ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುತ್ತಿರುವ ಲಾಲ್ ಗೋಯಲ್ : ಏಷ್ಯನ್ ಭಾರತೀಯ ರಾಯಭಾರಿ ವತಿಯಿಂದ ಗೋಯಲ್ ಅವರಿಗೆ ಸನ್ಮಾನ

ಮುಂಬೈ: ಆರ್ಗನ್ ಡೊನೇಷನ್ ಇಂಡಿಯಾ ಪೌಂಡೇಶನ್‍ನ ಚೇರ್‍ಮೆನ್ ಲಾಲ್ ಗೋಯಲ್ ಅವರು ಅಂಗಾಂಗ ದಾನದ ಬಗ್ಗೆ ದೇಶಾದ್ಯಂತ ಜಾಗೃತಿಯನ್ನು ಮೂಡಿಸುತ್ತಿದ್ದು, ಅವರನ್ನು ಏಷ್ಯಾನ್ ಭಾರತೀಯ ರಾಯಭಾರಿಯಿಂದ ಸನ್ಮಾನಿಸಲಾಯಿತು. ಅಂಗಾಂಗ ದಾನ ಕ್ಷೇತ್ರದಲ್ಲಿ ಅತ್ಯುತ್ತಮ ಕೊಡುಗೆಯನ್ನು ನೀಡುತ್ತಿರುವ ಲಾಲ್ ಗೋಯಲ್ ಅವರನ್ನು ಏಷ್ಯನ್ ಭಾರತೀಯ ರಾಯಭಾರಿ ದೀಪನ್ ಶಾ ಅವರು ಮುಂಬೈನಲ್ಲಿ ಗೌರವಿಸಿದರು

ಈ ಸಂದರ್ಭದಲ್ಲಿ ದೀನ್ ಶಾ ಅವರು ಗೋಯಲ್ ಅವರಿಗೆ ಲ್ಯಾಪೆಲ್ ಪಿನ್ ಮತ್ತು ಎನ್ ಜೆ ಶೇರಿಂಗ್ ನೆಟ್‍ವರ್ಕ್ ನ್ಯೂಜೆರ್ಸಿ ಯುಎಸ್‍ಎ ಹ್ಯಾಂಡ್ ಬ್ಯಾಂಡ್‍ನ್ನು ನೀಡಿದರು.
ಇದೇ ವೇಳೆ ದೀಪನ್ ಶಾ ಮತ್ತು ಲಾಲ್ ಗೋಯಲ್ ಅವರು ಅಂಗಾಂಗ ದಾನ ಕ್ಷೇತ್ರದಲ್ಲಿ ಇತ್ತೀಚೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯ ಬಗ್ಗೆ ಚರ್ಚಿಸಿದರು.

Related Posts

Leave a Reply

Your email address will not be published.

How Can We Help You?