ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಉಡುಪಿ: ನಿವೃತ್ತ ಪೊಲೀ ಸರಿಗೆ ಜಿಲ್ಲೆಯ ಪ್ರಮುಖ ಆಸ್ಪತ್ರೆಗಳಲ್ಲಿ ಆರೋಗ್ಯ ಭಾಗ್ಯ ಯೋಜನೆಯ ಪ್ರಯೋಜನ ಲಭಿಸುವಂತೆ ಆಗಬೇಕು ಎಂದು ಕರಾವಳಿ ಕಾವಲು ಪಡೆಯ ನಿವೃತ್ತ ಸಹಾಯಕ ಪೊಲೀಸ್ ಉಪನೀರಿಕ್ಷಕರಾದ ಮ್ಯಾಥ್ಯೂ ಆರ್ಚಿಬಾಲ್ಡ್ ಡಿಸೋಜಾ ಅವರು ಆಗ್ರಹಿಸಿದರು.ಅವರು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪೊಲೀಸ್ ಕವಾಯತು ಮೈದಾನದಲ್ಲಿ ಪೆÇಲೀಸ್ ಕಲ್ಯಾಣ ಮತ್ತು ಧ್ವಜ ದಿನಾಚರಣೆಯಲ್ಲಿ ಭಾಗವಹಿಸಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ನಿವೃತ್ತಪೊಲೀಸ್ಸರಿಗೆ ಆರೋಗ್ಯ ಭಾಗ್ಯ ಯೋಜನೆಯಲ್ಲಿ ಕೆಲವೊಂದು ನಿಗದಿತ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ದೊರೆಯುತ್ತಿದ್ದು ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಬೇಕು ಎಂದಲ್ಲಿ ಅದು ಸಾಧ್ಯವಾಗುವುದಿಲ್ಲ ಈ ನಿಟ್ಟಿನಲ್ಲಿ ಪೆÇಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸುವಂತೆ ಮನವಿ ಮಾಡಿದರು. ಪೊಲೀಸ್ಸರು ಸದಾ ಕೆಲಸದಲ್ಲಿಯೇ ಇದ್ದು ಅವರಿಗೆ ಸಮಾಜದಲ್ಲಿ ಹೆಚ್ಚಿನ ಜವಾಬ್ದಾರಿ ಇದ್ದು ಒತ್ತಡದ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಸ್ವಾಗತ ಮತ್ತು ಪ್ರಸ್ತಾವನೆ ಮಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ್ ಅವರು ಮಾತನಾಡಿ ಸೇವೆಯಲ್ಲಿದ್ದು ನಿವೃತ್ತರಾಗಿರುವಪೊಲೀಸ್ಇಲಾಖೆ ಸಿಬಂದಿ ಮತ್ತು ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಪೊಲೀಸ್ ಧ್ವಜ ದಿನಾಚರಣೆಯಂದು ಧ್ವಜಗಳನ್ನು ಮಾರಾಟ ಮಾಡುವ ಮೂಲಕ ನಿಧಿಕ ಸಂಗ್ರಹಿಸಲಾಗುತ್ತದೆ. ಇದನ್ನು ನಿವೃತ್ತರ ಕ್ಷೇಮಾಭಿವೃದ್ಧಿಗೆ ಬಳಸಲಾಗುತ್ತದೆ. ಪೊಲೀಸ್ ಕಲ್ಯಾಣ ನಿಧಿಯ ಮೂಲಕ ನಿವೃತ್ತ ಪೊಲೀಸ್ ಅಧಿಕಾರಿಗಳ ಆರೋಗ್ಯಕ್ಕೆ ಸಹಾಯ ಮಾಡುತ್ತ ಬಂದಿದ್ದು 2021-22 ನೇ ಸಾಲಿನಲ್ಲಿ ಒಟ್ಟು ರೂ. 5 ಲಕ್ಷದಷ್ಟು ಹಣವನ್ನು ವ್ಯಯಿಸಲಾಗಿದೆ ಎಂದರು.

ಇದೇ ವೇಳೆ ಪೊಲೀಸ್ ಧ್ವಜವನ್ನು ಬಿಡುಗಡೆ ಮಾಡಿ ಬಳಿಕ ಮಾರಾಟ ಮಾಡಲಾಯಿತು. 7 ಪೆÇಲೀಸ್ ತಂಡಗಳು ಆಕರ್ಷಕ ಪಥ ಸಂಚಲನ ನಡೆಸಿ ಎಲ್ಲರ ಗಮನ ಸೆಳೆದವು. ನಿವೃತ್ತ ಪೊಲೀಸ್ ಅಧಿಕಾರಿ ಮತ್ತು ಸಿಬಂದಿಯವರಿಗೆ ಕಲ್ಯಾಣ ನಿಧಿಯ ಚೆಕ್ಕನ್ನು ಈ ವೇಳೆ ವಿತರಿಸಲಾಯಿತು.

ಕಾರ್ಯಕ್ರಮಲ್ಲಿ ಉಡುಪಿ ಡಿವೈಎಸ್ಪಿ ಸದಾನಂದ ನಾಯಕ್, ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್, ಕಾರ್ಕಳ ಡಿವೈಎಸ್ಪಿ ವಿಜಯಪ್ರಸಾದ್, ನಿವೃತ್ತ ಪೊಲೀಸ್ ಅಧಿಕಾರಗಳ ಸಂಘದ ಡಾ. ಪ್ರಭುದೇವ ಮಾನೆ ಹಾಗೂ ಇತರ ಪೊಲೀಸ್ ಅಧಿಕಾರಿಗಳು, ನಿವೃತ್ತ ಪೆÇಲೀಸ್ ಅಧಿಕಾರಿಗಳು ಮತ್ತು ಸಿಬಂದಿ, ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?