ಕಣಿಯೂರಿನಲ್ಲಿರುವ ಫಸಲು ಹಾಗೂ ಚರಾಸ್ಥಿ ಹರಾಜು : ಸ್ಥಳಕ್ಕೆ ಬಾರದ ಕಂದಾಯ ಇಲಾಖೆಯ ಅಧಿಕಾರಿಗಳು : ಸಾರ್ವಜನಿಕರಿಂದಲೇ ಹರಾಜು ನಡೆಸಲು ತೀರ್ಮಾನಿಸಿದ ರೈತ ಸಂಘ

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಸರ್ವೇ ನಂಬ್ರ 113/1 ರಲ್ಲಿರುವ ಫಸಲು ಹಾಗೂ ಚರಾಸ್ಥಿಯನ್ನು ಕಣಿಯೂರು ಗ್ರಾಮಪಂಚಾಯತ್ ಆವರಣದಲ್ಲಿ ಬಹಿರಂಗ ಹರಾಜು ಮಾಡಲು ಬೆಳ್ತಂಗಡಿ ತಹಶಿಲ್ದಾರರಾದ ಮಹೇಶ್ ರವರು ನಿದಿಪಡಿಸಿದ್ದರು.
ನಿಗದಿತ ಸಮಯಕ್ಕೆ ಕಣಿಯೂರು ಗ್ರಾಮಸ್ಥರು, ರೈತ ಸಂಘದ ಮುಖಂಡರುಗಳು ಹಾಗೂ ಕಾರ್ಮಿಕ ಸಂಘದ ಮುಖಂಡರು ಹಾಜರಿದ್ದರು.
ಆದರೇ ಕಂದಾಯ ನೀರೀಕ್ಷರಾಗಲಿ,ಗ್ರಾಮಕರಣಿಕರಾಗಲಿ ಅಥವಾ ಕಂದಾಯ ಇಲಾಖೆಯ ಯಾವುದೇ ಆಧಿಕಾರಿಗಳು ಸ್ಥಳಕ್ಕೆ ಆಗಮಿಸದಿರುವುದನ್ನು ಮನಗಂಡ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರವಿಕಿರಣ್ ಪುಣಚ ರವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಮಹಾಜರು ನಡೆಸಲು ತೀರ್ಮಾನಿಸಿದರು.

ಸಾರ್ವಜನಿಕ ಮಹಾಜರಿನಲ್ಲಿ ಮೂಡಿ ಬಂದ ವಿಚಾರಗಳು ಈ ಕೆಳಗಿನಂತಿವೆ.
1)ಕಣಿಯೂರು ಗ್ರಾಮದ ಸರ್ವೆನಂಬ್ರ 113/1 ಎಲ್ಲಿ ಬೆಳೆದಿರುವ ಅಡಿಕೆ,ತೆಂಗು,ರಬ್ಬರ್, ಗೇರು,ಚಿಕ್ಕು,ಮಾವು ಹಾಗೂ ಇನ್ನಿತರ ಬೆಳೆಗಳನ್ನು ಕಂದಾಯ ಇಲಾಖೆ ನಾಟಿ ಮಾಡಿರುವ ಬಗ್ಗೆ ಯಾವುದೇ ದಾಖಲಾತಿಗಳಿರುವುದಿಲ್ಲ.
2) ಇದರಲ್ಲಿರುವ ಕೃಷಿ ಉಳಿವಿಗೆ ಯಾವುದೇ ನೀರಾವರಿ ವ್ಯವಸ್ಥೆ ಕಲ್ಪಿಸಿದ ಪುರಾವೆ ಕಂದಾಯ ಇಲಾಖೆಯಲಿಲ್ಲ.
3)ಕೃಷಿಯನ್ನು ಅಭಿವೃದ್ಧಿಗೊಳಿಸಲು,ಯಾವುದೇ ಇಲಾಖೆ/ ವ್ಯಕ್ತಿಗೆ ಉಸ್ತುವಾರಿ ನೀಡಿದ ದಾಖಲೆ ಕಂದಾಯ ಇಲಾಖೆಯಲಿಲ್ಲ.
4)ಇದರಲ್ಲಿರು ಹೈನುಗಾರಿಕೆಗೆ ಹಟ್ಟಿ,,ಉಪ ಕಟ್ಟಡಗಳು,ಅಡಿಕೆ ಒಣಗಿಸುವ ಸಮತಟ್ಟಾದ ಅಂಗಲ ನಿರ್ಮಿಸಿದ ಬಗ್ಗೆ ಕಂದಾಯ ಇಲಾಖೆಯಲ್ಲಿ ಯಾವುದೇ ದಾಖಲೆಗಳಿಲ್ಲ.

