ಬೆದ್ರಾಳ ಸೇತುವೆ ಬಳಿ ಪರಿಸರ ಮಾಲಿನ್ಯ : ಕೊಳೆತು ದುರ್ನಾತ ಬೀರುತ್ತಿರುವ ತ್ಯಾಜ್ಯ

ಪುತ್ತೂರು :ಪುತ್ತೂರು ನಗರದ ಹೊರವಲಯದ ಕೆಮ್ಮಿಂಜೆ ಗ್ರಾಮದ ಬೆದ್ರಾಳ ಹೊಳೆಯ ಸೇತುವೆಯ ಕೆಳಗಡೆ ಹಾಗೂ ಕೆಮ್ಮಿಂಜೆ ಕಡೆಯಿಂದ ಪುತ್ತೂರು ಮೂಲೆಯಾಗಿ ಬೆದ್ರಾಳದ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ಭಾಗದಲ್ಲಿ ಹಸಿಮೀನು,ಕೋಳಿತ್ಯಾಜ್ಯ ಮತ್ತಿತರ ದುವರ್?ಸನೆಯುಕ್ತ ತ್ಯಾಜ್ಯಗಳು ತುಂಬಿ ಕೊಳೆಯುತ್ತಿದ್ದು, ಇಲ್ಲಿಂದ ಬೀರುವ ದುವರ್?ಸನೆ ಪರಿಸರದ ಮಂದಿಯ ನೆಮ್ಮದಿ ಕೆಡಿಸಿದೆ. ಈ ಭಾಗದ ರಸ್ತೆಯಲ್ಲಿ ಸಂಚರಿಸುವ ಮಂದಿ ಮೂಗು ಮುಚ್ಚಿಕೊಂಡು ಹೋಗಬೇಕಾಗಿ ಬಂದಿದ್ದು, ಇಲ್ಲಿಗೆ ಸೇರುವ ಬೀದಿ ನಾಯಿಗಳ ಉಪಟಳದಿಂದಾಗಿ ಪರಿಸರದ ಮಂದಿ ಆತಂಕ ಪಡುವಂತಾಗಿದೆ.
ಸುಬ್ರಹ್ಮಣ್ಯ ಮಂಜೇಶ್ವರ ಅಂತರ್ ರಾಜ್ಯ ರಸ್ತೆಯ ಬೆದ್ರಾಳ ಸೇತುವೆ ಬಳಿ ಕೊಳಕು ವಾತಾವರಣ ನಿಮರ್?ಣವಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಪ್ರಸ್ತತ ಅಲ್ಪ ಪ್ರಮಾಣದಲ್ಲಿರುವ ಹೊಳೆ ನೀರಿನಲ್ಲಿ ಕೋಳಿ, ಹಸಿಮೀನು, ಮಾಂಸ ತ್ಯಾಜ್ಯಗಳು,ತರಕಾರಿ ತ್ಯಾಜ್ಯಗಳು, ಬಳಕೆ ಮಾಡಿದ ಪ್ಲಾಸ್ಟಿಕ್ ತ್ಯಾಜ್ಯಗಳು,ನಿರುಪಯುಕ್ತ ಆಹಾರ ಪದಾರ್ಥಗಳು ಕೊಳೆತು ನಾರುತ್ತಿದ್ದು,ಇಲ್ಲಿಂದ ಬೀರುವ ದುವರ್?ಸನೆ ಇಡೀ ಪರಿಸರವನ್ನು ಕೆಡಿಸುತ್ತಿದೆ.


