ತಂದೆಯನ್ನು ಕೊಲೆ ಮಾಡಿದ ಮಗ

ಮಂಜೇಶ್ವರ: ಕಾಸರಗೋಡಿಗೆ ಸಮೀಪದ ಅಡೂರು ಪಾಂಡಿಯಲ್ಲಿ ತಂದೆಯನ್ನು ಮಗ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ.
ಮೃತರನ್ನು ಪಾಂಡಿ ವೆಳ್ಳರಿಕಾಯಂ ಕಾಲೋನಿಯ ಬಾಲಕೃಷ್ಣ ನಾಯ್ಕ್ (56) ಎಂದು ಗುರುತಿಸಲಾಗಿದೆ. ಪುತ್ರ ನರೇಂದ್ರ ಪ್ರಸಾದ್ ಕೊಲೆಗೈದಿದ್ದಾನೆ. ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಜಗಳ ನಡೆದಿದ್ದು ಬಳಿಕ ಅದು ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ. ಆರೋಪಿ ಮಗನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಾಲಕೃಷ್ಣ ನಾಯ್ಕ್ ನ ದೇಹದಲ್ಲಿ ಬಲವಾದ ಗಾಯಗಳೇನೂ ಪತ್ತೆಯಾಗಿಲ್ಲ. ಆದರೆ ಮನೆಯೊಳಗಿನ ಕೊಠಡಿಯೊಂದರಲ್ಲಿ ರಕ್ತಹೆಪ್ಪುಕಟ್ಟಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ ಹಚ್ಚಲಾಗಿದೆ. ಅತಿಯಾಗಿ ಕುಡಿತದ ಚಟವಿರುವ ಬಾಲಕ್ರಷ್ಣ ಆಗಾಗ ಪತ್ನಿಯನ್ನು ಹಲ್ಲೆಗೈಯುತಿದ್ದನೆಂದು ಹೇಳಲಾಗಿದೆ. ಇದೇ ವಿಷಯದಲ್ಲಿ ತಂದೆ ಹಾಗೂ ಪುತ್ರನ ಮದ್ಯೆ ವಾಕ್ ತರ್ಕ ಉಂಟಾಗಿ ಬಳಿಕ ಅದು ಕೊಲೆಯಲ್ಲಿ ಅಂತ್ಯ ಕಂಡಿದೆ.
ಕರ್ನಾಟಕದ ಗಡಿ ಭಾಗವಾಗಿರುವ ಪಾಂಡಿಯಲ್ಲಿ ವ್ಯಾಪಕವಾಗಿ ನಕಲಿ ಮದ್ಯಗಳು ಮಾರಾಟವಾಗುತ್ತಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಕಡಿಮೆ ದರದಲ್ಲಿ ಲಭಿಸುತ್ತಿರುವ ಇಂತಹ ಮಧ್ಯಗಳು ಕಾಲನಿಯ ಮನೆ ಬಾಗಿಲಿಗೆ ತಲುಪುತ್ತಿರುವುದಾಗಿ ಹೇಳಲಾಗುತ್ತದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲಾಯಿತು.