ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ವಿಶೇಷ ಸಭೆ

ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ವಿಶೇಷ ಸಭೆ

ಮುಂಬಯಿ : ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ, ವನದುರ್ಗ ರೈತಶಕ್ತಿ ಗುಂಪು ಮತ್ತು ಹಳಗೇರಿ ಪರಿಸರ ಹಿತರಕ್ಷಣಾ ವೇದಿಕೆಯ ಆಶ್ರಯದಲ್ಲಿ ಇತ್ತೀಚೆಗೆ ಮಹಾಲಸ ಕಲ್ಚರಲ್ ಹಾಲ್, ನಾಗೂರು ಹಳಗೇರಿ – ಕಂಬದಕೋಣೆ – ಬೈಂದೂರು ಇಲ್ಲಿ ನಡೆದ ಪರಿಸರ ರಕ್ಷಿಸಿ ಜೀವನ ಉಳಿಸಿ ಅಭಿಯಾನಕ್ಕೆ ಸಮಂದಪಟ್ಟವರಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು ಈ ಬಗ್ಗೆ .. ಮಾರ್ಚ್ 17ರಂದು ರಂದು ಸಮಿತಿ ಯ ಅಧ್ಯಕ್ಷರಾದ ಎಲ್ ವಿ ಅಮೀನ್ ಅಧ್ಯಕ್ಷತೆಯಲ್ಲಿ ಸಂಸ್ಥಾಪಕರಾದ ತೋನ್ಸೆ ಜಯಕೃಷ್ಣ ಶೆಟ್ಟಿಯವರ ಉಪಸ್ಥಿತಿಯಲ್ಲಿ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಬಿಲ್ಲವರ ಅಸೋಷಿಯೇಶನ್ ನಲ್ಲಿ ವಿಶೇಷ ಸಭೆ ನಡೆಯಿತು.
ಸಮಿತಿಯ ಸಂಸ್ಥಾಪಕ ರಾಗಿರುವ ತೋನ್ಸೆ ಜಯಕೃಷ್ಣ ಶೆಟ್ಟಿಯವರು ಹಳಗೇರಿಯಲ್ಲಿ 53 ಎಕ್ರೆ ಅರಣ್ಯ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಕಾದಿರಿಸಿರುವುದನ್ನು ಭೂಮಿಯನ್ನು ಸರಕಾರ ಇನ್ನು ಪರಿಶೀಲಿಸಬೇಕು ನಮಗೆ ಅರಣ್ಯವೂ ಬೇಕು, ಕೈಗಾರಿಕೆಯೂ ಬೇಕು. ಆದರೆ ಜನ ಜೀವನಕ್ಕೆ ಹಾನಿ ಉಂಟಾಗದ ರೀತಿಯಲ್ಲಿ ಬೈಂದೂರಿನ ಜನವಸತಿ ಇಲ್ಲದ ಜಾಗದಲ್ಲಿ ಕೈಗಾರಿಕೆಯನ್ನು ಪ್ರಾರಂಭಿಸಬೇಕು ಇದು ನಮ್ಮ ಪ್ರತಿಭಟನೆಯಲ್ಲಿ ಊರಿನ ಜನರ ಮತ್ತು ಅಲ್ಲಿ ವಾಸವಿರುವ ಸಾಮಾನ್ಯ ಜನರ ಪ್ರತಿಭಟನೆ ನಮ್ಮ ಪರಿಸರ ಪ್ರೇಮಿ ಸಮಿತಿಗೆ ಆ ಪರಿಸರದ ಜನರ ಬೇಡಿಕೆ ಆಗಿತ್ತು ಇದನ್ನು ನಾವು ಜಾಗವನ್ನು ಮೊದಲು ಸರಿಯಾಗಿ ಪರಿಶೀಲಿಸಿ. ಬಳಿಕ ನಮ್ಮ ಪೂರ್ಣ ಬೆಂಬಲವನ್ನು ನೀಡಿದ್ದೇವೆ ಇದೀಗ ಅದರ ಮಾಹಿತಿಯನ್ನು ಆ ಪ್ರದೇಶದ ಸಂಸದರಿಗೆ ಶಾಸಕರಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಮತ್ತು ರಾಜ್ಯ ಸರಕಾರಕ್ಕೆ ಪೂರ್ಣ ಮಾಹಿತಿಯನ್ನು ನೀಡಿದ್ದೇವೆ ,ಹಳಗೇರಿಯಲ್ಲಿ 53 ಎಕ್ರೆ ಅರಣ್ಯ ಭೂಮಿಯನ್ನು . ಕೈಗಾರಿಕಾ ಉದ್ಯಮಕ್ಕೆ ಸೂಕ್ತವಾಗಿಲ್ಲ ಇಲ್ಲಿ ಶಾಲೆಗಳಿವೆ ಬಡಕುಟುಂಬಗಳ ಮನೆಗಳಿವೆ ದಟ್ಟವಾದ ಅರಣ್ಯ ನಾಶವಾಗುತ್ತದೆ. ಸರಕಾರದ ಯೋಜನೆಗಳು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ ಆದರೆ ಜನಸಾಮಾನ್ಯರಿಗೆ ತೊಂದರೆ ಆಗದಂತೆ ಅರಣ್ಯ ನಾಶವಾಗದಂತೆ ಸರಕಾರದ ಅಥವಾ ಸರಕಾರೇತರ ಯೋಜನೆಗಳು ಬರಲಿ, ಬೈಂದೂರಿನಲ್ಲಿ ನಡೆದ ಪ್ರತಿಭಟನೆಗೆ ತಮ್ಮ ಪ್ರತಿಕ್ರಿಯೆ ಆ ಪ್ರದೇಶದ ಜನರಿಂದ ಬಂದಿರುತ್ತದೆ ಹೀಗೆ ಸಮಗ್ರವಾಗಿ ಪ್ರತಿಭಟನೆಯ ವಿವರಗಳನ್ನು ಸಭೆಯ ಮುಂದಿಟ್ಟರು

