ಪ್ರೀತಿಸಿದ ಯುವತಿ ಕೇಸ್ ಕೊಟ್ಟಳೆಂದು ಮೊಬೈಲ್ ಟವರ್ ಏರಿದ ಭೂಪ : ಮಂಗಳೂರಿನ ಅಡ್ಯಾನರ್‍ನಲ್ಲಿ ನಡೆದ ಘಟನೆ

ಮಂಗಳೂರು: ಯುವಕನೋರ್ವ ಪ್ರೀತಿಸಿದ ಯುವತಿ ಕೇಸ್ ಕೊಟ್ಟಳು ಎಂದು ಮೊಬೈಲ್ ಟವರ್ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳೂರಿನ ಅಡ್ಯಾರ್ ಬಳಿ ನಡೆದಿದೆ.
ಸ್ಥಳೀಯ ನಿವಾಸಿ ಯುವಕ ಅಡ್ಯಾರ್ ನಲ್ಲಿಯೇ ಬಸ್ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದ.

ಈತ ಪರಂಗಿಪೇಟೆಯ ಮಾರಿಪಳ್ಳದ ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ. ಆದರೆ ಆಕೆ ಈತನ ವಿರುದ್ಧ ಬಂಟ್ವಾಳ ಪೆÇಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಳು. ಇದರಿಂದ ಮನನೊಂದು ಈತ ಟವರ್ ಹತ್ತಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ , ಪೋಲಿಸರು ಅಗ್ನಿಶಾಮಕ ದಳದ ಸಿಬ್ಬಂದಿ ಯುವಕನನ್ನು ಕೆಳಗಿಳಿಸಲು ಹರಸಾಹಸಪಟ್ಟಿದ್ದಾರೆ. ಆದರೆ ಆತ ಕೇಳಲಿಲ್ಲ.

ಕೊನೆಗೆ ಯುವತಿ ಬಂದು ದೂರು ವಾಪಸ್ ತೆಗೆದುಕೊಳ್ಳುವುದಾಗಿ ಹೇಳಿದ್ದು ಬಳಿಕ ಟವರ್ ನಿಂದ ಕೆಳಗೆ ಇಳಿದಿದ್ದಾನೆ.

Related Posts

Leave a Reply

Your email address will not be published.

How Can We Help You?