ಪೊಳಲಿಯ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ,ದಡ್ಡಲಕಾಡು ಸಂಭ್ರಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ

ಬಂಟ್ವಾಳ: ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ವತಿಯಿಂದ ದಡ್ಡಲಕಾಡು ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ನಿರ್ಮಾಣಗೊಂಡ ನೂತನ ಕೊಠಡಿಗಳು ಹಾಗೂ ಕಲಿಕಾ ಭವನದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಮೇ7 ಮತ್ತು 8 ರಂದು ಸರಕಾರಿ ಶಾಲೆ ಉಳಿಸಿ ಬೆಳೆಸಿ ಸಮಿತಿ ರಾಜ್ಯಾಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ ನಡೆಯಲಿರುವ ದಡ್ಡಲಕಾಡು ಸಂಭ್ರಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಶುಕ್ರವಾರ ಬೆಳಿಗ್ಗೆ ಪೊಳಲಿ ಯ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಡೆಯಿತು

.ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ದೇವಸ್ಥಾನದ ಪ್ರಧಾನ ಅರ್ಚಕ, ಪವಿತ್ರಪಾಣಿ ಮಾಧವ ಭಟ್ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಈ ಸಂದರ್ಭ ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಅಂಚನ್, ತಾ.ಪಂ. ಮಾಜಿ ಸದಸ್ಯ ವೆಂಕಟೇಶ್ ನಾವಡ, ಟ್ರಸ್ಟಿಗಳಾದ ಪುರುಷೋತ್ತಮ ಅಂಚನ್, ರಾಮಚಂದ್ರ ಪೂಜಾರಿ ಕರೆಂಕಿ, ಸಂದೀಪ್ ಸಾಲ್ಯಾನ್, ನವೀನ್ ಸೇಸಗುರಿ, ಬಾಲಕೃಷ್ಣ ಜಿ., ಪ್ರೌಢಶಾಲಾ ಮುಖ್ಯ ಶಿಕ್ಷಕ ರಮಾನಂದ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮೌರಿಸ್ ಡಿಸೋಜಾ, ಪ್ರಮುಖರಾದ ಕೊರಗಪ್ಪ ಪಜಾರಿ,
ವಸಂತಿ ಕೊರಗಪ್ಪ ಪೂಜಾರಿ, ರಾಕೇಶ್ ಯಡೂರು, ಪ್ರವೀಣ್, ಧನುಷ್, ಲವೇಶ್ ಸೇಸಗುರಿ, ಚೈತ್ರೇಶ್, ಸಂತೋಷ್ ನೆತ್ತರಕೆರೆ, ಬಾಬು ಮಾಸ್ತರ್, ಶಾಲಾ ವಿದ್ಯಾರ್ಥಿ ನಾಯಕ ಗೌತಮ್,
ನಿಶಾಂತ್ ಅಂಚನ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?