ಈ ಬಗ್ಗೆ ಪುರಾವೆಗಳು ಹಾಗೂ ಗ್ರಾಮಸ್ಥರ ಅಭಿಪ್ರಾಯ ಈ ಕೆಳಗಿನಂತೆ ಮೂಡಿಬಂದಿದೆ.
1)ಕಣಿಯೂರು ಗ್ರಾಮದ ಸರ್ವೆನಂಬ್ರ 113/1 ರಲ್ಲಿ ನಾರಾಯಣ ರಾವ್ ಕೊಲ್ಲಾಜೆ ಇವರ ಮಕ್ಕಳಾದ ಆದಿತ್ಯ ಎನ್.ರಾವ್ ಹಾಗೂ ಅಶ್ವೀನ್.ಎನ್.ರಾವ್ ಅವರ ಹಿರಿಯರ ಕೃಷಿ ಬಗ್ಗೆಗಿನ ಉತ್ತೇಜನದಿಂದ ವಿದ್ಯಾರ್ಥಿ ಜೀವನದಲ್ಲೇ ಅಡಿಕೆ,ತೆಂಗು, ರಬ್ಬರ್,ಚಿಕ್ಕುಮಾವು ಹಾಗೂ ಇನ್ನಿತರ ಕೃಷಿ ಕೃತಾವಳಿಗಳನ್ನು ಮಾಡಿಕೊಂಡಿರುತ್ತಾರೆ. ಹಾಗೂ ಅವರ ಹಿರಿಯರ ಕಾಲದಿಂದಲೇ 7-50 ಎಕ್ರೆ ಜಾಗಕ್ಕೆ ಸಂಪೂರ್ಣ ಅಗಳು ರಚಿಸಿಕೊಂಡು ಸ್ವಾಧೀನಹೊಂದಿಕೊಂಡಿರುತ್ತಾರೆ.
2)ಕೃಷಿ ಅಭಿವೃದ್ಧಿಗೆ ನೀರಾವರಿಯನ್ನು ಅವರ ತಂದೆ ನಾರಸಯಣ ರಾವ್ ಕೊಲ್ಲಾಜೆಯವರ ಹೆಸರಿನಲ್ಲಿರುವ ಪಂಪು ಸೆಟ್ ನಂಬ್ರ ಃIP3145 ಹಾಗೂ ಃIP1935 ಇದನ್ನು ಬಳಸಿಕೊಳ್ಳುತ್ತಿದ್ದಾರೆ.
3)ಈ ಸರಕಾರಿ ಜಮೀನನ್ನು ಮಂಜೂರು ಮಾಡಲು ಅರ್ಜಿ ನಮೂನೆ 57 ರಲ್ಲಿ ಅರ್ಜಿಯನ್ನು ಬೆಳ್ತಂಗಡಿ ತಹಶಿಲ್ದಾರರಿಗೆ ನೀಡೀರುತ್ತಾರೆ.


ಈಗಿನ ನಿಟ್ಟಿನಲ್ಲಿ ಬೆಳ್ತಂಗಡಿ ತಹಶಿಲ್ದಾರರು ಯುವ ರೈತರನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಜಮೀನನ್ನು ತಕ್ಷಣವೇ ಈ ಯುವಕರಿಗೆ ಮಂಜೂರು ಮಾಡಿ ಕೊಳ್ಳಲು ಕಣಿಯೂರು ಗ್ರಾಮಸ್ಥರು ಹಾಗೂ ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್, ಜಿಲ್ಲಾ ಪ್ರಧಾನ ಕಾರ್ಮಿಕ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ,ಕೋಷಾಧಿಕಾರಿ ಸುಧಾಕರ ಜೈನ್ ಕೊಕ್ರಾಡಿ,ಕಾರ್ಯದರ್ಶಿ ಡಿ.ಕೆ.ಶಾಹುಲ್ ಹಮೀದ್, ಸದಾನಂದ ಶೀತಲ್,ಸುರೇಂದ್ರ ಕೋರ್ಯ,ರಮಾನಂದ ಮೂರ್ಜೆ ಕಾರ್ಮಿಕ ಮುಖಂಡರಾದ ರಾಮಣ್ಣ ವಿಟ್ಲ ಹಾಗೂ ಸಾರ್ವಜನಿಕ ಮಹಾಜರಿನಲ್ಲಿಸೇರಿದ್ದ ಜನತೆ ಒತ್ತಾಯಿಸಿತು.
ಬಳಿಕ ಈ ಸಾರ್ವಜನಿಕ ಮಹಾಜರನ್ನು ಬೆಳ್ತಂಗಡಿ ಉಪ ತಹಶಿಲ್ದಾರರ ಮೂಲಕ ತಹಶಿಲ್ದಾರರಿಗೆ ತಲುಪಿಸಲಾಯಿತು.