ಉಳ್ಳಾಲ: ಯುವಕನಿಗೆ ಚೂರಿ ಇರಿತ

ಉಳ್ಳಾಲ: ಯುವಕನೋರ್ವನಿಗೆ ತಂಡವೊಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮುಕ್ಕಚ್ಚೇರಿ ಸಮೀಪದ ಮಸೀದಿ ಬಳಿ ನಡೆದಿದೆ.

ಕೋಡಿ ನಿವಾಸಿ ಮೊಯ್ದೀನ್ ಎಂಬವರ ಪುತ್ರ ಅಲ್ ಸಾದೀನ್ (24) ಕೊಲೆ ಯತ್ನಕ್ಕೆ ಒಳಗಾದವರು. ಮಸೀದಿ ಸಮೀಪ ನಿಂತಿದ್ದ ವೇಳೆ ತಂಡ ಚೂರಿಯಿಂದ ಬೆನ್ನಿನ ಭಾಗಕ್ಕೆ ಇರಿದು ಕೊಲೆಗೆ ಯತ್ನಿಸಿದೆ. ನಾಲ್ಕು ಮಂದಿಯ ತಂಡ ದಾಳಿ ನಡೆಸಿರುವುದಾಗಿದೆ, ಮಾಹಿತಿಗಳ ಪ್ರಕಾರ ಎಲ್ಲರೂ ಸ್ನೇಹಿತರಾಗಿದ್ದು, ಒಟ್ಟಿಗೆ ಮಾತನಾಡುತ್ತಿದ್ದ ಸಂದರ್ಭ ಯುವತಿಯ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದು ಚೂರಿಯಿಂದ ಇರಿದಿದ್ದಾರೆ. ದಾಳಿಗೊಳಗಾದವನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ  ಹಲವು  ಪ್ರಕರಣಗಳಿವೆ. ಕೆಲ ತಿಂಗಳುಗಳ ಹಿಂದೆ ಉಳ್ಳಾಲ ಠಾಣಾ ಪೊಲೀಸ್ ವಾಹನಕ್ಕೆ ಬಾಟಲಿಯಿಂದ ದಾಳಿ ನಡೆಸಿರುವ ಪ್ರಕರಣವೂ ಇರುವುದಾಗಿ ತಿಳಿದುಬಂದಿದೆ. ದೇರಳಕಟ್ಟೆ ಆಸ್ಪತ್ರೆಗೆ ಪೊಲೀಸ್ ಕಮೀಷನರ್ ಶಶಿ ಕುಮಾರ್, ಎಸಿಪಿ ದಿನಕರ್ ಶೆಟ್ಟಿ, ಉಳ್ಳಾಲ ಠಾಣಾಧಿಕಾರಿ ಸಂದೀಪ್ ನೇತೃತ್ವದ ತಂಡ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.

Related Posts

Leave a Reply

Your email address will not be published.

How Can We Help You?