ಸುರತ್ಕಲ್ ತಾತ್ಕಾಲಿಕ ಟೋಲ್ಗೇಟ್ ತೆರವಿಗೆ ಆಗ್ರಹಿಸಿ ಪಾದಯಾತ್ರೆಗೆ ಚಾಲನೆ

ಸುರತ್ಕಲ್ನ ಎನ್.ಐ.ಟಿ.ಕೆ. ತಾತ್ಕಾಲಿಕ ಟೋಲ್ ಗೇಟನ್ನು ಶೀಘ್ರವಾಗಿ ತೆರವುಗೊಳಿಸುವಂತೆ ಆಗ್ರಹಿಸಿ ವಿವಿಧ ಪಕ್ಷ, ಸಂಘ-ಸಂಸ್ಥೆ ಹಾಗೂ ಸಂಘಟನೆಗಳ ಮುಖಂಡರು ಸೇರಿದ ಸಭೆಯಲ್ಲಿ ಆಗ್ರಹಿಸಿ ಡೋಲು ಬಾರಿಸುವ ಮೂಲಕ ಚಾಲನೆ ನೀಡಲಾಯಿತು.
ಸುಮಾರು ಸಾವಿರಾರು ಮಂದಿಯಷ್ಟು ಸೇರಿದ ಪ್ರತಿಭಟನಾಕಾರರು, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭ ಕರಂದ್ಲಾಜೆ, ಶಾಸಕರಾದ ಉಮಾನಾಥ್ ಕೋಟ್ಯಾನ್, ಲಾಲಾಜಿ ಆರ್ ಮೆಂಡನ್ ವಿರುದ್ಧ ಘೋಷಣೆಯನ್ನು ಕೂಗಿ ಸುರತ್ಕಲ್ ಟೋಲ್ ತೆರವುಗೊಳಿಸಲು ವಿಳಂಬಿಸಿದ್ದಲ್ಲಿ ಮುಂದೆ ನಡೆಯ ಬಹುದಾದ ದುರಂತಕ್ಕೆ ನೀವೇ ಜವಾಬ್ದಾರಿ ಆಗಲಿದ್ದೀರಿ ಎಂಬುದಾಗಿ ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಮುಖಂಡರೂ ಚಲನಚಿತ್ರ ನಟರೂ ಆದ ರಾಜಶೇಖರ್ ಕೋಟ್ಯಾನ್ ಸಹಿತ ಇತರೇ ಮುಖಂಡರು ಡೋಲು ಬಾರಿಸುವ ಮೂಲಕ ಚಾಥ ಹೆಜಮಾಡಿಯಿಂದ ಆರಂಭಗೊಂಡಿತು.

ಈ ಸಂದರ್ಭ ಪ್ರಮುಖರಾದ ಅಭಯಚಂದ್ರ ಜೈನ್, ಮೊಹಿದ್ದಿನ್ ಬಾವ, ವಿನಯಕುಮಾರ್ ಸೊರಕೆ, ಮುನಿರ್ ಕಾಟಿಪಳ್ಳ, ಸುಧಾಕರ್ ಕರ್ಕೇರ, ರಾಲ್ಫಿ ಡಿ ಕೋಸ್ತ, ನವೀನ್ ಚಂದ್ರ ಶೆಟ್ಟಿ, ನವೀನ್ ಚಂದ್ರ ಸುವರ್ಣ, ಶೇಖರ್ ಹೆಜಮಾಡಿ, ಕರುಣಾಕರ್ ಪೂಜಾರಿ , ಸುದೀರ್ ಹೆಜಮಾಡಿ, ದೀಪಕ್ ನಡಿಕುದ್ರು ಮೊದಲಾದವರಿದ್ದರು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪಡುಬಿದ್ರಿ ಎಸ್ಸೈ ಅಶೋಕ್ ಕುಮಾರ್ ನೇತೃತ್ವದಲ್ಲಿ ಪೆÇಲೀಸ್ ಬಿಗಿ ಬಂದೋಬಸ್ತ್ ನಡೆಸಲಾಗಿತ್ತು.