೀಯುತ ಪ್ರಭಾಕರ್ ಸುವರ್ಣ, ಮತ್ತು ಚಿತ್ರ ಕಲಾ ಕಲಾವಿದೆ ಶ್ರೀಮತಿ ಮಮತ ಪೂಜಾರಿ ಇವರನ್ನ ಸಾಲು ಹೊದಿಸಿ ಅಪ್ಪೆ ಭಾಷೆ ತುಳವ ತುಡರ್ ಎಂಬ ಬಿರುದನ್ನು ನೀಡಿ ಸನ್ಮಾನಿಸಲಾಯಿತು. ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆ ಲಕ್ಷ್ಮೀ ಸರಿಪಲ್ಲ ಇವರನ್ನ ನೆನಪಿನ ಕಾಣಿಕೆ ನೀಡಿ ಗೌರವಿಸಾಲಾಯಿತು.

dubai

.ಮದ್ಯಾಹ್ನ ಊಟಕ್ಕೆ ತುಳುನಾಡಿನ ಖಾದ್ಯಗಳಾದ ಗಂಜಿ , ಮಾವಿನ ಕಾಯಿ ಚಟ್ನಿ, ಕಡಲೆ ಬಲ್ಯಾರ್, ನುಂಗೆಲ್ ನಂಗ್, ಕಡ್ಲೆ ಬೆಳೆ ಪಾಯಸವನ್ನು ಊರಿನಿಂದ ತರಿಸಿದ ಅಡಿಕೆಯ ಹಾಳೆಯ ಬಟ್ಟಲಿನಲ್ಲಿ ಊಟದ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು. ಸಂಜೆ ಗೊಳಿಬಜೆ ಮತ್ತು ಚಾಹ ದ ವ್ಯವಸ್ಥೆ ಮಡಾಲಾಗಿತ್ತು. ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಿದ ಎಲ್ಲಾ ಮಹಾನಿಯರಿಗೆ ನೆನಪಿನ ಕಾಣಿಕೆ ನೀಡಿ ಜಯ ಗಳಿಸಿದ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಅಭಿನಂದಿಸಾಲಾಯಿತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದವರಿಗೆ ಗಣ್ಯ ವ್ಯಕ್ತಿಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ತಂಡದ ಅಧ್ಯಕ್ಷರಾದ ಪ್ರೇಮ್ ಜೀತ್ ರವರು ಸ್ವಾಗತಿಸಿದರು. ತಂಡದ ಸಕ್ರಿಯ ಸದಸ್ಯೆರಾದ, ಸತೀಶ್ ಪೂಜಾರಿ , ಕವಿರಾಜ್ ಕುಂದರ್, ಮನೋಜ್ ಕುಲಾಲ್ , ಶೋಬಿತಾ ಪ್ರೇಮಜೀತ್, ದೀಪಕ್ ಸನಿಲ್, ಪ್ರೇಮಶ್ರೀ , ಭಾಸ್ಕರ್ ಅಂಚನ್, ಸುಜಿತ್, ಪ್ರತಿಕ್ ಉಳ್ಳಾಲ, ರವಿಕುಮಾರ್ , ಪುರಂದರ್ ಕುಲಾಲ್, ವಿಕ್ರಮ್, ಗುರುದತ್ತ್ ಬೆಲ್ಚಡ, ಚೇತನ್ ಕುಲಾಲ್, ರೋಷನ್ , ಆದರ್ಶ್ ಶೆಟ್ಟಿ ,ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸಿದರು .ತುಳು ಪಾತೆರ್ ಗ ತುಳು ಒರಿಪಾಗ ತಂಡದ ಪ್ರದಾನ ಕಾರ್ಯದರ್ಶಿಯವರಾದ ರೀತು ಅಂಚನ್ ಕುಲಶೇಖರ ತಂಡದ ಸಾಧನೆಯನ್ನು ವಿವರಿಸಿ ಕಾರ್ಯಕ್ರಮವನ್ನು ನಿರೂಪಿಸಿ ನಿರ್ವಹಿಸಿ ದನ್ಯವಾದ ಸಮರ್ಪಣೆ ಮಾಡಿದರು

Related Posts

Leave a Reply

Your email address will not be published.

How Can We Help You?