ಸರ್ಕಾರದಿಂದ ಹೈನುಗಾರಿಕೆ ಮತ್ತು ರೈತರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮ: ಶಾಸಕ ಸಂಜೀವ ಮಠಂದೂರು

ಪುತ್ತೂರು: ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡವರು ಯಾಂತ್ರಿಕೃತ ಹೈನುಗಾರಿಕೆಯತ್ತ ಹೋಗಬೇಕು. ಹೆಚ್ಚು ಹೆಚ್ಚು ಹಾಲು ಉತ್ಪಾದನೆ ತಯಾರು ಮಾಡಬೇಕೆಂಬ ನಿಟ್ಟಿನಲ್ಲಿ ಸರಕಾರ ಫಲಾನುಭವಿಗಳಿಗೆ ಸವಲತ್ತು ನೀಡುವ ಮೂಲಕ ಸರಕಾರ ಹೈನುಗಾರಿಕೆ ಮತ್ತು ರೈತರ ಅಭಿವೃದ್ಧಿಗಾಗಿ ಹತ್ತಾರು ಕಾರ್ಯಕ್ರಮ ನೀಡುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಪಶುಪಾಲನಾ ಇಲಾಖೆಯಿಂದ ಪುತ್ತೂರು ಪಶುವೈದ್ಯಕೀಯ ಕಚೇರಿಯಲ್ಲಿ ಎ.22ರಂದು ನಡೆದ ಫಲಾನುಭವಿಗಳಿಗೆ ಹಸು ಖರೀದಿಗೆ ಸಾಲ ವಿತರಣಾ ಪತ್ರ ಮತ್ತು ಹಾಲು ಕರೆಯುವ ಯಂತ್ರವನ್ನು ನೀಡಿ ಅವರು ಮಾತನಾಡಿದರು.

ಪಶು ವೈದ್ಯಕೀಯ ಇಲಾಖೆಯಲ್ಲ ಕಚೇರಿ ಕಟ್ಟಡಗಳು ನೂರಕ್ಕೆ ನೂರು ನೀಡಲಾಗಿದೆ. ಆದರೆ ವೈದ್ಯರ ಕೊರತೆ ಇದೆ ಎಂಬ ಸಮಸ್ಯೆಗೆ ಈಗಾಗಲೇ ಸಚಿವರಲ್ಲಿ ಮಾತನಾಡಿದ್ದೇನೆ. ಮುಂದೆ ವೈದ್ಯರ ಕೊರತೆ ನೀಗಿಸುವ ಭರವಸೆ ಸಿಕ್ಕಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು. ಇದೇ ಸಂದರ್ಭದಲ್ಲಿ ಪಶು ಸಂಗೋಪಣೆಗೆ ಹಲವು ಅನುದಾನ ತರಿಸಿಕೊಟ್ಟ ಶಾಸಕರನ್ನು ಪಶುಸಂಗೋಪನಾ ಇಲಾಖೆಯ ವೈದ್ಯರು ಸನ್ಮಾನಿಸಿದರು.
ಪುತ್ತೂರು ತಾಲೂಕು ಪಶುವೈದ್ಯಾಧಿಕಾರಿ ಡಾ. ಪ್ರಸನ್ನ ಹೆಬ್ಬಾರ್,ಡಾ. ಪ್ರಕಾಶ್, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಪದ್ಮನಾಭ ಬೋರ್ಕರ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.