ಮುಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ : ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ

ಮುಲ್ಕಿಯ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯ ಅತಿಥಿ ಅಭ್ಯಾಗತರುಗಳು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿ4 ನ್ಯೂಸ್ ನ ಪ್ರಧಾನ ಸಂಪಾದಕರಾದ ತಾರನಾಥ ಗಟ್ಟಿ ಕಾಪಿಕಾಡ್ ಆಗಮಿಸಿ ಮಾತನಾಡಿ, ಪ್ರಕೃತಿಯೇ ಒಂದು ಅನುಭವ ಶಾಲೆ ಈ ಪ್ರಕೃತಿಯಿಂದ ಬಹಳಷ್ಟೂ ಅನುಭವವನ್ನು ಪಡೆದು ಬೆಳೆಯಬಹುದು. ನಮ್ಮ ಕಾಲಡಿಯಲ್ಲಿಯೇ ದುರ್ಗುಣಗಳು ದುಶ್ಚಟಗಳು ಹಬ್ಬುತ್ತಿವೆ. ಇಂತಹ ಅಪಾಯಗಳನ್ನು ಅರಿತು ಮಕ್ಕಳನ್ನು ಬೆಳೆಸಬೇಕಾಗಿದೆ. ಇಂತಹ ಶಿಬಿರಗಳು ಮಕ್ಕಳಲ್ಲಿ ಜಾಗೃತಿಯನ್ನುಂಟು ಮಾಡುತ್ತವೆ ಎಂದರು.

ಇನ್ನೋರ್ವ ಅತಿಥಿ ಸಂಕೇತ್ ಮಂಗಳೂರು ಇದರ ನಿರ್ದೇಶಕರಾದ ಜಗನ್ ಪವಾರ್ ಅವರು, ಇಂದಿನ ಶಿಕ್ಷಣ ಪದ್ದತಿಯಲ್ಲಿ ಪುಸ್ತಕದ ಜ್ಞಾನದ ಜೊತೆಗೆ ಇತರ ವಿಷಯಗಳ ಜ್ಞಾನವನ್ನೂ ಸಮಾನವಾಗಿ ಪಡೆದು ಬಹುಮುಖ ಪ್ರತಿಭಾವಂತರಾಗಿ ಬೆಳೆಯಬೇಕು ವಿದ್ಯಾರ್ಥಿಗಳ ಭವಿಷ್ಯಕ್ಕೆ ಇದು ತುಂಬಾ ಸಹಕಾರಿ ಎಂದರು.ಮೊಬೈಲ್ ದಾಹದಿಂದ ಹೊರಬರಲು ಸಾದ್ಯ ಎಂದರು. ಸಭಾದ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಚಾಲಕ ಎಚ್.ವಿ ಕೋಟ್ಯಾನ್ ರವರು ಮಾತನಾಡಿ, ಕೊರೋನಾ ಅವಧಿಯಲ್ಲಿ ಕಳೆದುಕೊಂಡಿದ್ದ ಚಟುವಟಿಕೆಗಳಿಗೆ ಇಂತಹ ಶಿಬಿರಗಳು ಪುನಶ್ಚೇತನವನ್ನು ನೀಡುತ್ತವೆ. ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆದು ಬಹುಮುಖ ಪ್ರತಿಭೆಯಿಂದ ಅರಳುತ್ತಾರೆ ಎಂದರು.

ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಬಾಲಚಂದ್ರ ಸನಿಲ್, ಕೋಶಾಧಿಕಾರಿ ಹೇಮರಾಜ್, ಟ್ರಸ್ಟಿ ಮೆಂಬರ್ ಶ್ರೀ ಹರೀಂದ್ರ ಸುವರ್ಣ, ಶಿಕ್ಷಕ ರಕ್ಷಕ ಸಂಘದ ಅದ್ಯಕ್ಷ ಪ್ರಕಾಶ್ ಮೊಂತೇರೋ, ಪ್ರಾಂಶುಪಾಲ ಯತೀಶ್ ಅಮೀನ್ ಉಪಸ್ಥಿತರಿದ್ದರು.
ಸಂಸ್ಥೆಯ ಆಡಳಿತಾಧಿಕಾರಿ ಡಾ.ವಸಂತ್ ಕುಮಾರ್ ಪ್ರಾಸಾವಿಕ ಮಾತುಗಳನ್ನಾಡಿ ಶಿಬಿರದ ಉದ್ದೇಶ ತಿಳಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಪ್ರೋ: ಕೇಶವ ಎಚ್ ರವರು ವಂದಿಸಿದರು, ಕು.ರಕ್ಷಿತ ಹಾಗೂ ಅಭಿಜ್ಞಾ ಪ್ರಾರ್ಥಿಸಿದರು. ಶ್ರೀಮತಿ ಪ್ರತಿಭಾ, ಶ್ರೀಮತಿ ಜಯಶ್ರೀ ಮತ್ತು ಶ್ರೀ ಮತಿ ವಾಣಿ ಯವರು ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಸರ್ವ ಅಧ್ಯಾಪಕರೂ ಸರ್ವ ರೀತಿಯಲ್ಲಿಯಲ್ಲಿ ಸಹಕರಿಸಿದರು.