ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ : ಮಾ.25 ಪ್ರಥಮ ವೈದ್ಯಕೀಯ ಸ್ನಾತಕೋತ್ತರ ಪದವಿ ಆರಂಭ .

ನಾಟೆಕಲ್‍ನ ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸಯನ್ಸಸ್ ನಲ್ಲಿ ಮಾ.25ರಂದು ಪ್ರಥಮ ವೈದ್ಯಕೀಯ ಸ್ನಾತಕೋತ್ತರ ಪದವಿ ತರಗತಿ ಆರಂಭಗೊಳ್ಳಲಿದೆ.ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ಆಡಳಿತಾಧಿಕಾರಿ ಡಾ.ರೋಹನ್ ಎಸ್. ಮೋನಿಸ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ಉಪಕುಲಪತಿ ಡಾ.ಎಂ.ಕೆ.ರಮೇಶ್ ಅಪರಾಹ್ನ 2 ಗಂಟೆಗೆ ಕಣಚೂರು ಸಭಾಭವನದಲ್ಲಿ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದರು.ಭಾರತೀಯ ಫಿಸಿಯೋಥೆರಪಿಸ್ಟ್‍ಗಳ ಸಂಸ್ಥೆ ಅಧ್ಯಕ್ಷ ಡಾ.ಯು.ಟಿ.ಇಫ್ತಿಕಾರ್ ಅಲಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಣಚೂರು ಸಂಸ್ಥೆಯ ಅಧ್ಯಕ್ಷ ಹಾಜಿ ಯು.ಕೆ.ಮೋನು, ನಿರ್ದೇಶಕ ಅಬ್ದುಲ್ ರಹಿಮಾನ್, ಪ್ರಾಂಶುಪಾಲ ಡಾ.ಎಚ್.ಎಸ್.ವಿರೂಪಾಕ್ಷ, ವೈದ್ಯಕೀಯ ಅಧೀಕ್ಷಕ ಡಾ.ಹರೀಶ್ ಶೆಟ್ಟಿ, ಡಾ.ದೇವದಾಸ್ ರೈ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದಲ್ಲಿ ಸಂಯೋಜನೆಗೊಂಡಿದ್ದು, ರಾಷಟ್ರೀಯ ವೈದ್ಯಕೀಯ ಆಯೋಗ ಹೊಸದಿಲ್ಲಿಯಿಂದ ಅನುಮತಿ ಪಡೆದು ಸ್ನಾತಕೋತ್ತರ ವೈದ್ಯಕೀಯ ಪದವಿಯನ್ನು ವೈದ್ಯಕೀಯ ವಿಭಾಗ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಪ್ರಸೂತಿ ಶಾಸ್ತ್ರ, ಮೂಳೆ ಚಿಕಿತ್ಸೆ, ಅರಿವಳಿಕೆ ಶಾಸ್ತ್ರ, ಮಕ್ಕಳ ಚಿಕಿತ್ಸೆ, ಉಸಿರಾಟದ ಸಂಬಂಧಿ ವಿಭಾಗ ಹಾಗೂ ವಿಕಿರಣ ಶಾಸ್ತ್ರ ಕ್ಷೇತ್ರಗಳಲ್ಲಿ ಆರಂಭಿಸಿದೆ ಎಂದು ಅವರು ವಿವರಿಸಿದರು.

Related Posts

Leave a Reply

Your email address will not be published.

How Can We Help You?