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಜಯ ಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಮಾಜಿ ಅಧ್ಯಕ್ಷರಾದ ಧರ್ಮಪಾಲ ಯು. ದೇವಾಡಿಗ ತಮ್ಮ ಅನುಭವಗಳನ್ನು ಹಂಚಿಕೊಂಡು ಬೈಂದೂರಿನಲ್ಲಿ ಕೆಲವೊಂದು ಜನರು ನಮ್ಮ ಹೋರಾಟದ ಬಗ್ಗೆ ತಪ್ಪು ಕಲ್ಪನೆಗಳನ್ನು ಹೊಂದಿಕೊಂಡಿದ್ದಾರೆ ಆದರೆ ಅವರಿಗೆ ನಮ್ಮ ಹೋರಾಟದ ಬಗ್ಗೆ ಇದೀಗ ಪೂರ್ಣ ಮಾಹಿತಿ ಲಭ್ಯವಾಗಿದೆ ಜಯ ಶ್ರೀ ಕೃಷ್ಣ ಪರಿಸರಪ್ರೇಮಿ ಸಮಿತಿಯ ಕೆಲಸ ಕಾರ್ಯಗಳು ಅವರಿಗೆ ಮನವರಿಕೆ ಆಗಿದೆ, ಮುಂದಿನ ನಮ್ಮ ಕೆಲಸಗಳಿಗೆ ಜನರ ಬೆಂಬಲ ಪೂರ್ಣ ಪ್ರಮಾಣದಲ್ಲಿ ಸಿಗುತ್ತದೆ ಎಂದರು
ಉಪಾಧ್ಯಕ್ಷರಾದ ನಿತ್ಯಾನಂದ ಡಿ. ಕೋಟ್ಯಾನ್ ಸಮಿತಿ ಸ್ಥಾಪನೆಯ ದಿನದಿಂದಲೇ ನಮ್ಮ ಯೋಜನೆ ಹೇಗೆ ರೂಪುಗೊಳ್ಳಬೇಕು ಎನ್ನುವುದು ಪತ್ರಿಕೆಗಳಲ್ಲಿ ಮತ್ತು ಸಭೆಗಳಲ್ಲಿ ಪದೇ ಪದೇ ನಾವು ತಿಳಿಸುತ್ತಿದ್ದೇವೆ ಅದರ ಪೂರ್ಣ ಮಾಹಿತಿ ನನ್ನಲ್ಲಿದೆ ಎಂದು ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಗಳು ವಿವರವನ್ನು ಸಭೆಯ ಮುಂದಿಟ್ಟರು ಹಾಗೂ ಬೈಂದೂರಿನಲ್ಲಿ ನಡೆದ ಪ್ರತಿಭಟನೆಯ ಬಗ್ಗೆ ಅಲ್ಲಿಯ ಜನಾಭಿಪ್ರಾಯದ ಬಗ್ಗೆ ಸಭೆಗೆ ತಿಳಿಸಿದರು
ಸಮಿತಿಯ ಉಪಾಧ್ಯಕ್ಷ ಗಳಾದ ಪಿ ಡಿ ಶೆಟ್ಟಿ. ಹಿರಿಯಡ್ಕ ಮೋಹನ್ ದಾಸ್ ,ಮೊದಲಾದವರು ಮಾತನಾಡುತ್ತಾ ನಮ್ಮ ಹೋರಾಟವು ನಿಜವಾಗಿಯೂ ಸರಿಯಾದ ಮಾರ್ಗದಲ್ಲಿ ನಡೆಯುತ್ತಿದ್ದು, ಇದಕ್ಕೆ ಈಗಾಗಲೇ ಸಮಂದಪಟ್ಟವರಿಂದ ಉತ್ತಮ ಪ್ರತಿಕ್ರಿಯೆ ದೊರಕಿದೆ ಎಂದು ತಮ್ಮ ಅನುಭವವನ್ನು ಅಂಚಿಕೊಂಡರು.

