ದಿ ಎಕನಾಮಿಕ್ ಟೈಮ್ಸ್ & ಸ್ಟ್ಯಾಟಿಸ್ಟಾ ಜಿಎಮ್ ಬಿಹೆಚ್, ಜರ್ಮನಿಯ ಅಧ್ಯಯನದ ವರದಿಯ ಪ್ರಕಾರ ಮಂಗಳೂರಿನಲ್ಲಿರುವ ಕಂಪನಿಗಳನ್ನು ಭಾರತದ ಬೆಳವಣಿಗೆಯ ಚಾಂಪಿಯನ್

ದಿ ಎಕನಾಮಿಕ್ ಟೈಮ್ಸ್ & ಸ್ಟ್ಯಾಟಿಸ್ಟಾ ಜಿಎಮ್ ಬಿಹೆಚ್, ಜರ್ಮನಿಯ ಅಧ್ಯಯನದ ವರದಿಯ ಪ್ರಕಾರ ಮಂಗಳೂರಿನಲ್ಲಿರುವ ಕಂಪನಿಗಳನ್ನು ಭಾರತದ ಬೆಳವಣಿಗೆಯ ಚಾಂಪಿಯನ್ ಎಂದು ಗುರುತಿಸಲಾಗಿದೆ. ಮಂಗಳೂರಿನ ಬಲ್ಲಾಳ್‍ಬಾಗ್‍ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಬ್ರೆøಟ್‍ಫ್ಲೆಕ್ಸಿ ಇಂಟರ್ ನ್ಯಾಶನಲ್ ಪ್ರೆøವೇಟ್ ಲಿಮಿಟೆಡ್ ಅನ್ನು ಭಾರತದ ಬೆಳವಣಿಗೆಯ ಚಾಂಪಿಯನ್ಸ್ -2022 ಎಂದು ಗುರುತಿಸಲಾಗಿದೆ.
ಈ ವರದಿಯನ್ನು ಮಾರ್ಚ್ 18, 2022 ರಂದು ಎಕನಾಮಿಕ್ ಟೈಮ್ಸ್‍ನಲ್ಲಿ ಪ್ರಕಟಿಸಲಾಗಿದೆ. ದಿ ಎಕನಾಮಿಕ್ ಟೈಮ್ಸ್ ಮತ್ತು ಸ್ಟ್ಯಾಟಿಸ್ಟಾ ಜಿಎಂಬಿಹೆಚ್, ಜರ್ಮನಿಯ ವತಿಯಿಂದ ಜಂಟಿ ಅಧ್ಯಯನವನ್ನು ಕೈಗೊಳ್ಳಲಾಗಿತ್ತು ಮತ್ತು ಅಗ್ರ 150 ಕಂಪನಿಗಳ ಪಟ್ಟಿಯನ್ನು ತಯಾರಿಸಿ ಭಾರತದ ಬೆಳವಣಿಗೆಯ ಚಾಂಪಿಯನ್ ಎಂದು ಗುರುತಿಸಲಾಗಿದೆ. ಈ ವರದಿಯಲ್ಲಿ ಬ್ರೈಟ್‍ಫ್ಲೆಕ್ಸಿ ಇಂಟರ್ ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ 89ನೇ ಸ್ಥಾನವನ್ನು ಪಡೆದುಕೊಂಡಿದೆ.

ಬ್ರೈಟ್‍ಫ್ಲೆಕ್ಸಿ ಇಂಟರ್‍ನ್ಯಾಶನಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯು ನವೆಂಬರ್ 25, 2021 ರಂದು ಉಪ ವಲಯದ ಪ್ಲಾಸ್ಟಿಕ್‍ಗಳು ಮತ್ತು ಪಾಲಿಮರ್‍ಗಳಲ್ಲಿ ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ ಪ್ರಶಸ್ತಿಗಳಲ್ಲಿ ಎಫ್‍ಐಸಿಸಿಐ ಉದ್ಯಮದಲ್ಲಿ ಶ್ರೇಷ್ಠತೆಯ ಸ್ವೀಕರಿಸಿದೆ ಎಂದು ತಿಳಿಸುವುದು ಗಮನಾರ್ಹವಾಗಿದೆ . ಜಂಟಿ ವ್ಯವಸ್ಥಾಪಕರಾದ ಅಭಿನವ್ ಬನ್ಸಾಲ್ ಅವರು ಕಂಪನಿಯ ಪರವಾಗಿ ಭಾರತ ಸರಕಾರದ ರಾಜ್ಯ ವಾಣಿಜ್ಯ ಇಲಾಖೆ ಸಚಿವರಾದ ಶ್ರೀಮತಿ ಅನುಪ್ರೀಯಾ ಪಟೇಲ್ ಇವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

ವ್ಯವಸ್ಥಾಪಕರಾದ ಅನಿಲ್ ಕುಮರ್ ಬನ್ಸಾಲ್ ಅವರು “ಗುಣಮಟ್ಟ ಪ್ರಥಮ ಮತ್ತು ಪ್ರಥಮ ಬಾರಿ” ಎಂದು ಗ್ರಾಹಕ ಕೇಂದ್ರಿತ ಗುಣಮಟ್ಟದ ನೀತಿಯ ಬಗ್ಗೆ ಒತ್ತಿ ಹೇಳಿದರು.

Related Posts

Leave a Reply

Your email address will not be published.

How Can We Help You?