ಹೆದ್ದಾರಿ ಅವೈಜ್ಞಾನಿಕ ಕಾಮಗಾರಿಯಿಂದ ದ್ರಾಕ್ಷಿ ತುಂಬಿದ್ದ ವಾಹನ ಪಲ್ಟಿ : ಎರ್ಮಾಳು ಸೇತುವೆ ಬಳಿ ನಡೆದ ದುರ್ಘಟನೆ

ಎರ್ಮಾಳು ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರ ಅವೈಜ್ಞಾನಿಕ ಕಾಮಗಾರಿಯಿಂದಾಗಿ, ಮಳೆನೀರು ರಸ್ತೆಯಲ್ಲಿ ಶೇಖರಣೆಗೊಂಡ ಪರಿಣಾಮ ದ್ರಾಕ್ಷಿ ತುಂಬಿಕೊಂಡು ಬರುತ್ತಿದ್ದ ವಾಹನ ಪಲ್ಟಿಯಾದ ಘಟನೆ ನಡೆದಿದೆ.

ಪಡುಬಿದ್ರಿ- ಎರ್ಮಾಳು ಗಡಿ ಪ್ರದೇಶದ ಸೇತುವೆ ಬಳಿ ಈ ಅಪಘಾತ ಸಂಭವಿಸಿದೆ. ವಿಜಾಪುರದಿಂದ ದ್ರಾಕ್ಷಿ ತುಂಬಿಸಿಕೊಂಡು ಮಂಗಳೂರಿಗೆ ಗೂಡ್ಸ್ ಟೆಂಪೆÇೀವೊಂದರಲ್ಲಿ ಬರುತ್ತಿದ್ದು, ರಾತ್ರಿ ಸುರಿದ ಮಳೆನೀರು ರಸ್ತೆಯಿಂದ ಹರಿದು ಹೋಗಲು ಪೂರಕ ವ್ಯವಸ್ಥೆ ಇಲ್ಲದ ಕಾರಣ ನೀರು ರಸ್ತೆ ತುಂಬಿತ್ತು. ಈ ನೀರಿನ ಮೇಲೆ ವಾಹನ ಚಲಿಸುತ್ತಿದಂತೆ ವಾಹನ ಚಲಾಯಿಸಲು ರಸ್ತೆ ಕಾಣದೆ ಒಮ್ಮೆಲೆ ಬಲಕ್ಕೆ ತಿರುಗಿಸಿದ್ದರಿಂದ ವಾಹನ ಪಲ್ಟಿಯಾಗಿದೆ. ಚಾಲಕ ಹಾಗೂ ನಿರ್ವಾಹಕರಿಬ್ಬರೂ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ದ್ರಾಕ್ಷಿ ರಸ್ತೆ ಎಲ್ಲೆಡೆ ಚೆಲ್ಲಿದ್ದು, ಹೆದ್ದಾರಿ ಪ್ರಯಾಣಿಕರು ಸಹಿತ ಸ್ಥಳೀಯರು ಕೈ ಚೀಲದಲ್ಲಿ ತುಂಬಿಸಿ ಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬಂತು.