ರಾಮನವಮಿ ಹಬ್ಬದ ಹೆಸರಿನಲ್ಲಿ ಹಿಂಸಾಚಾರ ,ಇದೊಂದು ಪೂರ್ವನಿಯೋಜಿತ ಷಡ್ಯಂತ್ರ ಎಸ್.ಡಿ.ಪಿ.ಐ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ಆರೋಪ

ಮಂಜೇಶ್ವರ : ದೇಶ ವ್ಯಾಪಕವಾಗಿ ಆರ್ಎಸ್ಎಸ್ನ ಭಯೋತ್ಪಾದನೆಯನ್ನು ಸಂವಿಧಾನ ಬದ್ಧವಾಗಿ ತಡೆಯ ಬೇಕಿದೆಯೆಂದು ಎಸ್.ಡಿ.ಪಿ.ಐ. ರಾಮನವಮಿ ಹಬ್ಬದ ಹೆಸರಲ್ಲಿ ಸುಮಾರು 14 ರಾಜ್ಯಗಳಲ್ಲಿ ನಡೆದ ಹಿಂಸಾಚಾರಗಳು ಆಕಸ್ಮಿಕವೋ ಕಾಕತಾಳಿಯವೋ ಅಲ್ಲ. ಪೂರ್ವನಿಯೋಜಿತ ಷಡ್ಯಂತ್ರವಾಗಿದೆ ಎಂದು ಎಸ್.ಡಿ.ಪಿ.ಐ ಮಂಡಲ ಅಧ್ಯಕ್ಷ ಅಶ್ರಫ್ ಬಡಾಜೆ ಆರೋಪಿಸಿದರು.
“ಆರ್ಎಸ್ ಎಸ್ ನ ಮುಸ್ಲಿಂ ಜನಾಂಗೀಯ ಆಕ್ರಮಣಗಳನ್ನು ತಡೆಯಿರಿ ಹಾಗೂ ದೇಶವನ್ನು ರಕ್ಷಿಸಿರಿ ” ಎಂಬ ಘೋಷಣೆಯೊಂದಿಗೆ ಎಸ್.ಡಿ.ಪಿ.ಐ ಉಪ್ಪಳದಲ್ಲಿ ನಡೆಸಿದ ಪ್ರತಿಭಟನಾ ಮಾರ್ಚ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರತಿಭಟನಾ ಮಾರ್ಚ್ ನಲ್ಲಿ ನೇತಾರರು ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.