ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್, ಮಹಾವೀರ ಜಯಂತಿ : ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಕಾರ್ಯಕ್ರಮ

ಪುತ್ತೂರು:ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 131ನೇ ಜನ್ಮ ದಿನಾಚರಣೆ ಹಾಗೂ ಮಹಾವೀರ ಜಯಂತಿ ಇಲ್ಲಿಯ ತಾಪಂ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಸಹಾಯಕ ಆಯುಕ್ತ ಗಿರೀಶ್ ನಂದನ್ ಜ್ಯೋತಿ ಪ್ರಜ್ವಲನೆ ಮಾಡಿ, ಡಾ.ಅಂಬೇಡ್ಕರ್ ಹಾಗೂ ಮಹಾವೀರ ಇಬ್ಬರೂ ಬೆಳೆದುಬಂದ ದಾರಿ ವಿಭಿನ್ನ. ವಿಶ್ವದಲ್ಲೇ ಅತೀ ದೊಡ್ಡ ಸಂವಿಧಾನ ನಿರ್ಮಿಸಿದ ಖ್ಯಾತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಿದರೆ, ವಿಶ್ವಕ್ಕೇ ಅಹಿಂಸೆಯ ತತ್ವದ ಕುರಿತು ಅರಿವು ಮೂಡಿಸಿದ ಖ್ಯಾತಿ ಮಹಾವೀರರಿಗೆ ಸಲ್ಲುತ್ತದೆ. ಇಬ್ಬರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ನಮ್ಮದಾಗಿದ್ದು, ಈ ನಿಟ್ಟಿನಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ ಎಂದರು.

ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಕ್ಕಾಗಿ ಬದುಕಿ ಸಮಾಜದ ಹಿತವನ್ನು ಬಯಸುವವರ ಸ್ಮರಣೆ ಇಂದಿಗೂ ಪ್ರಸ್ತುತವಾಗಿದೆ.. ಪ್ರಜಾ ಪರಂಪರೆ ಬರಲು ಡಾ.ಅಂಬೇಡ್ಕರ್ ರಚಿಸಿದ ಸಂವಿಧಾನ ಕಾರಣ. ಇಂದು ಅವರು ರೂಪಿಸಿದ ಸಮಾನತೆಯ ಅವಶ್ಯಕತೆ ಇದ್ದು, ಸಂವಿಧಾನದ ಆಸೆಗಳನ್ನು ಈಡೇರಿಸುವ ಪ್ರಯತ್ನ ಸಾಗಬೇಕು ಎಂದ ಅವರು, ಆಧ್ಯಾತ್ಮಿಕ ಜಗತ್ತಿಗೆ ತನ್ನದೇ ಆದ ಕೊಡುಗೆಯನ್ನು ಅಹಿಂಸೆಯ ಮೂಲಕ ಮಹಾವೀರರು ನೀಡಿದ್ದಾರೆ. ಇಬ್ಬರ ಆದರ್ಶನನ್ನು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಯಲ್ಲಿ ತೊಡಗೋಣ ಎಂದರು.

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಓಬಳೇಶ್ ಡಾ.ಅಂಬೇಡ್ಕರ್ ಕುರಿತು ಹಾಗೂ ಬಜತ್ತೂರು ಶಾಲಾ ಸಹಶಿಕ್ಷಕಿ ಪುಷ್ಪಲತಾ ಮಹಾವೀರರ ಕುರಿತು ಉಪನ್ಯಾಸ ನೀಡಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನೇತ್ರಾವತಿ ನದಿಯಲ್ಲಿ ದುರ್ಮರಣ ಹೊಂದಿದ ವಿದ್ಯಾರ್ಥಿ ನಿಂಗರಾಜ ಅವರು ಹೆತ್ತವರಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ 2.50 ಲಕ್ಷ ರೂ. ಮೊತ್ತದ ಚೆಕ್ ವಿತರಿಸಲಾಯಿತು. ಪರಿಶಿಷ್ಟ ಪಂಗಡದ ಕೊರಗ ಸಮುದಾಯದ ಹರೀಶ್ ಕೊರಗ, ಸುರೇಶ್ ಕೊರಗ, ವಾಮನ ಕೊರಗ ಹಾಗೂ ಪುಷ್ಪಲತಾ ಅವರಿಗೆ ತಲಾ 15 ಸಾವಿರ ಮೌಲ್ಯದ ಹುಲ್ಲು ಕತ್ತರಿಸುವ ಯಂತ್ರ ವಿತರಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಪೆÇಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ.ಕುಮಾರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ರಮೇಶ್ ಬಾಬು ಟಿ., ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್., ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್,ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಭಾರತಿ ಜೆ.ಎಸ್. ಉಪಸ್ಥಿತರಿದ್ದರು

Related Posts

Leave a Reply

Your email address will not be published.

How Can We Help You?