ಜಮ್ಮಿಯತುಲ್ ಫಲಾಹ್ ಕೆ.ಎಸ್.ಎ ದಮ್ಮಾಮ್ ಘಟಕದಿಂದ ಬೀ ಹ್ಯೂಮನ್ ಆಸಿಫ್ ಡೀಲ್ಸ್ ಗೆ ಸನ್ಮಾನ

ಇತ್ತೀಚೆಗೆ ರೆಡ್ ಟೇಬಲ್ ಹೋಟೆಲ್ ದಮ್ಮಾಮ್ ನಲ್ಲಿ ನಡೆದ ಜಮ್ಮಿಯತುಲ್ ಫಲಾಹ್ ಕೆ.ಎಸ್. ಎ ಮತ್ತು ಏಸ್ ಫೌಂಡೇಶನ್ ಎನ್ ಜಿ. ಓ, ಮಂಗಳೂರಿನ ಬೀ ಹ್ಯೂಮನ್ ಸಂಸ್ಥೆಯ ಸ್ಥಾಪಕರಾದ ಆಸಿಫ್ ಡೀಲ್ಸ್ ರವರಿಗೆ ಸನ್ಮಾನಿಲಾಯಿತು , ಬೀ ಹ್ಯೂಮನ್ ಸಂಸ್ಥೆಯು ಕಳೆದ ಕೋವಿಡ್ ದುರಂತ ಸಂದರ್ಭದಲ್ಲಿ ಕರಾವಳಿ ಜಿಲ್ಲೆಯಲ್ಲಿ ಮಾಡಿದ ,ರಿಲೀಫ್,ಚಾರಿಟಿ ಸೇವೆಗಳನ್ನು ಪರಿಗಣಿಸಿ ಅವರನ್ನು ಸನ್ಮಾನಿಲಾಯಿತು.
ಈ ಸಭೆಯಲ್ಲಿ ಜಮ್ಮಿಯತುಲ್ ಫಲಾಹ್. ದಮ್ಮಾ ಮ್ ಘಟಕದ ಅಧ್ಯಕ್ಷರಾದ ಜ.ಷರೀಫ್ ಕಾರ್ಕಳ, ಮನ್ಸೂರ್, ಕಬೀರ್ ಲಕ್ಕಿ ಸ್ಟಾರ್, ಅಕ್ತರ್ ಮತ್ತು ಏಸ್ ಫೌಂಡೇಶನ್ ಅಧ್ಯಕ್ಷರಾದ ಅಬೂಬಕ್ಕರ್ ಸಿದ್ದೀಕ್ ಇತರ ಪದಾಧಿಕಾರಿ ಗಳಾದ ಬಶೀರ್ ಬೋಳಾರ್, ನಝೀರ್ ಹಾಗೂ ಇತರ NGO ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತ ರಿದ್ದರು.

ಜಮ್ಮಿಯತುಲ್ ಫಲಾಹ್. ದಮ್ಮಾಮ್, ಮತ್ತು ಏಸ್ ಫೌಂಡೇಶನ್ ಮಂಗಳೂರು ಇದರ ಸಹಯೋಗದೊಂದಿಗೆ ಕಾರ್ಯಕ್ರಮ ಆಯೋಜಿಸಿತ್ತು. ಬಡ ಮತ್ತು ನಿರ್ಗತಿಕರ ಶಿಕ್ಷಣ ಸಹಾಯಾರ್ಥ ವಾಗಿ ಸರ್ವ ಸಂಸ್ಥೆಗಳು ನೆರವು ನೀಡಲು ಸಹಕರಿಸ ಬೇಕೆಂದು ಮತ್ತು ಸಂಸ್ಥೆಗಳು ಪರಸ್ಪರ ಭಿನ್ನಾಭಿಪ್ರಾಯ ರಹಿತವಾಗಿ ಸಹಕರಿಸಬೇಕು , ಶಿಕ್ಷಣ ಕಾಲದ ಅನಿವಾರ್ಯ ಅಗತ್ಯತೆ ಎಂದು ಬೀ ಹ್ಯೂಮನ್ ಸಂಸ್ಥೆಯ ಪರವಾಗಿ ಆಸಿಫ್ ಡೀಲ್ಸ್ ಮನವಿ ಮಾಡಿದರು. ಸರ್ವ ಸಂಸ್ಥೆಯು ಈ ಬಗ್ಗೆ ಪೂರಕವಾಗಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.

ಏಸ್ ಫೌಂಡೇಶನ್ ಅಧ್ಯಕ್ಷರಾದ ಅಬೂಬಕರ್ ಸಿದ್ದೀಕ್ ರವರು ಸರ್ವ ಸಂಘಟನೆಗಳ ಸಹಕಾರ ಅಪೇಕ್ಷಿಸಿ ಧನ ಸಹಾಯ ಮತ್ತು ಪರೋಕ್ಷ ಸಹಾಯದ ಬಗ್ಗೆ ಮಾತನಾಡಿದರು. ನಝೀರ್ ರವರು ಏಸ್ ಸಂಸ್ಥೆಯ ಕಾರ್ಯ ವೈಖರಿಯನ್ನು ವಿವರಿಸಿದರು. ಕೊನೆಯಲ್ಲಿ ಕಬೀರ್ ರವರು ಧನ್ಯವಾದ ಸಮರ್ಪಿಸಿದರು.