`ಗ್ರೀನ್ ಆ್ಯಂಡ್ ಕ್ಲೀನ್ ಎನರ್ಜಿ’ , ಎಂ ಆರ್ ಪಿ ಎಲ್ ನೇತೃತ್ವದಲ್ಲಿ ಸೈಕಲ್ ರ್‍ಯಾಲಿ

`ಗ್ರೀನ್ ಆ್ಯಂಡ್ ಕ್ಲೀನ್ ಎನರ್ಜಿ’ ಆಶಯದೊಂದಿಗೆ ಎಂ ಆರ್ ಪಿ ಎಲ್ ನೇತೃತ್ವದಲ್ಲಿ ಮಂಗಳೂರಿನಲ್ಲಿ ರವಿವಾರ ಬೆಳಗ್ಗೆ ಸೈಕಲ್ ರ್‍ಯಾಲಿ ನಡೆಯಿತು. ಮಂಗಳಾ ಸ್ಟೇಡಿಯಂ ಮುಂಭಾಗದಿಂದ ಆರಂಭವಾದ ಸೈಕಲ್ ರ್‍ಯಾಲಿ ಲೇಡಿಹಿಲ್ ಜಂಕ್ಷನ್, ಉರ್ವಸ್ಟೋರ್ ಬಸ್ ನಿಲ್ದಾಣ, ಇನ್ ಪೋಸಿಸ್ ಜಂಕ್ಷನ್‍ನಿಂದ ತಿರುಗಿ ಲೇಡಿಹಿಲ್ ಸರ್ಕಲ್‍ಗೆ ಆಗಮಿಸಿ ಮಂಗಳಾ ಸ್ಟೇಡಿಯಂ ಮುಂಭಾಗದಿಂದ ಕೆನರಾ ಹೈಸ್ಕೂಲ್ ಗ್ರೌಂಡ್‍ಗೆ ಆಗಮಿಸಿತು.

ಎಂ ಆರ್ ಪಿ ಎಲ್ ಪ್ರೋಜೆಕ್ಟ್ ವಿಭಾಗದ ಇಡಿ ಬಿಎಚ್‍ವಿ ಪ್ರಸಾದ್, ಟೆಕ್ನಿಕಲ್ ಸರ್ವಿಸಸ್‍ನ ಜಿಜಿಎಂ ಶ್ಯಾಮ್ ಕಾಮತ್, ಎಚ್ ಆರ್ ವಿಭಾಗದ ಜಿಜಿಎಂ ಕೃಷ್ಣ ಹೆಗ್ಡೆ, ಟೆಕಿಕಲ್ ಸರ್ವಿಸಸ್ ಸಿಜಿಎಂ ಸುಧೀರ್ ಪೈ ಮೊದಲಾದವರು ಸೈಕಲ್ ರ್‍ಯಾಲಿಗೆ ಚಾಲನೆ ನೀಡುವ ಸಂದರ್ಭ ಉಪಸ್ಥಿತರಿದ್ದರು. ಸುಮಾರು 300ಕ್ಕೂ ಅಧಿಕ ಸೈಕಲ್ ಪಟುಗಳು ರ್‍ಯಾಲಿಯಲ್ಲಿ ಪಾಲ್ಗೊಂಡಿದ್ದರು.
ವಿವಿಧ ಸಂಘ-ಸಂಸ್ಥೆಯವರು ರ್‍ಯಾಲಿಗೆ ಸಹಕರಿಸಿದರು

Related Posts

Leave a Reply

Your email address will not be published.

How Can We Help You?