ಮಂಗಳೂರಿನ 42, 44 ರೂಟ್ಗಳಲ್ಲಿ ಸಂಚರಿಸುವ ಬಸ್ಗಳಲ್ಲಿ ಚಲೋ ಕಾರ್ಡ್

ಮಂಗಳೂರು ನಗರದ 42, 44 ರೂಟ್ ಗಳಲ್ಲಿ ಸಂಚರಿಸುವ ಬಸ್ ಗಳಲ್ಲಿ ಪ್ರಯಾಣಿಕರ ಹಿತದೃಷ್ಟಿಯಿಂದ ಚಲೋ ಡಿಜಿಟಲ್ ಪಾಸುಗಳನ್ನು ಪರಿಚಯಿಸಲಾಗಿದೆ ಎಂದು ನಗರ ಖಾಸಗಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ತಿಳಿಸಿದ್ದಾರೆ.
ಅವರು ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಂಗಳೂರಿನ ಉಳ್ಳಾಲ ಬೆಲ್ಟ್ನಲ್ಲಿ ಬಸ್ ಸೇವೆಗಳನ್ನು ಉತ್ತಮಗೊಳಿಸಲು ಬಸ್ ನಿರ್ವಾಹಕರ ಜೊತೆಯಲ್ಲಿ ಮಾರ್ಗ 42 ಮತ್ತು 44 ಬಸ್ಗಳಲ್ಲಿ ಚಲೋ ಡಿಜಿಟಲ್ ಪಾಸುಗಳು ಮತ್ತು ಲೈವ್ ಟ್ರ್ಯಾಕಿಂಗ್ ಅನ್ನು ಡಿಜಿಟಲ್ ಬಸ್ಗಳ ನೇತೃತ್ವದ ಮೂಲಕ ಘೋಷಿಸಲಾಗಿದೆ. ತಲಪಾಡಿಯಲ್ಲಿ ಇಂದು ಈ ಪಾಸ್ ಗೆ ಚಾಲನೆ ನೀಡಲಾಯಿತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಶ್ವತ್ಥಾಮ ಹೆಗ್ಡೆ, ವಿ.ಕೆ. ಪುತ್ರನ್, ಸಂದೇಶ್ , ಪ್ರದೀಪ್ ಉಪಸ್ಥಿತರಿದ್ದರು.