ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ : ಬಾಲಾಲಯದಲ್ಲಿ ಪ್ರತಿಷ್ಠೆ, ಕರಸೇವೆ ಆರಂಭ

ಚಿತ್ರಾಪುರದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಿದ್ಧತೆಯಲ್ಲಿದ್ದು, ಗಣಪತಿ ದೇವರು ಮತ್ತು ಧರ್ಮಶಾಸ್ತ್ರ ದೇವರ ಮೂರ್ತಿಗಳನ್ನು ಸಂಕೋಚಗೊಳಿಸಿದ ಬಳಿಕ ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯ ನಡೆಯಿತು.
ಇದಕ್ಕೆ ಪೂರ್ವಭಾವಿಯಾಗಿ ವಿವಿಧ ಹೋಮ, ಕಲಶಾಭಿಷೇಕಗಳು ನಡೆದವು. ಧೂಮಾವತಿ ದೈವವನ್ನು ಬಾಲಾಲಯದಲ್ಲಿ ಪ್ರತಿಷ್ಠಾಪಿಸುವ ಕಾರ್ಯ ನಡೆಯಿತು. ಈ ಸಂದರ್ಭ ಗೋವಿನ ಗಂಡು ಕರುವಿನಿಂದ ಮಾಡಿಬ ಹೆಂಚು ಎಳೆಸುವ ಮೂಲಕ ಕರಸೇವೆಗೆ ಸಾಂಕೇತಿಕ ಚಾಲನೆಯನ್ನು ನೀಡಲಾಯಿತು. ಜೀರ್ಣೋದ್ಧಾರ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಕೇಶವ ಸಾಲ್ಯಾನ್ ಮತ್ತು ಸಂಚಾಲಕ ಉಮೇಶ್ ಕರ್ಕೇರ ಮತ್ತು ಮತ್ಸ್ಯರಾಜ್ ಅವರು ಮಾಹಿತಿ ನೀಡಿದರು

.
ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿ ನೇತೃತ್ವದಲ್ಲಿ ನಡೆಯಿತು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಕುಡುಪು ಕೃಷ್ಣರಾಜ ತಂತ್ರಿ, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಣೇಶ್ ಹೊಸಬೆಟ್ಟು, ಕೋಶಾಧಿಕಾರಿ ಪುರುಷೋತ್ತಮ, ಅರ್ಚಕರಾದ ಕಾರ್ತಿಕ್ ಭಟ್, ಸುಬ್ರಹ್ಮಣ್ಯ ಭಟ್, ಸಮಿತಿಯ ಶಿವಾಜಿ ದೇವಾಡಿಗ, ಸುಕುಮಾರ್ ದೇವಾಡಿಗ ದೇವಿ ಪ್ರಸಾದ್ ಶೆಟ್ಟಿ, ಲೋಕೇಶ್ ಚಿತ್ರಾಪುರ ಮತ್ತಿತರರು ಉಪಸ್ಥಿತರಿದ್ದರು.