ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ ಸ್ಥಳಾಂತರಗೊಂಡ ನೂತನ ಕಛೇರಿ ಉದ್ಘಾಟನೆ

ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ (ನಿ) ಇದರ ಸ್ಥಳಾಂತರಗೊಂಡ ನೂತನ ಕಛೇರಿಯು ತ್ರಾಸಿ ಸಮೀಪದ ರಾಮ ಮಂದಿರ, ಸಾಯಿ ಟವರ್‍ನಲ್ಲಿ ಉದ್ಘಾಟನೆಗೊಳ್ಳಲಿದೆ. ಎಪ್ರಿಲ್ 21ರಂದು ಬೆಳಿಗ್ಗೆ 10.30ಕ್ಕೆ ತ್ರಾಸಿಯ ಕ್ರಿಸ್ತ್ ಕಿಂಗ್ ಚರ್ಚ್ ಮಿಲೇನಿಯಂ ಹಾಲ್‍ನಲ್ಲಿ ನಡೆಯಲಿದೆ.

ಸ್ಥಳಾಂತರಗೊಂಡ ನೂತನ ಕಛೇರಿಯನ್ನು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಲಿದ್ದಾರೆ.ಭದ್ರತಾ ಕೋಶವನ್ನು ಮಾಜಿ ಶಾಸಕ ಶ್ರೀ ಕೆ.ಗೋಪಾಲ ಪೂಜಾರಿಯವರು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಕಾಂಬಿಕಾ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಬೇಬಿ ಕೊಠಾರಿ ವಹಿಸಲಿದ್ದಾರೆ.
ಕ್ರಿಸ್ತ್ ಕಿಂಗ್ ಚರ್ಚ್ ಧರ್ಮಗುರುಗಳಾದ ಫಾ.ರೋಜಾರಿಯೋ ಫೆರ್ನಾಂಡೀಸ್,ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರು ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ಜಿ.ಪಂ.ಮಾಜಿ ಅಧ್ಯಕ್ಷ ಶ್ರೀ ಎಸ್.ರಾಜು ಪೂಜಾರಿ, ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿರ್ದೇಶಕರಾದ ಮಹೇಶ ಹೆಗ್ಡೆ, ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ನಾಯಕ್ ಗೌರವ ಉಪಸ್ಥಿತಿಯಲ್ಲಿ ಭಾಗವಹಿಸಲಿದ್ದಾರೆ. ಮಾಜಿ.ಜಿ.ಪಂ. ಸದಸ್ಯ ಎಸ್.ಮದನ್ ಕುಮಾರ್ ಶುಭಶಂಸನೆಗೈಯಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಶಾರದಾ ಡಿ.ಬಿಜೂರು, ಶ್ರೀ ಗಣೇಶ್ ಎಲ್ ಪೂಜಾರಿ, ಶ್ರೀ ಆನಂದ ಪೂಜಾರಿ, ಶ್ರೀ ರಾಘವೇಂದ್ರ ಆರ್ ಶೆಟ್ಟಿ, ಶ್ರೀ ಸುರೇಶ್ ಪೂಜಾರಿ, ಶ್ರೀಮತಿ ದೇವಾಡಿಗ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

ಸಂಜೆ 7 ಗಂಟೆಯಿಂದ ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮೇಳದವರಿಂದ ಕಾಲಮಿತಿ ಯಕ್ಷಗಾನ ಕಾರ್ಯಕ್ರಮ “ಶ್ರೀನಿವಾಸ ಕಲ್ಯಾಣ’ (ಕಾಲಮಿತಿ) ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯ
ನಿರ್ವಾಹಣಾಧಿಕಾರಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮಕ್ಕೆ ತಮ್ಮ ಆಗಮನವನ್ನು ನಿರೀಕ್ಷಿಸಿರುತ್ತಿದ್ದಾರೆ.

Related Posts

Leave a Reply

Your email address will not be published.

How Can We Help You?