ಪುತ್ತೂರು ಮಹಾಲಿಂಗೇಶ್ವರ ಜಾತ್ರಾಮಹೋತ್ಸವ : ಗೊನೆ ಮುಹೂರ್ತ

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ಸಲುವಾಗಿ ಏ.1ರಂದು ಗೊನೆ ಮುಹೂರ್ತ ನಡೆಯಿತು.ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಪ್ರಧಾನ ಅರ್ಚಕರೂ ಆಗಿರುವ ವಿ.ಎಸ್ ಭಟ್ ಅವರು ಗೊನೆ ಮುಹೂರ್ತ ನೆರವೇರಿಸಿದರು.

puttur mahalingeshwara

ಬೆಳಿಗ್ಗೆ ಪೂರ್ವ ಶಿಷ್ಟಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಬಳಿಕ ವಾದ್ಯದೊಂದಿಗೆ ದೇವಳದ ರಥ ಬೀದಿಯ ಮೂಲಕ ದೇವಳದ ಎದುರು ಭಾಗದ ಎಡಭಾಗದಲ್ಲಿರುವ ಕಂಬಳಕೋಡಿ ಮೋನಪ್ಪ ಸಪಲ್ಯರವರ ಮನೆಯ ತೋಟದಿಂದ ಗೊನೆಗೆ ಪೂಜೆ ನೆರವೇರಿಸಿ ಮುಹೂರ್ತ ಮಾಡಲಾಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರೂ ಪ್ರಧಾನ ಅರ್ಚಕರೂ ಆಗಿರುವ ವೇ ಮೂ. ವಿ.ಎಸ್.ಭಟ್‍ರವರು ಗೊನೆ ಮುಹೂರ್ತ ನಡೆಸಿಕೊಟ್ಟರು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಸಹಕರಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ಸಮಿತಿ ಸದಸ್ಯರಾದ ಶೇಖರ್ ನಾರಾವಿ, ರಾಮ್ ದಾಸ್ ಗೌಡ, ರವೀಂದ್ರನಾಥ ರೈ ಬಳ್ಳಮಜಲು, ವೀಣಾ ಬಿ.ಕೆ, ಡಾ.ಸುಧಾ ಎಸ್ ರಾವ್, ಬಿ ಐತ್ತಪ್ಪ ನಾಯ್ಕ, ರಾಮಚಂದ್ರ ಕಾಮತ್,ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ,ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?