ಶ್ರೀ ಗುರುದಾಸ್ ಸೌಹಾರ್ದ ಸಹಕಾರಿ ಸಂಘ ನಿಯಮಿತ : ಗಾಣದಪಡ್ಪುವಿನ ಗುರುಕೃಪಾ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭ

ಬಂಟ್ವಾಳ: ಶ್ರೀ ಗುರುದಾಸ್ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಶನಿವಾರ ಬಿ.ಸಿ.ರೋಡಿನ ಗಾಣದಪಡ್ಪುವಿನಲ್ಲಿರುವ ಗುರುಕೃಪಾ ಕಾಂಪ್ಲೆಕ್ಸ್‍ನಲ್ಲಿ ಶುಭಾರಂಭಗೊಂಡಿತು.
ಮಾಣಿಲ ಶ್ರೀಧಾಮದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಅವರು ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಅವರು ಆಶೀರ್ವಚನ ನೀಡಿ ನೂತನವಾಗಿ ಆರಂಭಗೊಂಡ ಸಹಕಾರಿ ಕ್ಷೇತ್ರ ಪ್ರಾಮಾಣಿಕತೆ ಹಾಗೂ ದಕ್ಷತೆಯಿಂದ ಈ ತನ್ನ ಕಾರ್ಯಕ್ಷೇತ್ರದಲ್ಲಿ ಸಾರ್ವಜನಿಕರಿಗೆ ಸೇವೆ ನೀಡುತ್ತಾ ಆರ್ಥಿಕವಾಗಿ ಸದೃಢಗೊಂಡು ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಶುಭಹಾರೈಸಿದರು.
ಪುತ್ತೂರು ವಿವೇಕಾನಂದ ವಿದ್ಯಾವಧರ್Àಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಕ್ಲಲಡ್ಕ ಸೇಫ್ ಲಾಕರ್ ಉದ್ಘಾಟಿಸಿದರು. ಅವರು ಮಾತನಾಡಿ ಹಣದ ವ್ಯವಹಾರದ ಜೊತೆ ಉತ್ತಮ ಗುಣವನ್ನು ಜೋಡಿಸಿಕೊಂಡರೆ ಸಹಕಾರಿ ಸಂಘವನ್ನು ಸ್ಥಾಪಿಸಿದ ಉದ್ದೇಶ ಜನರಿಗೆ ತಲುಪಲು ಸಾಧ್ಯವಿದೆ ಎಂದು ತಿಳಿಸಿದರು. ಶಾಸಕ ರಾಜೇಶ್ ನಾೈಕ್, ಉದ್ಯಮಿ ಶ್ರೀಪತಿ ಭಟ್ ನೂತನ ಸಹಕಾರಿ ಸಂಘಕ್ಕೆ ಶುಭ ಕೋರಿದರು.


ಕಾವಳಪಡೂರು ವ್ಯ. ಸೇ.ಸ. ಬ್ಯಾಂಕ್ ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಕಟ್ಟಡ ಮಾಲೀಕ ಸಂಜೀವ ಪೂಜಾರಿ ಗುರುಕೃಪಾ, ವೇಣೂರು ಪ್ರಾ.ಕೃ. ಪತ್ತಿನ ಸಹಕಾರಿಸಂಘದ ಅಧ್ಯಕ್ಷ ಸುಂದರ ಹೆಗ್ಡೆ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಘದ ಅಧ್ಯಕ್ಷ ಆನಂದ ಕುಲಾಲ್ ಎಡ್ತೂರ್, ಉಪಾಧ್ಯಕ್ಷ ದಿನಕರ ಮೂಲ್ಯ ಕುಂಡದಬೆಟ್ಟು ನಿರ್ದೆಶಕರಾದ ಸುರೇಶ್ ಕುಮಾರ್ ನಾವೂರು , ಪದ್ಮನಾಭ ವಿ., ಚಂದ್ರಶೇಖರ್ ಪಚ್ಚೇರು, ಸಂತೋಷ್ ಡಿಸೋಜಾ, ಸತೀಶ್ ಕುಲಾಲ್, ಅಶೋಕ್ ಕೆ., ಪ್ರಧಾನ ವ್ಯವಸ್ಥಾಪಕ ಸಂತೋಷ್ ಕುಮಾರ್ ಬಂಟ್ವಾಳ ಉಪಸ್ಥಿತರಿದ್ದರು. ನಿರ್ದೇಶಕ ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.

Related Posts

Leave a Reply

Your email address will not be published.

How Can We Help You?