ಸಂವಿಧಾನ ಶಿಲ್ಪ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ : ಡಾ. ಬಾಬು ಜಗಜೀವನ್ ರಾಮ್ ಅವರ 115ನೇ ಜನ್ಮ ದಿನಾಚರಣೆ , ಕಾರ್ಕಳ ತಾಲೂಕು ಆಡಳಿತ ವತಿಯಿಂದ ಆಚರಣೆ

ಕಾರ್ಕಳ: ಕಾರ್ಕಳ ತಾಲೂಕು ಆಡಳಿತ ತಾಲೂಕು ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ 131ನೇ ಜನ್ಮದಿನಾಚರಣೆ ಮತ್ತು ಹಸಿರು ಕ್ರಾಂತಿಯ ಹರಿಕಾರ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ರವರ 115ನೇ ಜನ್ಮದಿನಾಚರಣೆಯನ್ನು ಆಚರಿಸಿದರು.

ಗೇರುಬೀಜ ನಿಗಮದ ಅಧ್ಯಕ್ಷರಾದ ಮಣಿರಾಜ್ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಭಾರತರತ್ನ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರು ತಾನು ಬಾಳಬೇಕು ಇತರರು ಬಾಳಬೇಕು ಎಂಬ ಆಶ್ಯಯಹೊಂದಿದ ವ್ಯಕ್ತಿಯಾಗಿದ್ದರು. ನಂತರ ಮಾತನಾಡಿದ ಕೆಎಂಇಎಸ್ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ರಾಮಚಂದ್ರ ನೆಲ್ಲಿಕಾರ್ ಇಂದು ಅವರ 131ನೇ ಜನ್ಮದಿನಾಚರಣೆ ಕೇಂದ್ರದಲ್ಲಿ ಅವರ ಬಗ್ಗೆ ಮಾತನಾಡಲು ಹೊರಟರೆ 131 ದಿನಗಳು ಸಾಕಾಗುವುದಿಲ್ಲ. ವರ್ಣಭೇದದ ಬಗ್ಗೆ, ಹೋರಾಟ ಮಾಡಿ ದಲಿತರ ಮೇಲಾಗುವ ದೌರ್ಜನ್ಯದ ಬಗ್ಗೆ ಹೋರಾಟ ಮಾಡಿ ಎಲ್ಲ ವರ್ಗದವರಿಗೂ ಸಮಾನ ಹಕ್ಕು ಸಿಗಬೇಕೆಂದು ಹೋರಾಟ ಮಾಡಿದ ವ್ಯಕ್ತಿ ಬಾಬಾಸಾಹೇಬ್ ಅಂಬೇಡ್ಕರ್ ಎಂದು.

ಹೇಳಿದರು. ನಂತರ ಮಾತನಾಡಿದ ಉಪನ್ಯಾಸಕರ ರಾಜೇಂದ್ರ ಭಟ್ ಬಾಬು ಜಗಜೀವನ್ ರಾಮ್ ಭಾರತದ ಪ್ರಧಾನಿಯಾಗಲು ಅರ್ಹತೆ ಇದ್ದರೂ ಹಾಗೂ ಭಾರತರತ್ನ ಪಡೆಯಲು ಅರ್ಹತೆ ಇದ್ದರೂ ಎರಡರಿಂದಲೂ ವಂಚಿತರಾದ ವ್ಯಕ್ತಿ ಬಾಬು ಜಗಜೀವನ್ ರಾಮ್ ಆಗಿದ್ದರು. ಸುದೀರ್ಘ ಅವಧಿಯಲ್ಲಿ ಕೇಂದ್ರದ ಸಚಿವರಾಗಿದ್ದರು ಸೋಲನ್ನು ಅರಿಯದ ವ್ಯಕ್ತಿಯಾಗಿದ್ದರು. ಭಾರತ ಪಾಕಿಸ್ತಾನ ಯುದ್ಧದಲ್ಲಿ ನೇರವಾಗಿ ಭಾರತ ಸೈನಿಕರೊಂದಿಗೆ ಯುದ್ಧಭೂಮಿಯಲ್ಲಿ ಪಾಕಿಸ್ತಾನದ ಸೈನಿಕರ ವಿರುದ್ಧ ಹೋರಾಡಿ ಭಾರತಕ್ಕೆ ಜಯ ತಂದ ಕೀರ್ತಿ ಬಾಬು ಜಗಜೀವನ್ ರಾಮ್ ರವರಿಗೆ ಸಲ್ಲುತ್ತದೆ. ಎಂದು ಹೇಳಿದರು. ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು. ವೇದಿಕೆಯಲ್ಲಿ ಪುರಸಭಾ ಅಧ್ಯಕ್ಷರಾದ ಸುಮಾ ಕೇಶವ್ ಕಾರ್ಯನಿರ್ವಹಣಾಧಿಕಾರಿಗಳಾದ ಗುರುದತ್ತ m.ಟಿ. ಕಾರ್ಕಳ ತಾಸಿಲ್ದಾರ ರಾದ ಪ್ರದೀಪ್ ಕುರ್ಡೇಕರ್, ಪೋಲಿಸ್ಅಧಿಕಾರಿ ವಿನಯಪ್ರಸಾದ್, ಸಮಾಜಕಲ್ಯಾಣ ನಿರ್ದೇಶಕ ರೋಷನ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ ರೂಪ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?