ತೈಲ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ : ಮಂಜೇಶ್ವರ ಸಿಪಿಐ ಮಂಡಲ ಸಮಿತಿಯಿಂದ ಪ್ರತಿಭಟನೆ

ಮಂಜೇಶ್ವರ: ಪೆಟ್ರೋಲ್,ಡೀಸೆಲ್, ಅಡುಗೆ ಅನಿಲ ಬೆಲೆಯೇರಿಕೆ ವಿರುದ್ಧ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಹೊಸಂಗಡಿ ಪ್ರಧಾನ ಅಂಚೆ ಕಚೇರಿಗೆ ಪ್ರತಿಭಟನಾ ಚಳುವಳಿ ನಡೆಯಿತು.
ಸಿಪಿಐ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಬಿ.ವಿ ರಾಜನ್ ಅಧ್ಯಕ್ಷತೆ ವಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ಪಳ್ಳಿಕಾಪ್ಪಿಳ್ ಪ್ರತಿಭಟನಾ ಚಳುವಳಿ ಉದ್ಘಾಟಿಸಿದರು. ಮಂಡಲ ಸಹ ಕಾರ್ಯದರ್ಶಿ ಎಸ್.ರಾಮಚಂದ್ರ, ಸಿಪಿಐ ಮಂಜೇಶ್ವರ ಮಂಡಲ ಸಮಿತಿ ಸದಸ್ಯರಾದ ಗಂಗಾಧರ್ ಕೊಡ್ಡೆ, ಮೋಟಾರ್ ಕಾರ್ಮಿಕರ ಯೂನಿಯನ್(ಎಐಟಿಯುಸಿ)ಜಿಲ್ಲಾ ಅಧ್ಯಕ್ಷ ಮುಸ್ತಫಾ ಕಡಂಬಾರ್, ಸಿಪಿಐ ಮಂಜೇಶ್ವರ ಲೋಕಲ್ ಕಾರ್ಯದರ್ಶಿ ಶ್ರೀಧರ್ ಮಾಡ, ಸಿಪಿಐ ಬ್ರಾಂಚ್ ಕಾರ್ಯದರ್ಶಿಗಳಾದ ಪ್ರದೀಶ್ ಬಡಾಜೆ, ಕಿರಣ್ ಮಾಡ ಮೊದಲಾದವರು ಮಾತನಾಡಿದರು. ಯತೀಶ್ ಬಿ.ಎಂ, ಉಮೇಶ್ ಪದವು, ಕ ಜಯರಾಮ್ ಬಲ್ಲಂಗುಡೇಲ್ , ಎಸ್.ರಾಮಚಂದ್ರ ಮೊದಲಾದವರು ನೇತೃತ್ವ ನೀಡಿದರು.