ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ

ಬಿಜೆಪಿ ಸರ್ಕಾರದ ಬಡಜನ ವಿರೋಧಿ ನಿಲುವನ್ನು ವಿರೋಧಿಸಿ ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ನೂರಾರು ಕಾರ್ಯಕರ್ತರು ಕಾಪು ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಈ ಸಂದರ್ಭ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಅಕ್ರಮ ಸಕ್ರಮಕ್ಕಾಗಿ 94 ಸಿ, 94 ಸಿಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದರೂ ಅವರಿಗೆ ಹಕ್ಕು ಪತ್ರ ನೀಡಲು ಸರ್ಕಾರ ವಿಫಲವಾಗಿದೆ, ಶಿರ್ವದಲ್ಲಿ ಬಡ ದಲಿತ ಮಹಿಳೆಯ ಮನೆಯನ್ನು ಅಧಿಕಾರಿಗಳ ಮೂಲಕ ಕೆಡಹುವ ಮೂಲಕ ದಲಿತ ವಿರೋಧಿ ಎಂಬವರನ್ನು ದೃಢಪಡಿಸಿದ್ದಾರೆ ಎಂದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯಕುಮಾರ ಸೊರಕೆ, ನವೀನ್ ಚಂದ್ರ ಸುವರ್ಣ, ಗಣೇಶ್ ಕೋಟ್ಯಾನ್, ಶೇಖರ್ ಹೆಜ್ಮಾಡಿ, ಶಿವಾಜಿ ಸುವರ್ಣ, ಕರುಣಾಕರ್ ಪೂಜಾರಿ, ಎಂ. ಪಿ. ಮೊಹಿದ್ದಿನಬ್ಬ, ಯಶವಂತ ಶೆಟ್ಟಿ ಮುಂತಾದವರಿದ್ದರು.

Related Posts

Leave a Reply

Your email address will not be published.

How Can We Help You?