ಬೈಂದೂರಿನ ಅರೆಹೊಳೆ ಹತ್ತಿರ ಅಲೋಪತಿ ನಕಲಿ ವೈದ್ಯ ಪತ್ತೆ : ಆರೋಗ್ಯ ಇಲಾಖೆಗೆ ದೂರು ನೀಡಿದರೂ ಪ್ರಯೋಜನವಿಲ್ಲ

ಬೈಂದೂರಿನ ಅರೆಹೊಳೆ ಸಮೀಪದಲ್ಲಿ ಅಲೋಪತಿಯ ನಕಲಿ ವೈದ್ಯರನ್ನು ಬೈಂದೂರಿನ ಪತ್ರಕರ್ತರ ತಂಡ ಪತ್ತೆ ಹಚ್ಚಿದ್ದಾರೆ.

ಡಾ.ಪ್ರಜಿತ್ ನಂಬಿಯಾರ್ ಆಯುರ್ವೇದ ವೈದ್ಯರಾಗಿದ್ದು, ಮೊದಲು ಯರುಕೋಣೆಯಲ್ಲಿ ಕ್ಲಿನಿಕ್ ಇಟ್ಟು ಕೊಂಡಿದ್ದು, ಇತ್ತೀಚೆಗೆ ಯರುಕೋಣೆಯಿಂದ ಸ್ಥಳಾಂತರ ಮಾಡಿ ಅರೆಹೊಳೆ ಕ್ರಾಸ್ ಬಳಿ ಕ್ಲಿನಿಕ್ ನ್ನು ತೆರೆದಿದ್ದರು. ನಾಡಾ-ಗುಡ್ಡೆ ಅಂಗಡಿ ಆಯುರ್ವೇದ ವೈದ್ಯರ ಮೇಲೆ ದಾಳಿ ನಡೆಸಿದ ದಿನವೇ ಆರೋಗ್ಯ ಇಲಾಖೆ ಅಧಿಕಾರಿಗಳು, ಅದೇ ದಿನ ರಾತ್ರಿ ವೇಳೆ ಖಚಿತ ಮಾಹಿತಿ ಮೇರೆಗೆ ಡಾ.ಪ್ರಜೀತ್ ಕ್ಲಿನಿಕ್ ಮೇಲೆ ದಾಳಿ ನಡೆಸಿದಾಗ ತಮ್ಮಲ್ಲಿರುವ ಅಲೋಪತಿ ಔಷಧಿಯನ್ನು ಬೇರೆಡೆಗೆ ಶಿಫ್ಟ್ ಮಾಡಿರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದ್ದು, ಇಂದು ಬೆಳಿಗ್ಗೆ ಪತ್ರಕರ್ತರ ತಂಡದವರು ಭೇಟಿ ನೀಡಿದ್ದು, ಅಲೋಪತಿ ಔಷಧಿ ಇದ್ದದ್ದು ಕಂಡು ಬಂದ್ದಿದೆ. ಇದೇ ಸಮಯದಲ್ಲಿ ಆರೋಗ್ಯ ಇಲಾಖೆಗೆ ಸಂಬಂಧ ಪಟ್ಟ ಡಿಹೆಚ್‍ಒ ಅಧಿಕಾರಿಗಳಿಗೂ ಹಾಗೂ ಪೋಲಿಸ್ ಅಧಿಕಾರಿಗಳಿಗೂ ತಿಳಿಸಿದ್ರೂ ಯಾವುದೇ ಪ್ರಯೋಜನವಾಗಿಲ್ಲ

Related Posts

Leave a Reply

Your email address will not be published.

How Can We Help You?