ಬೈಕ್ ಕಳ್ಳತನ : 2 ಗಂಟೆಯೊಳಗೆ ಆರೋಪಿಯ ಬಂಧನ

ಅಂಗಡಿ ಮುಂದೆ ‌ನಿಲ್ಲಿಸಿದ್ದ ಬೈಕ್ ಕಳ್ಳತನ : ಆರೋಪಿಯನ್ನು 2 ಗಂಟೆಯೊಳಗೆ ಬಂಧಿಸಿದ ಹಿರಿಯಡ್ಕ ಪೊಲೀಸರು..!!ಹಿರಿಯಡ್ಕ : ಉಡುಪಿ ಜಿಲ್ಲೆಯ ಹಿರಿಯಡ್ಕ ಸಮೀಪ ಅಂಗಡಿ ಮಾಲೀಕರ ಬೈಕ್ ನ್ನು ಕಳ್ಳನೊಬ್ಬ ಕಳ್ಳತನ ನಡೆಸಿ ಪರಾರಿಯಾದ ಘಟನೆ ನಡೆದಿದೆ.ವಿಷಯ ತಿಳಿದ ಹಿರಿಯಡ್ಕ ಪೊಲೀಸರು ಎರಡು ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯು ಶಿವಮೊಗ್ಗದ ವಿಳಾಸ ಕುಮಾರ ಎಂದು ತಿಳಿದು ಬಂದಿದೆ.ಬಂಧಿತ ಆರೋಪಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ದಿನಾಂಕ: 03/04/2022 ರಂದು ಸಂಜೆ 4:30 ಗಂಟೆಗೆ ಆತ್ರಾಡಿ ಕಾಂಪ್ಲೆಕ್ಸ್ ನ ಮಹಾದೇವಿ ಸ್ಟೋರ್ ನ ಎದುರು ಅದರ ಮಾಲಕ ಪ್ರಸನ್ನ ಕುಮಾರ್ ರವರು ತನ್ನ ಮೋಟಾರು ಸೈಕಲನ್ನು ನಿಲ್ಲಿಸಿ ಇಟ್ಟು ಅಂಗಡಿಯಲ್ಲಿ ವ್ಯಾಪಾರ ಮಾಡಿಕೊಂಡಿರುವಾಗ, ಮೋಟಾರು ಸೈಕಲನ್ನು ಒರ್ವ ವ್ಯಕ್ತಿ ಕಳವು ಮಾಡಿ ಹಿರಿಯಡ್ಕ ಕಡೆಗೆ ಹೋಗಿದ್ದು, ಈ ಬಗ್ಗೆ ಹಿರಿಯಡ್ಕ ಠಾಣೆಗೆ ಪ್ರಸನ್ನ ಕುಮಾರ್ ರವರು ದೂರು ನೀಡಿದ ಮೇರೆಗೆ ಕೂಡಲೇ ಕಾರ್ಯಪ್ರವೃತ್ತರಾದ ಹಿರಿಯಡ್ಕ ಪೊಲೀಸರು ಅಂಜಾರು ಗ್ರಾಮದ ಓಂತಿಬೆಟ್ಟು ಎಂಬಲ್ಲಿ ನಾಕಾಬಂಧಿ ನಿರ್ಮಿಸಿ ವಾಹನ ತಪಾಸಣೆ ನಡೆಸುತ್ತಿರುವಾಗ ಸಂಜೆ 17:50 ಗಂಟೆಯ ವೇಳೆಗೆ ಒರ್ವ ಮೋಟಾರ್ ಸೈಕಲ್‌ ಸವಾರ ಆತ್ರಾಡಿ ಕಡೆಯಿಂದ ಸವಾರಿ ಮಾಡಿಕೊಂಡು ಬರುತ್ತಿದ್ದು ಸದ್ರಿ ಮೋಟಾರ್‌ ಸೈಕಲ್‌ ನಂಬ್ರ ನೋಡಲಾಗಿ ಆತ್ರಾಡಿಯಲ್ಲಿ ಕಳುವಾದ KA-20-S-4217 ನೇ ನಂಬ್ರದ ಮೋಟಾರ್‌ ಸೈಕಲ್‌ ಆಗಿದ್ದು ಮೋಟಾರ್‌ ಸೈಕಲ್‌ ನಿಲ್ಲಿಸುವಂತೆ ಪೊಲೀಸರು ಸೂಚನೆ ನೀಡಿದರೂ ಆತನು ಮೋಟಾರ್‌ ಸೈಕಲ್ ನಿಲ್ಲಿಸದೆ ಪರಾರಿಯಾಗಲು ಪ್ರಯತ್ನಿಸಿದ್ದು, ಮೋಟಾರ್‌ ಸೈಕಲ್‌ನ್ನು ಪೊಲೀಸರು ಅಡ್ಡಗಟ್ಟಿ ಆತನನ್ನು ವಿಚಾರಿಸಲಾಗಿ ಆತನು ಸದ್ರಿ ಮೋಟಾರ್‌ ಸೈಕಲ್‌ನ್ನು ಆತ್ರಾಡಿ ಅಂಗಡಿಯ ಎದುರು ನಿಲ್ಲಿಸಿರುವುದನ್ನು ಕಳುವು ಮಾಡಿಕೊಂಡು ಬಂದಿರುವುದಾಗಿ ಒಪ್ಪಿಕೊಂಡಿದ್ದು, ತನ್ನ ಹೆಸರು ವಿಳಾಸ ಕುಮಾರ @ ಟೈಲರ್ ಕುಮಾರ್ (37) ತಂದೆ: ಹಾಲಪ್ಪ ವಾಸ: 7 ನೇ ಕ್ರಾಸ್, ಆದಿ ಚುಂಚನಗಿರಿ ಹೈಸ್ಕೂಲು ಬಳಿ, ಶರಾವತಿ ನಗರ ಶಿವಮೊಗ್ಗ ಜಿಲ್ಲೆ ಎಂದು ತಿಳಿಸಿರುತ್ತಾನೆ. ಮೋಟಾರು ಸೈಕಲನ್ನು ಸ್ವಾಧೀನಪಡಿಸಿಕೊಂಡು ಆಪಾದಿತನನ್ನು ಮಾಡಿರುತ್ತಾರೆ.

