ಸಾಲ್ಮರ ಹರ್ಬಲ್ ಸಂಸ್ಥೆಯ ನೂತನ ಉತ್ಪನ್ನ ಬಿಡುಗಡೆ

ಪುತ್ತೂರು: ಸಾಲ್ಮರ ಆಯುರ್ವೇದ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ನ ಸಂಶುದ್ದೀನ್ ಸಾಲ್ಮರ ಅವರು ತಮ್ಮ ನಿಸ್ವಾರ್ಥ ಸೇವೆಯೊಂದಿಗೆ ಹಲವಾರು ಯಶಸ್ವಿ ಶಿಬಿರಗಳನ್ನು ನಡೆಸಿಕೊಂಡು ಬರುವ ಮೂಲಕ ಸಾವಿರಾರು ಮಂದಿಗೆ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದು ಬೆಂಗಳೂರಿನ ರುದ್ರಾಕ್ಷ ಫೌಂಡೇಶನ್ ಸ್ಥಾಪಕ ಸದ್ಗುರು ಜೈಪ್ರಕಾಶ್ ಗುರೂಜಿ ಹೇಳಿದರು.

ಅವರು ಸಾಲ್ಮರ ಆಯುರ್ವೇದ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪುತ್ತರ್ದ ಮುತ್ತು ಲಯನ್ಸ್ ಕ್ಲಬ್ ಕಾವು ಮತ್ತು ಕಾವು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಪುತ್ತೂರಿನ ಪುರಭವನದಲ್ಲಿ ನಡೆದ ಉಚಿತ ನಾಟಿ ವೈದ್ಯಕೀಯ ಶಿಬಿರ, ಸಾಲ್ಮರ ಹರ್ಬಲ್ ಸಂಸ್ಥೆಯ ನೂತನ ಉತ್ಪನ್ನ ಬಿಡುಗಡೆ ಹಾಗೂ ಸಾಲ್ಮರ ನೊಬೆಟ್ ಮ್ಯಾನ್ ಅವಾರ್ಡ್-2022 ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸ್ಪರ್ಧೆ ಮತ್ತು ಪ್ರಾಮಾಣಿಕತೆಯೊಂದಿಗೆ ಉತ್ತಮ ಗುಣಮಟ್ಟವನ್ನು ಕಾಯ್ದುಕೊಂಡಲ್ಲಿ ಯಶಸ್ವು ಸಾಧ್ಯವಿದೆ ಎಂದರು.

ಇದೆ ಸಂದರ್ಭದಲ್ಲಿ ಸನ್ಮಾನ ಮತ್ತು ಸಾಲ್ಮರ ನೊಬೆಟ್ ಮ್ಯಾನ್ ಅವಾರ್ಡ್-2022 ಪ್ರಶಸ್ತಿ ಪ್ರಧಾನವನ್ನು ಸದ್ಗುರು ಜೈಪ್ರಕಾಶ್ ಗುರೂಜಿ, ಕೆ. ಸೀತಾರಾಮ ರೈ ಸವಣೂರು ಮತ್ತು ಮುಹಮ್ಮದ್ ಶರೀಫ್ ಸಮಾಜ ಸೇವಕರು ಇವರಿಗೆ ನೀಡಲಾಯಿತು.

ಬಳಿಕ ಉಚಿತವಾಗಿ ನಾಟಿ ವೈದ್ಯಕೀಯ ಶಿಬಿರ ಮತ್ತು ಮದ್ದುಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ನಾಟಿ ವೈದ್ಯ ಸಂಶುದ್ದೀನ್ ಸಾಲ್ಮರ, ಲಯನ್ಸ್ ಕ್ಲಬ್ ಅಧ್ಯಕ್ಷ ಪವನ್ರಾಜ್, ಇಸಾಕ್ ಸಾಲ್ಮರ,ದ.ಕ.ಜಿ.ಪ.ಮಾಜಿ ಸದಸ್ಯ ಎಂ.ಎಸ್ ಮಹಮ್ಮದ್, ನಿವೃತ್ತ ಅಧಿಕಾರಿ ಇಬ್ರಾಹಿಂ ಗೂನಡ್ಕ, ನ್ಯಾಯವಾದಿ ನೂರುದ್ದಿನ್ ಸಾಲ್ಮರ, ಪುತ್ತರ್ದ ಮುತ್ತು ಲಯನ್ಸ್ ಕ್ಲಬ್ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಬನ್ನೂರು, ಸಂಪಾಜೆ ಗ್ರಾಪಂ ಸದಸ್ಯ ಸವಾದ್ ಗೂನಡ್ಕ ಮತ್ತಿತರರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?