ಅಖಿಲ ಭಾರತ ಕೊಂಕಣಿ ಪರಿಷದ್ ರಾಷ್ಟ್ರೀಯ ಅಧ್ಯಕ್ಷರುಉಷಾ ರಾಣೆಯವರಿಗೆ ಮಂಗಳೂರಿನಲ್ಲಿ ಸನ್ಮಾನ

ಅಖಿಲ ಭಾರತ ಕೊಂಕಣಿ ಪರಿಷದ್ ಇದರ ರಾಷ್ಟೀಯ ಅಧ್ಯಕ್ಷರಾಗಿ 82 ವರುಷಗಳಲ್ಲಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದ ಉಷಾ ರಾಣೆ ಅವರು ಮಂಗಳೂರಿಗೆ ಭೇಟಿ ನೀಡಿದರು.ಈ ಸಂದರ್ಭದಲ್ಲಿ ಹಿರಿಯ ಕೊಂಕಣಿ ಮಾತೃಭಾಷೆಯ ಸಂಘಟಕರೂ ಮಾಜಿ ಶಾಸಕರೂ ಆದ ಜೆ.ಆರ್ ಲೋಬೊ ಅವರು ಸನ್ಮಾನ ಮಾಡಿದರು.

ನಂತರ ಮಾತನಾಡಿದ ಲೋಬೊ ಅವರು ಕೊಂಕಣಿ ಮಾತೃಭಾಷೆ ಮಾತ್ರವಲ್ಲದೆ ಯಾವುದೇ ಮಾತೃಭಾಷೆ ಆದರೂ ನಾವು ತಾಯಿಯ ಸ್ಥಾನವನ್ನು ನೀಡುವ ಮೂಲಕ ಗೌರವ ನೀಡಬೇಕು .ಮಂಗಳೂರಿನ ಚರ್ಚಿನಲ್ಲಿ ಪೂಜೆ, ಪ್ರಾರ್ಥನೆಯು ಕ್ರೈಸ್ತರು ಕೊಂಕಣಿಯಲ್ಲಿ ಆಚರಿಸುವ ಮೂಲಕ ಕೊಂಕಣಿ ಶ್ರೀಮಂತ ಆಗಿದೆ.ಜಿಎಸ್ಬಿ,ಕುಡುಮಿ,ಸಿದ್ದಿಗಳು,ನವಾಯ್ತರು ಕೊಂಕಣಿ ಮಾತನಾಡಿ ಸಾಹಿತ್ಯ ಬರೆದು ಉಳಿಸಿದ್ದಾರೆ ಎಂದು ಶುಭಾಶಯ ನೀಡಿದರು.

ಸನ್ಮಾನವನ್ನು ಸ್ವೀಕರಿಸಿದ ಉಷಾ ರಾಣೆ ಅವರು ತಾನು ಕಾರವಾರ ಸದಾಶಿವಘಡ್ ಪ್ರದೇಶದಲ್ಲಿ ಕೊಂಕಣಿ ನನ್ನ ಮಾತೃಭಾಷೆ ಉಳಿಸಲು ಕೆಲಸ ಮಾಡಿದೆ ಅದಕ್ಕೆ ಅಭಿಮಾನಿಗಳು ಈ ಜವಾಬ್ದಾರಿ ನೀಡಿದರು. ಮೇ ತಿಂಗಳ 14 ಮತ್ತು 15ರಂದು ಮಾಲ್ವಾನಾದಲ್ಲಿ ಎರಡು ದಿನ ಅಧಿವೇಶನ ಇದೆ. ಎಲ್ಲಾ ಕೊಂಕಣಿ ಅಭಿಮಾನಿಗಳು ಬರಬೇಕು ಎಂದು ಕರೆ ನೀಡಿದರು.ಮೊದಲಿಗೆ ಅಖಿಲ ಭಾರತೀಯ ಚಾರೊಳಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರೇಮಂಡ್ ಡಿಕೂನಾ ತಾಕೊಡೆ ಸ್ವಾಗತಿಸಿದರು. ವಿಪೆÇೀರ್ ಮಾದ್ಯಮದ ಆಡಳಿತ ನಿರ್ದೇಶಕರಾದ ಲಕ್ಷ್ಮಣ ಕುಂದರ್ , ಉಪಾಧ್ಯಕ್ಷರಾದ ರೊಜಲಿನ್ ಡಿಲೀಮಾ, ಬ್ಯೂರೋ ಮುಖ್ಯಸ್ಥ ತಾರಾನಾಥ ಗಟ್ಟಿ, ಸುಧೀರ್ ಉದಯ್, ರಂಜನಾ ಜೊತೆಗಿದ್ದರು.