ಶ್ರೀ ಉಲ್ಕಾ ಫಿಶ್ ಮಿಲ್ ಕಾರ್ಖಾನೆಯಲ್ಲಿ ವಿಷಾನಿಲ ಸೋರಿಕೆ : ಮೂವರು ಮೃತ್ಯು, ಮೂವರಿಗೆ ಗಾಯ

ಮಂಗಳೂರು: ಎಂಎಸ್‍ಇಝಡ್‍ನಲ್ಲಿರುವ ಶ್ರೀ ಉಲ್ಕಾ ಎಂಬ ಫಿಶ್ ಮೀಲ್ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಮೂವರು ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ನಡೆದಿದೆ.

Sri Ulka Fish Mill factory

ಮೃತರನ್ನು ಮೊಹಮ್ಮದ್ ಸಮಿಉಲ್ಲಾ ಇಸ್ಲಾಮ್, ಉಮ್ಮರ್ ಫಾರೂಕ್, ನಿಜಾಮುದ್ದೀನ್, ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಬಂಗಾಳ ಮೂಲದವರು ಎಂದು ತಿಳಿದುಬಂದಿದೆ. ಇನ್ನು ಹಸನ್ ಆಲಿ, ಮೊಹಮ್ಮದ್ ಕರೀಬುಲ್ಲಾ, ಹಫೀಜುಲ್ಲಾ ಎಂಬ ಮೂವರು ಕಾರ್ಮಿಕರು ಗಾಯಗೊಂಡಿದ್ದು ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀ ಉಲ್ಕಾ ಕಂಪನಿ ಮುಂಬೈ ಮೂಲದ ರಾಜು ಎಂಬುವವರ ಒಡೆತನದಲ್ಲಿದೆ. ನಿನ್ನೆ ಸಂಜೆ ಮಂಗಳೂರು ವಿಶೇಷ ಆರ್ಥಿಕ ವಲಯದಲ್ಲಿರುವ ಶ್ರೀ ಉಲ್ಕಾ ಎಲ್‍ಎಲ್‍ಪಿ ಎಂಬ ಮೀನು ಸಂಸ್ಕರಣಾ ಕಂಪೆನಿಯ ತ್ಯಾಜ್ಯ ಸಂಗ್ರಹ ತೊಟ್ಟಿಯಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಮೂವರು ರಾತ್ರಿ ಮೃತಪಟ್ಟಿದ್ದಾರೆ. ಅಸ್ವಸ್ಥರಾಗಿರುವ ಕಾರ್ಮಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Sri Ulka Fish Mill factory

ಈ ಬಗ್ಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಾಹಿತಿ ನೀಡಿ ಫಿಶ್ ಮಿಲ್ ಮಾಲೀಕರ ವಿರುದ್ಧ ಐಪಿಸಿ 304 ಅಡಿ ಪ್ರಕರಣ ದಾಖಲಿಸಲಾಗಿದೆ. ಬಜಪೆ ಠಾಣೆಯಲ್ಲಿ ಐಪಿಸಿ 337, 338, 304 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲು ಮಾಡಲಾಗಿದೆ. ಕಂಪೆನಿಗೆ ಸೇರಿದ ನಾಲ್ವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ. ಮಾಲಿಕ ಮುಂಬೈ ಮೂಲದ ರಾಜು ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

Related Posts

Leave a Reply

Your email address will not be published.

How Can We Help You?