ಉಳ್ಳಾಲ ಅಪರಿಚಿತ ಕಾರು ಢಿಕ್ಕಿ: ಸ್ಕೂಟರ್ ಸಹಸವಾರೆ ದಾರುಣ ಸಾವು

ಉಳ್ಳಾಲ: ಸ್ಕೂಟರ್ ಗೆ ಅಪರಿಚಿತ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆ ದಾರುಣ ಸಾವನ್ನಪ್ಪಿದ ಘಟನೆ ರಾ.ಹೆ. 66 ರ ಕಾಪಿಕಾಡಿನಲ್ಲಿ ನಡೆದಿದ್ದು, ಹಿಟ್ ಆಂಡ್ ರನ್ ನಡೆಸಿದ ಕಾರಿನ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


ತೊಕ್ಕೊಟ್ಟು ಕಾಪಿಕಾಡು ಎರಡನೇ ಕ್ರಾಸ್ ನಿವಾಸಿ ಪೀಟರ್ ಡಿಸೋಜ ಎಂಬವರ ಪತ್ನಿ ಎಮಿಲ್ಡಾ ಡಿಸೋಜ (55) ಮೃತರು. ಎಂದಿನಂತೆ ವಾಕಿಂಗ್ ತೆರಳಿದ್ದ ಎಮಿಲ್ಡಾ ತೊಕ್ಕೊಟ್ಟು ಚರ್ಚ್ ಗೆ ತೆರಳಿ ವಾಪಸ್ಸಾಗುವಾಗ ಕ್ಲೇವಿ ಡಿಸೋಜ ಎಂಬವರ ಸ್ಕೂಟರ್ ನಲ್ಲಿ ವಾಪಸ್ಸಾಗಿದ್ದರು. ಇದೇ ಸಂದರ್ಭ ಹಿಂಬದಿಯಿಂದ ಕೇರಳ ಕಡೆಗೆ ತೆರಳುತ್ತಿದ್ದ ಅಪರಿಚಿತ ಕಾರು ಢಿಕ್ಕಿ ಹೊಡೆದು ತೆರಳಿದೆ. ನಾಗುರಿ ಸಂಚಾರಿ ಠಾಣಾ ಪೆÇಲೀಸರು ಹಿಟ್ ಆಂಡ್ ರನ್ ಪ್ರಕರಣ ದಾಖಲಿಸಿ, ಕಾರಿಗಾಗಿ ಶೋಧ ಮುಂದುವರಿಸಿದ್ದಾರೆ.