ಎಪ್ರಿಲ್ 27ರಿಂದ 30ರ ವರೆಗೆ ರಾಷ್ಟ್ರೀಯ ಸೀನಿಯರ್ ಪವರ್ ಲಿಫ್ಟಿಂಗ್ ಸ್ಪರ್ಧೆ

ಶ್ರೀ ಬಾಲಂಜನೇಯ ಜಿಮ್ನಾಸಿಯಂ ಮಂಗಳೂರು ಇದರ 75ನೇ ವರ್ಷಚಾರಣೆಯ ಅಂಗವಾಗಿ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್-2022
ಏಪ್ರಿಲ್ 27ರಿಂದ ಎಪ್ರಿಲ್ 30ರ ವರೆಗೆ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ ಎಂದು ಮೂಡಾದ ಮಾಜಿ ಅಧ್ಯಕ್ಷರಾದ ತೇಜೋಮಯ ತಿಳಿಸಿದರು.

ಅವರು ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಎಪ್ರಿಲ್ 27ರಂದು ಸಂಜೆ 4 ಗಂಟೆಗೆ ಕ್ರೀಡಾಳುಗಳು ನಗರದ ಆಯ್ದ ರಸ್ತೆಗಳಲ್ಲಿ ಪಥಸಂಚಲನ ನಡೆಸಿ ನಗರದ ಬಾಲಾಂಜನೇಯ ಜಿಮ್ನಾಶಿಯಂಗೆ ಭೇಟಿ ನೀಡಿ ಪುರಭವನಕ್ಕೆ ಮರಳಿ ಬರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಉದ್ಘಾಟನಾ ಸಮಾರಂಭ ಅಧ್ಯಕ್ಷತೆಯನ್ನು ಮಂಗಳೂರಿನ ಸಂಸದ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದು, ಸ್ಪರ್ಧೆಯ ಉದ್ಘಾಟನೆಯನ್ನು ಇಂಧನ ಸಚಿವ ಸುನೀಲ್ ಕುಮಾರ್ ಅವರು ನೆರವೇರಿಸಲಿದ್ದಾರೆ. ಶಾಸಕ ವೇದವ್ಯಾಸ ಕಾಮತ್ ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ.ಮುಖ್ಯ ಅತಿಥಿಗಳಾಗಿ ಮಂಗಳೂರು ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪಾಲಿಕೆಯ ಅಯುಕ್ತರಾದ ಅಕ್ಷಯ್ ಶ್ರೀಧರ್, ಮೆಸ್ಕಾಂ ಮತ್ತು ಸ್ಮಾರ್ಟ್ ಸಿಟಿ ಮಂಗಳೂರಿನ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರಾ, ಪವರ್ ಲಿಫ್ಟಿಂಗ್ ಇಂಡಿಯಾ ಇದರ ಅಧ್ಯಕ್ಷರಾದ ರಾಜೇಶ್ ತಿವಾರಿ, ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‍ನ ಅಧ್ಯಕ್ಷರಾದ ಡಾ. ಮೋಹನ್ ಆಳ್ವ ಮೊದಾಲವರು ಪಾಲ್ಗೊಳ್ಳಿದ್ದಾರೆ. ಎಪ್ರಿಲ್ 30ರಂದು ಸಂಜೆ 5.30ಕ್ಕೆ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಮಾರೋಪದಲ್ಲಿ ಸಚಿವರಾ ಕೋಟ ಶ್ರೀನಿವಾಸ ಪೂಜಾರಿ, ಎಸ್. ಅಂಗಾರ, ಶಾಸಕ ಡಾ. ವೈ ಭರತ್ ಶೆಟ್ಟಿ, ಯು.ಟಿ. ಖಾದರ್, ಮಂಗಳೂರು ಪೊಲೀಸ್ ಅಯುಕ್ತರಾದ ಎನ್ ಶಶಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಹರೀಶ್ ಕುಮಾರ್, ಮಂಜುನಾಥ್ ಭಂಡಾರಿ, ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.


ಈ ಸಂದರ್ಭ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿ ಸತೀಶ್ ಕುಮಾರ್, ಮಂಗಳೂರಿನ ಬಾಲಾಂಜನೇಯ ಜಿಮ್ನಾಶಿಯಂನ ಅಧ್ಯಕ್ಷರಾದ ಉಮೇಶ್ ಗಟ್ಟಿ. ಕರ್ನಾಟಕ ಪವರ್ ಲಿಫ್ಟಿಂಗ್ ಅಸೋಸಿಯೇಶನ್ ಖಜಾಂಜಿ ಜಯರಾಂ ಎಂ, ದಕ್ಷಿಣ ಕನ್ನಡ ಜಿಲ್ಲಾ ಪವರ್ ಲಿಫ್ಟಿಂಗ್ ಎಸೋಸಿಯೇಶನ್ ಕಾರ್ಯದರ್ಶಿ ಮಧುಚಂದ್ರ, ಮಂಗಳೂರು ಪಾಲಿಕೆಯ ಮಾಜಿ ಮೇಯರ್ ಪುರಂದರದಾಸ್ ಉಪಸ್ಥಿತರಿದ್ದರು.

Related Posts

Leave a Reply

Your email address will not be published.

How Can We Help You?