ಉಡುಪಿಯ ಮಣಿಪಾಲದಲ್ಲಿ ಬೆಂಕಿ ಅವಘಡ : ಫರ್ನಿಚರ್ ಮಳಿಗೆ, ಹೋಟೆಲ್‍ವೊಂದಕ್ಕೆ ಬೆಂಕಿ

ಉಡುಪಿಯ ಮಣಿಪಾಲ ಸಮೀಪದ ಲಕ್ಷ್ಮೀಂದ್ರ ನಗರದ ಒಂದೇ ಕಟ್ಟಡದಲ್ಲಿರುವ ಫರ್ನಿಚರ್ ಮಳಿಗೆ ಹಾಗೂ ಹೋಟೆಲ್ ವೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎನ್ನಲಾಗಿದೆ.

ಶಾರ್ಟ್ ಸರ್ಕ್ಯೂಟ್ ನಿಂದ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ಮೊದಲಿಗೆ ಹೋಟೆಲ್ ನಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಕಟ್ಟಡಕ್ಕೆ ಹರಡಿತ್ತು, ಇದರಿಂದ ಹೆಚ್ಚು ಹಾನಿ ಸಂಭವಿಸಿರುವುದು ಫರ್ನಿಚರ್ ಮಳಿಗೆಗೆ. ಇಲ್ಲಿ ಬಹಳಷ್ಟು ಫರ್ನಿಚರ್‍ಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿ ಸುಟ್ಟು ಭಸ್ಮವಾಗಿವೆ. ಅದೇರೀತಿ ಹೋಟೆಲ್ ನ ಸೊತ್ತುಗಳ ಕೂಡ ಬೆಂಕಿಗೆ ಆಹುತಿಯಾಗಿವೆ. ಅಲ್ಲದೆ ಸಮೀಪದ ಕಟ್ಟಡಕ್ಕೂ ಬೆಂಕಿ ವ್ಯಾಪಿಸಿ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಆಗಮಿಸಿದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ನಿರಂತರ ಕಾರ್ಯಾಚರಣೆ ಮೂಲಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related Posts

Leave a Reply

Your email address will not be published.

How Can We Help You?