ಜಲಜೀವನ್ ಮಿಶನ್ನ ಕಾಮಗಾರಿಗೆ ಗುದ್ದಲಿಪೂಜೆ : ಶಾಸಕ ಡಾ. ವೈ ಭರತ್ ಶೆಟ್ಟಿ ಅವರಿಂದ ಶಿಲಾನ್ಯಾಸ

48 ಲಕ್ಷ ರೂಪಾಯಿ ಅನುದಾನದಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆ ಜಲಜೀವನ್ ಮಿಶನ್ ಇದರ ಕಾಮಗಾರಿಗೆ ಮಲ್ಲೂರು ಗ್ರಾಮದ ಫಲ್ಗುಣಿ ನದಿ ತೀರದಲ್ಲಿ ಮಂಗಳೂರು ನಗರ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಮಂಗಳವಾರ ಗುದ್ದಲಿಪೂಜೆ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಗಟ್ಟಿ, ಇಂಜಿನಿಯರ್ ಪ್ರದೀಪ್, ಪಂಚಾಯತ್ ಅಧ್ಯಕ್ಷರಾದ ಇಸ್ಮಾಯಿಲ್, ಪಂಚಾಯತ್ ಸದಸ್ಯರಾದ ಸುಮ ಶೆಟ್ಟಿ ದೆಮ್ಮಲೆ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ರೈತಾಮೋರ್ಚಾ ಅಧ್ಯಕ್ಷರಾದ ಪ್ರಕಾಶ್ ಆಳ್ವ, ಹಿಂದುಳಿದ ಮೋರ್ಚಾ ಕಾರ್ಯದರ್ಶಿ ದಯಾನಂದ, ಕಾರ್ಯಕಾರಿಣಿ ಸದಸ್ಯರಾದ ಯಶವಂತಿ ಕಜೆ, ಶಕ್ತಿ ಕೇಂದ್ರ ಪ್ರಮುಖ್ ಸೋಹನ್ ಆಳ್ವ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.