ಪುತ್ತೂರು : ಡಾ.ಬಾಬು ಜಗಜೀವನ್ರಾಮ್ರವರ 115ನೇ ಜನ್ಮ ದಿನಾಚರಣೆ

ಹಸಿರು ಕ್ರಾಂತಿಯ ಹರಿಕಾರ, ರಾಷ್ಟ್ರನಾಯಕ ಹಾಗೂ ಭಾರತದ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನ್ರಾಮ್ ಅವರ 115ನೇ ಜನ್ಮ ದಿನಾಚರಣೆಯು ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲೂಕು ಆಡಳಿತ ಸೌಧದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆಯಿತು.ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ಅವರು ಡಾ. ಬಾಬು ಜಗಜೀವನ್ರಾಮ್ ಅವರ ಭಾವಚಿತ್ರದ ಎದುರು ದೀಪ ಪ್ರಜ್ವಲಿಸಿ ಹಾರಾರ್ಪಣೆ ಮಾಡಿ ಮಾತನಾಡಿ ಬಾಬು ಜಗಜೀವನ್ ರಾಮ್ ಅವರ ಆದರ್ಶ ಮತ್ತು ತತ್ತ್ವಗಳನ್ನು ನಾವೆಲ್ಲರೂ ಸಮಾಜದಲ್ಲಿ ಅಳವಡಿಸಿಕೊಳ್ಳುವುದಲ್ಲದೆ ಇತರರಿಗೆ ಅರಿವು ಮೂಡಿಸಲು ಮುಂದಾಗಬೇಕು. ರಾಷ್ಟ್ರಮಟ್ಟದ ಉನ್ನತ ಸ್ಥಾನದಲ್ಲಿದ್ದ ಮಹಾನ್ ವ್ಯಕ್ತಿ ಸಮಾಜದಲ್ಲಿನ ಜಾತಿ ವ್ಯವಸ್ಥೆಯ ಪಿಡುಗನ್ನು ತೊಲಗಿಸಲು ಶ್ರಮಿಸಿದ ಧೀಮಂತ ನಾಯಕ ಎಂದ ಅವರು ಅವರು ತನ್ನ ಕೊನೆಯ ತನಕ ದಲಿತರ ಹಕ್ಕುಗಳಿಗಾಗಿ ಹೋರಾಡಿದರು. ಇದರ ಜೊತೆಗೆ ಸಮಾನತೆಯನ್ನು ತಂದ ಅವರು ಸಾಮಾಜಿಕ ನ್ಯಾಯವನ್ನು ಸಂವಿದಾನದಲ್ಲಿ ಅಳವಡಿಸಲು ಪ್ರಮುಖ ಪಾತ್ರ ವಹಿಸಿದರು ಎಂದು ಹೇಳಿದರು.

ವೇದಿಕೆಯಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ರಮೇಶ್ ಬಾಬು,ರಾಮಕುಂಜ ಹಿ.ಪ್ರಾ.ಶಾಲೆಯ ಸಹಶಿಕ್ಷಕ ಮಲ್ಲೇಶಯ್ಯ,ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ,ಗ್ರೇಡ್ 2 ತಹಸೀಲ್ದಾರ್ ಬಿ.ಆರ್ ಲೊಕೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.