ಶ್ರೀ ಮಹಾಲಿಂಗೇಶ್ವರ ಸಾನಿಧ್ಯಕ್ಕೆ ಹೊರೆಕಾಣಿಕೆ ಮೆರವಣಿಗೆ

ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಳ ಸಮಗ್ರ ಜೀರ್ಣೋದ್ಧಾರಗೊಂಡು ಇದೀಗ ಬ್ರಹ್ಮಕಲಶೋತ್ಸವದ ಹೊಸ್ತಿಲಲ್ಲಿರುವ ಶ್ರೀದೇವರಿಗೆ ಹೆಜಮಾಡಿ ಶ್ರೀ ವನದುರ್ಗಾ ಬ್ರಹ್ಮಸ್ಥಾನದ ವತಿಯಿಂದ ಪಾಕ ತಯಾರಿಕಾ ಪರಿಕರ ಹಾಗೂ ಶ್ರೀ ದೇವರ ರಜತ ಕವಚವನ್ನು ನೂರಾರು ಮಂದಿ ಭಕ್ತಾಧಿಗಳು ಪಾಲ್ಗೊಂಡ ಭವ್ಯ ಮೆರವಣಿಗೆಯಲ್ಲಿ ದೇವಳಕ್ಕೆ ಅರ್ಪಿಸಲಾಯಿತು.

ಈ ಅದ್ಧೂರಿಯ ಮರವಣಿಗೆಯಲ್ಲಿ ಸ್ಥಳೀಯ ಜನಹಿತ ವ್ಯಾಯಾಮ ಶಾಲಾ ಸದಸ್ಯರಿಂದ ತಾಲಿಮು, ಗೊಂಬೆ ಕುಣಿತ, ಭಜನಾ ಕುಣಿತ, ವಿವಿಧ ಟ್ಯಾಬ್ಲೋಗಳು ಗಮನ ಸೆಳೆದವು, ಈ ಬಗ್ಗೆ ಮಾಹಿತಿ ನೀಡಿದ ಬ್ರಾಹ್ಮಣ ಸಮಾಜದ ಪ್ರಮುಖರಾದ ಹರಿಭಟ್ ಮಾತನಾಡಿ, ಗ್ರಾಮ ದೇವರ ವಿಜ್ರಂಬಣೆಯ ಬ್ರಹ್ಮಕಲಶೋತ್ಸವದ ಈ ಶುಭ ಗಳಿಗೆಯಲ್ಲಿ ಶ್ರೀ ವನದುರ್ಗಾ ಬ್ರಹ್ಮ ಸ್ಥಾನದ ಮೂಲಕ ಕೊಡ ಮಾಡಿದ ಪಾಕ ತಯಾರಿಕ ಪರಿಕರ , ದೇವರ ರಜತ ಕವಚ ಸಹಿತ ವಿವಿಧ ವಸ್ತು ರೂಪದ ವಸ್ತುಗಳನ್ನು ಹೊರೆಕಾಣಿಕೆ ರೂಪದಲ್ಲಿ ಅರ್ಪಿಸುತ್ತಿದ್ದು, ಈ ಭವ್ಯ ಮೆರವಣಿಗೆ ಶ್ರೀ ವನದುರ್ಗ ಬ್ರಹ್ಮಸ್ಥಾನದಿಂದ ಹೊರಟು ಗ್ರಾಮ ದೇಗುಲ ಸೇರಲಿದೆ ಎಂದರು.

ಈ ಸಂದರ್ಭ ಪ್ರಮುಖರಾದ ಪ್ರಕಾಶ್ ರಾವ್, ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಸಹಿತ ವಿವಿಧ ಸಮಾಜದ ಅನೇಕ ಗಣ್ಯರು ಪಾಲ್ಗೊಂಡಿದ್ದರು.