ಸಂಗಬೆಟ್ಟು ಸಿದ್ಧಕಟ್ಟೆ ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯೀ ದೇವಸ್ಥಾನ ಜೀರ್ಣೋದ್ಧಾರ

ಬಂಟ್ವಾಳ: ಪಣಂಬೂರು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯೀ ದೇವಸ್ಥಾನ ಸಂಗಬೆಟ್ಟು ಸಿದ್ಧಕಟ್ಟೆ ಇಲ್ಲಿನ ದೇವಳದ ಸಮಗ್ರ ಜೀರ್ಣೋದ್ಧಾರದ ಪ್ರಯುಕ್ತ ದೇವರ ಬಾಲಾಲಯ ಪ್ರತಿಷ್ಠೆ ಮಾ. 25ರಂದು ಮೊದಲ್ಗೊಂಡು ಮಾ.27ರ ವರೆಗೆ ವಾಸ್ತು ಹೋಮ, ವಾಸ್ತು ಪೂಜೆ, ವಾಸ್ತು ಬಲಿ, ರಣೋಘ್ನ ಹೋಮ, ಗಣಹೋಮ, ವಿವಿಧ ಪ್ರಾಯಶ್ಚಿತ್ತ ಹೋಮಗಳು, ಶ್ರೀ ವೀರಭದ್ರ, ಶ್ರೀ ದುರ್ಗಾಪರಮೇಶ್ವರೀ ದೇವರು ಹಾಗೂ ಶ್ರೀ ಗಣಪತಿ ದೇವರು ಮತ್ತು ಪರಿವಾರ ದೈವ ದೇವರುಗಳಿಗೆ ಅನುಜ್ಞಾ ಕಲಶ ಹಾಗೂ ಶುಭ ಮುಹೂರ್ತದಲ್ಲಿ ದೇವರ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಶ್ರೀ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮಶ್ರೀ ಕುಡುಪು ಶ್ರೀ ನರಸಿಂಹ ತಂತ್ರಿಯವರು, ಕುಡುಪು ಶ್ರೀ ಕೃಷ್ಣರಾಜ ತಂತ್ರಿಯವರು ಹಾಗೂ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಪ್ರಭಾಕರ್, ಐಗಳ ಅವ್ರ ಪೌರೋಹಿತ್ಯದಲ್ಲಿ ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶೃದ್ಧಾಭಕ್ತಿಯಿಂದ ನೆರವೇರಿತು.

ಗಣ್ಯರಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಭಾಕರ್ ಭಟ್ ಕಲ್ಲಡ್ಕ, ತಾ.ಪಂ. ಮಾಜಿ ಸದಸ್ಯರಾದ ಪ್ರಭಾಕರ ಪಭು, ರತ್ನಕುಮಾರ್ ಚೌಟ ಇವರು ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿ ನೀಡಿ ಶುಭ ಹಾರೈಸಿದರು.

ಪ್ರತಿಷ್ಠಾ ದಿನದಂದು ದೇವಸ್ಥಾನ ತೆರವು ಗೊಳಿಸುವ ಸಾರ್ವಜನಿಕ ಮಹಾ ಕರಸೇವಾ ಕಾರ್ಯಕ್ರಮ ಆರಂಭಗೊಂಡು ದೇವಸ್ಥಾನಕ್ಕೆ ಸಂಬಂಧಪಟ್ಟ ಸಂಗಬೆಟ್ಟು-ಸಿದ್ಧಕಟ್ಟೆ, ಬೋಳಂಗಡಿ, ಪುಂಜಾಲಕಟ್ಟೆ, ಕೋಣಾಜೆ, ಅಡ್ಯಾರು ಕೊಲ್ಮಾನ್, ಕಾಟಿಪಳ್ಳ-ಕುಳಾಯಿ, ಗುರುಪುರ ಕೈಕಂಬಗಳ ಮಾಗಣೆ ಮುಖ್ಯಸ್ಥರುಗಳು ಹಾಗೂ ಸದಸ್ಯರುಗಳು ಮತ್ತು ಊರಿನ ಎಲ್ಲ ಭಗವದ್ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಚಂದ್ರಹಾಸ ಗುರಿಕಾರ್, ಪಿ.ಶ್ರೀನಿವಾಸ ಶೆಟ್ಟಿಗಾರ್ ಯಾನೇ ಸೋಮಯ ಗುರಿಕಾರ್, ಗಂಗಾಧರ ಗುರಿಕಾರ್ ಬೆಳ್ಳ ಕೋಣಾಜೆ, ಮಹಾಬಲ ಗುರಿಕಾರ್ ಹೊಕ್ಕಾಡಿಗೋಳಿ, ಮೊತ್ತೇಸರರಾದ ಮಾಧವ ಶೆಟ್ಟಿಗಾರ್ ಕೆರೆಕಾಡು, ಭೋಜ ಶೆಟ್ಟಿಗಾರ್ ಸಂಗಬೆಟ್ಟು, ಧನಂಜಯ ಶೆಟ್ಟಿಗಾರ್ ಕೃಷ್ಣಾಪುರ, ವಾಮನ ಶೆಟ್ಟಿಗಾರ್ ಕಾಶಿಪಟ್ಟ ಕ್ಷೇತ್ರದ ಮುಕ್ಕಾಲ್ಲಿಯವರುಗಳಾದ ಶೇಖರ ಶೆಟ್ಟಿಗಾರ್ ಅಮ್ಮೆಂಬಳ, ಭೋಜ ಶೆಟ್ಟಿಗಾರ್ ಸಂಗಬೆಟ್ಟು, ಪಾತ್ರಿಗಳಾದ ಮಾಧವ ಶೆಟ್ಟಿಗಾರ್, ಎಮ್ ಎಸ್ ಕೃಷ್ಣ ಶೆಟ್ಟಿಗಾರ್, ರಾಮಚಂದ್ರ ಪದ್ಮಶಾಲಿ, ಹರೀಶ ಶೆಟ್ಟಿಗಾರ್ ಮಾಡಮೆ, ಸತ್ತಿಗೆ ಪೂಜಾರಿ, ಕೇಶವ ಶೆಟ್ಟಿಗಾರ್ ಅಲ್ಲದೇ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಮೋಹನ ಶೆಟ್ಟಿಗಾರ್ ಉಜಿರೆ, ಅಧ್ಯಕ್ಷ ಗಣೇಶ ಶೆಟ್ಟಿಗಾರ್ ಬೋಳಂಗಡಿ, ಕಾರ್ಯಾಧ್ಯಕ್ಷರುಗಳಾದ ಶ್ರೀ ದಾಮೋದರ ಶೆಟ್ಟಿಗಾರ್ ಉಪ್ಪಿರ ಸಿದ್ಧಕಟ್ಟೆ, ಶ ದೇವೇಂದ್ರ ಶೆಟ್ಟಿಗಾರ್ ಕೊಂಚಾಡಿ ಮಂಗಳೂರು, ದತ್ತರಾಜ ಶೆಟ್ಟಿಗಾರ್ ಕೊಯಿಲ, ಶಎಮ್ ಜಯರಾಮ್ ಮಂಗಳೂರು, ಪ್ರಧಾನ ಕಾರ್ಯದರ್ಶಿ ಭವಾನಿಶಂಕರ ಪಿ. ಆರ್ ಕಾಟಿಪಳ್ಳ, ಕೋಶಾಧಿಕಾರಿ ಗಣೇಶ ಶೆಟ್ಟಿಗಾರ್ ಸಂಗಬೆಟ್ಟು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?