ಈ ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಚಂದ್ರಶೇಖರ ಆರ್ ಬೆಳ್ಚಡ, ಜಿ ಟಿ ಆಚಾರ್ಯ, ಮತ್ತಿತರರು ತಮ್ಮ ಅನಿಸಿಕೆಗಳನ್ನು ತಿಳಿಸಿದರು
ಪ್ರಾರಂಭದ ಪ್ರದಾನ ಕಾರ್ಯದರ್ಶಿ ಸುರೇಂದ್ರ ಸಾಲ್ಯಾನ್ ಸ್ವಾಗತಿಸಿದರು ಸಭೆಯಲ್ಲಿ ಸಮಿತಿಯ ಪದಾಧಿಕಾರಿಗಳು ವಿವಿಧ ಜಾತಿಯ ಸಂಘದ ಅಧ್ಯಕ್ಷರುಗಳು, ಮತ್ತಿತರ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಬೈಂದೂರಿನಲ್ಲಿ ಪ್ರಾರಂಭಿಸ ಬೇಕೆನ್ನುವ ಸರಕಾರದ ಯೋಜನೆ ಕೂಡಲೇ ಸ್ಥಳಾಂತರಿಸಲು ಇದ್ದಲ್ಲಿ ಮುಂದೆ ನಮ್ಮ ಬೃಹತ್ ಪ್ರತಿಭಟನೆ

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷರಾದ ಎಲ್ ವಿ ಅಮೀನ್ ರವರು ಬೈಂದೂರಿನಲ್ಲಿ ಪ್ರಕೃತಿ ನಾಶವಾಗುವ ಮತ್ತು ನಿತ್ಯ ಜನರ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಕೈಗಾರಿಕೆಗೆ ಉದ್ಯಮಕ್ಕೆ ಕಾದಿರಿಸಿದ ಭೂಮಿಯನ್ನು ಸಂಪೂರ್ಣ ಪರಿಶೀಲನೆ ನಾವೆಲ್ಲರೂ ಮಾಡಿದ್ದೇವೆ ಆ ಪ್ರದೇಶದ ಜನರ ಕೂಡ ಬೆಂಬಲ ನಮಗೆ ದೊರೆತಿದೆ ಸರಕಾರ ಬೈಂದೂರು ಪರಿಸರದಲ್ಲಿರುವ ಬರಡು ಭೂಮಿಯನ್ನು ಕೈಗಾರಿಕೆ ಬಳಸಿಕೊಳ್ಳ ಬರದು ಈ ಬಗ್ಗೆ ನಮ್ಮ ಸಮಿತಿ ಸರಕಾರಕ್ಕೆ ಸಂದೇಶವನ್ನು ರವಾನಿಸಿದೆ, ಇದಕ್ಕೆ ರಾಜ್ಯ ಸರ್ಕಾರ ಕೂಡಲೇ ಸ್ಪಂದಿಸಲಿದೆ ಎಂಬ ವಿಶ್ವಾಸ ನಮಗಿದೆ, ಸಮಿತಿ ಜಿಲ್ಲೆಯ ಅಭಿವೃದ್ಧಿಗಾಗಿ ಈ ಹಿಂದೆ ರೂಪಿಸಿಕೊಂಡಿರುವ ಯೋಜನೆಗಳು ಎಲ್ಲವೂ ಯಶಸ್ವಿಗೊಂಡಿದೆ, ಅದಕ್ಕೆ ಸಮಿತಿಯ ಸದಸ್ಯರು ಒಗ್ಗಟ್ಟು ಕಾರಣ, ಬೈಂದೂರಿನಲ್ಲಿ ಪ್ರಾರಂಭಿಸ ಬೇಕೆನ್ನುವ ಸರಕಾರದ ಯೋಜನೆ ಕೂಡಲೇ ಸ್ಥಳಾಂತರಿಸಲು ಇದ್ದಲ್ಲಿ ಮುಂದೆ ನಮ್ಮ ಬೃಹತ್ ಪ್ರತಿಭಟನೆ ಮಾಡುವ ಎಲ್ಲಾ ಸಿದ್ಧತೆಗಳನ್ನು ನಾವು ಮಾಡಬೇಕಾಗುತ್ತದೆ ಎಂದು ಸಭೆಯ ಸದಸ್ಯರಿಗೆ ತಿಳಿಸಿದರು.

Related Posts

Leave a Reply

Your email address will not be published.

How Can We Help You?