ಶಕ್ತಿ ಕ್ಯಾನ್ ಕ್ರಿಯೇಟ್-2022 : ಈಜು, ಬೇಸಿಗೆ ಹಾಗೂ ಕ್ರಿಕೆಟ್ ಶಿಬಿರ .

ಶಕ್ತಿನಗರದ ಶಕ್ತಿ ವಸತಿ ಶಾಲೆಯ ಆಶ್ರಯದಲ್ಲಿ ಎ.1ರಿಂದ ‘ಶಕ್ತಿ ಕ್ಯಾನ್ ಕ್ರಿಯೇಟ್-2022′ ಶೀರ್ಷಿಕೆಯಲ್ಲಿ ಈಜು, ಬೇಸಿಗೆ ಹಾಗೂ ಕ್ರಿಕೆಟ್ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಶಕ್ತಿ ಎಜುಕೇಶನ್ ಟ್ರಸ್ಟ್ನ ಪ್ರಧಾನ ಸಲಹೆಗಾರ ರಮೇಶ್ಕೆ ತಿಳಿಸಿದರು.
ಅವರು ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿಂದು ಶಿಬಿರದ ಪೆÇೀಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಶಿಬಿರದಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು ಎಂದರು.

ಶಕ್ತಿ ವಸತಿ ಶಾಲೆಯ ಈಜುಕೊಳದಲ್ಲಿ ಎ.1ರಿಂದ 21ರವರೆಗೆ ಈಜು ಶಿಬಿರ ನಡೆಯಲಿದೆ. ಬೆಳಗ್ಗೆ ಮತ್ತು ಸಂಜೆ ಮೂರು ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು. ಶಿಬಿರದ ಶುಲ್ಕ 2,800 ರೂ. ನಿಗದಿಪಡಿಸಲಾಗಿದೆ. ಶಿಬಿರವನ್ನು ಮಂಗಳಾ ಈಜು ತರಬೇತುದಾರರು ನಡೆಸಲಿದ್ದಾರೆ. ಶಿಬಿರದ ಸಂಯೋಜಕರಾಗಿ ಶಕ್ತಿ ಶಾಲೆಯ ಈಜು ತರಬೇತುದಾರ ರಾಜೇಶ್ ಖಾರ್ವಿ ಸಹಕರಿಸಲಿದ್ದಾರೆ. ಬೇಸಿಗೆ ಶಿಬಿರವು ಎ.1ರಿಂದ 23ರವರೆಗೆ ನಡೆಯಲಿದ್ದು, ಎಲ್ಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಬಿರದ ಶುಲ್ಕ 3,000 ರೂ. ಗಳಾಗಿರುತ್ತದೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಊಟ, ತಿಂಡಿ ಮತ್ತು ವಾಹನದ ವ್ಯವಸ್ಥೆಯನ್ನು ಉಚಿತವಾಗಿ ಕಲ್ಪಿಸಲಾಗುವುದು ಎಂದವರು ತಿಳಿಸಿದರು.

ಕ್ರಿಕೆಟ್ ಶಿಬಿರವು ಎ.1ರಿಂದ 30ರವರೆಗೆ ಸಂಜೆ 4ರಿಂದ 6 ಗಂಟೆಯವರೆಗೆ ನಡೆಯಲಿದೆ. ತರಬೇತುದಾರ ಸಾಮ್ಯುಯಲ್ ಜಯರಾಜ್ ಮತ್ತು ರಾಜೇಶ್ ಶೆಟ್ಟಿ ಮಾರ್ಗದರ್ಶನದಲ್ಲಿ ಶಿಬಿರ ನಡೆಯಲಿದ್ದು, ಶಿಬಿರದ ಶುಲ್ಕ 2,500 ರೂ. ಆಗಿರುತ್ತದೆ. ಶಿಬಿರಕ್ಕೆ ಆನ್ಲೈನ್ ವೆಬ್ಸೈಟ್ ತಿತಿತಿ.shಚಿಞಣhi.eಜu.iಟಿ ಮೂಲಕ ನೋಂದಣಿ ಮಾಡಬಹುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಕ್ತಿ ವಸತಿ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ., ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ಪಪೂ ಕಾಲೇಜಿನ ಪ್ರಾಂಶುಪಾಲ ಪೃಥ್ವಿರಾಜ್ ಉಪಸ್ಥಿತರಿದ್ದರು.