ಸುಬ್ರಹ್ಮಣ್ಯ -ಮಂಜೇಶ್ವರ ರಸ್ತೆಗೆ ಕೆಮ್ಮಿಂಜೆಯಿಂದ ಪುತ್ತೂರು ಮೂಲೆಯಾಗಿ ಸಂಪರ್ಕ ಕಲ್ಪಿಸುವ ರಸ್ತೆ ಭಾಗದಲ್ಲಿಯೂ ಇದೇ ಕೊಳಕು ಸ್ಥಿತಿ ನಿರ್ಮಾಣವಾಗಿದೆ. ಈ ಸಂಪರ್ಕ ರಸ್ತೆಯು ತೋಡು ದಾಟುವ ಭಾಗದಲ್ಲಿ ಮಳೆನೀರು ತುಂಬಿಕೊಂಡಿದ್ದು,ಅದೇ ಭಾಗದಲ್ಲಿ ಕೊಳೆತ ತ್ಯಾಜ್ಯಗಳು ಕೂಡ ರಾಶಿ ಬಿದ್ದು ಕೊಳೆಯುತ್ತಿದೆ. ಅಕ್ಕಪಕ್ಕದ ಈ ಎರಡು ಕಡೆಗಳಲ್ಲಿಯೂ ತ್ಯಾಜ್ಯ ತುಂಬಿ ಕೊಳೆಯುತ್ತಿರುವುದರಿಂದ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರು ಮೂಗುಮುಚ್ಚಿಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕೊಳೆಯುತ್ತಿರುವ ಹಸಿಮೀನು, ಕೋಳಿ, ಮಾಂಸ ತ್ಯಾಜ್ಯಗಳ ದುವರ್?ಸನೆ ಇಡೀ ಪರಿಸರವನ್ನು ವ್ಯಾಪಿಸುತ್ತಿದ್ದು, ಇದಕ್ಕಾಗಿ ಈ ಭಾಗದಲ್ಲಿ ಸೇರುವ ಬೀದಿ ನಾಯಿಗಳಿಂದಾಗಿ ಜನತೆಗೆ ವಿಪರೀತ ಸಮಸ್ಯೆಯಾಗುತ್ತಿದೆ. ಬೀದಿ ನಾಯಿಗಳ ಬಾಧೆಯಿಂದಾಗಿ ಮಕ್ಕಳಂತೂ ಈ ಭಾಗದಲ್ಲಿ ಸಂಚರಿಸುವಂತಿಲ್ಲ. ಅಲ್ಲಿ ಬಿದ್ದಿರುವ ಮಾಂಸ ತ್ಯಾಜ್ಯಗಳ ಚೀಲಗಳನ್ನು ನಾಯಿಗಳು ಎಳೆದುಕೊಂಡು ಹೋಗಿ ಸಿಕ್ಕಲೆಲ್ಲಾ ಹಾಕುತ್ತಿರುವುದರಿಂದ ಪರಿಸರಕ್ಕೇ ಬಾಧೆಯಾಗುತ್ತಿದೆ ಎಂಬುವುದು ಆ ಭಾಗದ ಮಂದಿಯ ಅಳಲು. ಇದೀಗ ಎರಡು-ಮೂರು ಬಾರಿ ಮಳೆಯಾಗಿರುವುದರಿಂದ ಮಳೆನೀರಿನೊಂದಿಗೆ ತ್ಯಾಜ್ಯಗಳು ಕೊಳೆಯುತ್ತಿದ್ದು, ಈ ಭಾಗ ಸಾಂಕ್ರಾಮಿಕ ರೋಗ ಹರಡುವ ಕೇಂದ್ರವಾಗಿ ಮಾಪರ್?ಡು ಹೊಂದುವುದರಲ್ಲಿ ಸಂಶಯವಿಲ್ಲ ಎಂಬವುದು ಅಲ್ಲಿನ ಮಂದಿಯ ಅಭಿಪ್ರಾಯ.
ಕಳವಾದ ಸಿಸಿ ಕ್ಯಾಮರಾ !
ಮಳೆಗಾಲದಲ್ಲಿ ಹೊಳೆನೀರಿನಲ್ಲಿ ತ್ಯಾಜ್ಯಗಳು ಕೊಚ್ಚಿಕೊಂಡು ಹೋಗುತ್ತಿರುವುದರಿಂದ ಸಮಸ್ಯೆ ಇಲ್ಲ. ಆದರೆ ಪ್ರತೀ ವರ್ಷ ಬೇಸಿಗೆ ಕಾಲದಲ್ಲಿ ಇಲ್ಲಿ ತ್ಯಾಜ್ಯ ಸಮಸ್ಯೆ ಎದುರಾಗುತ್ತಿದೆ. ನರಿಮೊಗರು ಕಡೆಯವರೇ ಹೆಚ್ಚಾಗಿ ಇಲ್ಲಿಗೆ ಮಾಂಸ ತ್ಯಾಜ್ಯಗಳನ್ನು ತಂದು ಎಸೆಯುತ್ತಿದ್ದಾರೆ. ಆದರೆ ತ್ಯಾಜ್ಯ ತಂದು ಎಸೆಯುವವರನ್ನು ಪತ್ತೆ ಮಾಡಿ ದಂಡ ವಿಧಿಸುವ ಕೆಲಸವೂ ನಡೆಯುತ್ತಿಲ್ಲ. ಈ ಭಾಗದಲ್ಲಿ ತ್ಯಾಜ್ಯ ಎಸೆಯುವವರ ಪತ್ತೆಗಾಗಿ ಈ ಹಿಂದೆ ನಗರಸಭೆಯ ವತಿಯಿಂದ ಅಳವಡಿಸಿದ್ದ ಸಿಸಿ ಕ್ಯಾಮರಗಳು ಕೂಡ ಕಾಣೆಯಾಗಿವೆ.

