ಮಕ್ಕಳಿಗಾಗಿ ಅಡಿಕೆ ಸುಲಿಯುವ ಪ್ರಾತ್ಯಕ್ಷಿಕೆ

ವಿಟ್ಲ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಬ ಇಲ್ಲಿ ಶಾಲಾ ಅಡಿಕೆ ತೋಟದಲ್ಲಿನ ಬೆಳೆಸಿದ ಕೊಯ್ಲಿನ ಅಡಿಕೆ ಸುಲಿಯುವ ಪ್ರಾತ್ಯಕ್ಷಿಕೆ ನಡೆಯಿತು. ಶಾಲಾ ಎಸ್ ಡಿ ಎಂ ಸಿ ಸದಸ್ಯ ಕೃಷಿಕ ಗೋಪಾಲಕೃಸ್ಣ ಭಟ್ ದಿವಾನ ರವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟು ಮಾತನಾಡಿ ಶಿಕ್ಷಣವು ಪ್ರತಿ ಹಂತದಲ್ಲೂ ಹೊಸ ಕಲಿಕೆಯೊಂದಿಗೆ ಅನುಭವವನ್ನು ಕೊಡುತ್ತದೆ ಮಗು ಅನುಭವದ ಮೂಲಕ ಕಲಿತ ವಿದ್ಯೆಯು ಜೀವನದಲ್ಲಿ ಎಂದಿಗೂ ಮರೆತು ಹೋಗಲಾರದು ಎಂದರು.ಈ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸಂಜೀವ ಮೂಲ್ಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯರು, ಮುಖ್ಯಶಿಕ್ಷಕ ನಾರಾಯಣ ಪೂಜಾರಿ, ಶಾಲಾ ಶಿಕ್ಷಕಿಯರು ,ಮಕ್ಕಳ ಪೋಷಕರು ಉಪಸ್ಥಿತರಿದ್ದರು.