ಶ್ರೀ ವಿಷ್ಣುವರ್ಧನ ಐಪಿಎಸ್‌ ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ, ಶ್ರೀ ಸಿದ್ದಲಿಂಗಪ್ಪ ಕೆ.ಎಸ್.ಪಿಎಸ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ, ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತನಿರೀಕ್ಷಕರಾದ ಶ್ರೀ ಅನಂತ ಪದ್ಮನಾಭರವರ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಪಿಎಸ್‌ಐ ಶ್ರೀ ಅನಿಲ್ ಬಿ ಎಮ್, ಪ್ರೊಫೆಶನರಿ ಪಿಎಸ್ಐ ಮಂಜುನಾಥ, ರವಿ, ಎಎಸ್ಐ ಗಂಗಪ್ಪ, ಪರಮೇಶ್ವರ, ಸಿಬ್ಬಂದಿಗಳಾದ ದಯಾನಂದ ಪ್ರಭು, ರಘು, ಕಾರ್ತಿಕ್, ಸಂತೋಷ್, ಶಿವರಾಜ್, ಭೀಮಪ್ಪ ಜಯಲಕ್ಷ್ಮೀ ಬ್ರಹ್ಮಾವರ ಪೊಲೀಸ್ ಠಾಣೆಯ ಪ್ರವೀಣ , ವೆಂಕಟರಮಣ, ಅಜ್ಮಲ, ಸಂತೋಷ, ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Related Posts

Leave a Reply

Your email address will not be published.

How Can We Help You?