ಚರ್ಚಿಗೆ ಹೋಗುವವರಿಗೂ ಸಮಸ್ಯೆ…..
ಕೊಳೆತ ತ್ಯಾಜ್ಯಗಳು ತುಂಬಿಕೊಂಡಿರುವ ಬೆದ್ರಾಳ ಸೇತುವೆಯ ಪಕ್ಕದಲ್ಲೇ ಮರೀಲ್ ಸೆಕ್ರೇಡ್ ಹಾರ್ಟ್ ಚರ್ಚಿಗೆ ಹೋಗುವ ರಸ್ತೆ ಇದೆ. ಅಲ್ಲದೆ ಈ ಪರಿಸರದಲ್ಲಿ ಹಲವಾರು ಮನೆಗಳಿವೆ. ಆದರೆ ಇದೀಗ ಸೇತುವೆಯ ಬಳಿ ರಾಶಿಬಿದ್ದು ಕೊಳೆಯುತ್ತಿರುವ ತ್ಯಾಜ್ಯಗಳು ದುವರ್?ಸನೆ ಬೀರುತ್ತಿರುವುದರಿಂದ ಚರ್ಚಿಗೆ ಹೋಗುವವರಿಗೂ ಹಾಗೂ ಆ ಪರಿಸರದ ಜನತೆಗೂ ತೀರಾ ಸಮಸ್ಯೆ ಆಗುತ್ತಿದೆ. ಕೊಳೆಯುತ್ತಿರುವ ಮಾಂಸ ತ್ಯಾಜ್ಯಗಳಿಗಾಗಿ ಸೇರುವ ಬೀದಿ ನಾಯಿಗಳ ಉಪಟಳವೂ ಜಾಸ್ತಿಯಾಗುತ್ತಿದ್ದು, ಬೀದಿ ನಾಯಿಗಳಿಂದಾಗಿ ಮಕ್ಕಳಿಗೆ ಸಮಸ್ಯೆಯಾಗುವ ಸಂಭವವಿದೆ. ಸಂಬಂಧಪಟ್ಟವರು ಈ ಭಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ತ್ಯಾಜ್ಯ ಎಸೆಯುವವರನ್ನು ಪತ್ತೆ ಮಾಡಿ ಸೂಕ್ತಕ್ರಮ ಕೈಗೊಳ್ಳಬೇಕು- ಲಿಯೋ ಕ್ರಾಸ್ತಾ. ಸ್ಥಳೀಯ ನಿವಾಸಿ.

ತೋಡು ದಾಟುವುದೇ ಕಷ್ಟ…
ಕೆಮ್ಮಿಂಜೆಯಿಂದ ಪುತ್ತೂರಮೂಲೆಯಾಗಿ ಬೆದ್ರಾಳಕ್ಕೆ ಸಂಪರ್ಕ ಕಲ್ಪಿಸುವ ಭಾಗದಲ್ಲಿ ತೊಡಿದ್ದು, ಆ ತೋಡಿನಲ್ಲಿ ತುಂಬಿಕೊಂಡಿರುವ ನೀರು ದಾಟಿಕೊಂಡೇ ನಾವು ಸಂಚರಿಸಬೇಕಾಗಿದೆ. ಅದೇ ಭಾಗದಲ್ಲಿ ಕೊಳೆತ ತ್ಯಾಜ್ಯಗಳು ಕೂಡ ತುಂಬಿಕೊಂಡಿರುವುದರಿಂದ ಬಹಳಷ್ಟು ಸಮಸ್ಯೆಗಳಾಗುತ್ತಿದೆ. ಮೂಗು ಮುಚ್ಚಿಕೊಂಡೇ ಹೋಗಬೇಕಿದೆ. ಆ ತೋಡಿನ ಭಾಗದಲ್ಲಿರುವ ತ್ಯಾಜ್ಯಗಳನ್ನು ತೆರವುಗೊಳಿಸಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಹಾಗೂ ರಸ್ತೆ ಭಾಗದಲ್ಲಿನ ನೀರು ತುಂಬಕೊಂಡಿರುವ ಹೊಂಡವನ್ನು ಮುಚ್ಚಿ ಸರಿಪಡಿಸುವ ಹಾಗೂ ಪ್ರಸ್ತುತವಿರುವ ಮಣ್ಣ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಕೆಲಸ ಆಗಬೇಕು-ರಾಕೇಶ್ ಭಂಡಾರಿ.ಸ್ಥಳೀಯ ನಿವಾಸಿ.

ಹಾಗಾಗಿ ಇಲ್ಲಿ ತ್ಯಾಜ್ಯ ಸುರಿಯುವ ಕೃತ್ಯ ನಿರಂತರವಾಗಿ ನಡೆಯುತ್ತಿದೆ. ಸಂಬಂಧಪಟ್ಟವರು ಇನ್ನಾದರೂ ಇಲ್ಲಿ ತ್ಯಾಜ್ಯ ಸಮಸ್ಯೆ ನಿವಾರಣೆಗಾಗಿ ಸೂಕ್ತಕ್ರಮ ಕೈಗೊಳ್ಳಬೇಕು ಎಂಬುವುದು ಸಾರ್ವಜನಿಕರ ಆಗ್ರಹ.

Related Posts

Leave a Reply

Your email address will not be published.

How Can We Help You?