ಬಹರೇನ್ ದ್ವೀಪ ರಾಷ್ಟ್ರದಲ್ಲಿ ಸಾಂಸ್ಕ್ರತಿಕ ಸಂಭ್ರಮ : ಪ್ರವಾಸಿ ಭಾರತೀಯ ಸಮ್ಮಾನ ಪ್ರಶಸ್ತಿಗೆ ಭಾಜನರಾದ ಕೆ. ಜಿ. ಬಾಬುರಾಜನ್

ಬಹರೈನ್ ; ಇಲ್ಲಿನ ಕೇರಳ ಮೂಲದ ಶ್ರೀ ನಾರಾಯಣ ಕಲ್ಚರಲ್ ಸೊಸೈಟಿ ,ಗುರುದೇವ ಸೋಶಿಯಲ್ ಸೊಸೈಟಿ ಹಾಗು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಅನಿವಾಸಿ ಬಿಲ್ಲವರ ಸಂಘಟನೆಯಾದ ಬಹರೈನ್ ಬಿಲ್ಲವಾಸ್ ಜಂಟಿಯಾಗಿ ಬ್ರಹತ್ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಈ ಕಾರ್ಯಕ್ರಮವು ಬರುವ ಮೇ 6ರ ಶುಕ್ರವಾರದಂದು ಸಂಜೆ 7 ಘಂಟೆಗೆ ಸರಿಯಾಗಿ ಇಲ್ಲಿನ ಇಸಾ ಟೌನ್ ಪರಿಸರದಲ್ಲಿರುವ ಇಂಡಿಯನ್ ಸ್ಕೂಲಿನ ಜಶನ್ಮಾಲ್ ಸಂಭಾಂಗಣದಲ್ಲಿ ಜರುಗಲಿರುವುದು.

ಕೇರಳ ಮೂಲದ ಖ್ಯಾತ ಭಾರತೀಯ ಉದ್ಯಮಿ ಕೆ . ಜಿ . ಬಾಬುರಾಜನ್ ರವರು ಭಾರತ ಸರಕಾರದ 2021ರ ಸಾಲಿನ ಪ್ರತಿಷ್ಠಿತ ಪ್ರವಾಸಿ ಭಾರತೀಯ ಸಮ್ಮಾನ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಅವರಿಗೆ ಭವ್ಯ ಸ್ವಾಗತದೊಂದಿಗೆ ಸಮ್ಮಾನಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ . ಈ ಕಾರ್ಯಕ್ರಮಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ ಮೂಲ ಸ್ಥಾನವಾದ ಶಿವಗಿರಿ ಮಠದ ಶ್ರೀ ನಾರಾಯಣ ಧರ್ಮ ಸಂಸ್ಥಾನದ ನೂತನ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಬ್ರಹ್ಮಶ್ರೀ ಸಚ್ಚಿದಾನಂದ ಸ್ವಾಮಿ , ಬ್ರಹ್ಮಶ್ರೀ ರಿತಾಂಬರನಂದ ಸ್ವಾಮಿ, ಬ್ರಹ್ಮಶ್ರೀ ಗುರುಪ್ರಸಾದ್ ಸ್ವಾಮಿ, ಬ್ರಹ್ಮಶ್ರೀ ವಿಶಾಲನಂದ ಸ್ವಾಮಿ ಯವರು ವಿಶೇಷವಾಗಿ ಆಗಮಿಸಲಿದ್ದು ಅವರಿಗೂ ಅದ್ದೂರಿ ಸ್ವಾಗತದೊಂದಿಗೆ ಸಮ್ಮಾನಿಸಲಾಗುವುದು. ಶಿವಗಿರಿ ಬ್ರಹ್ಮ್ಮವಿದ್ಯಾಲಯವು ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದ್ದು ಇದೇ ಸಂಧರ್ಭದಲ್ಲಿ ಸುವರ್ಣ ಮಹೋತ್ಸವ ಸಂಭ್ರಮಾಚರಣೆಯನ್ನು ಈ ಕಾರ್ಯಕ್ರಮದಲ್ಲಿ ಘೋಷಿಸಲಾಗುವುದು.

ಈ ಬ್ರಹತ್ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳ ಪ್ರದರ್ಶನವಿದ್ದು ಖ್ಯಾತ ಮಲಯಾಳಂ ನಟಿ ಹಾಗು ಪ್ರಖ್ಯಾತ ನ್ರತ್ಯ ಕಲಾವಿದೆ ನವ್ಯ ನಾಯರ್ ರವರು ಈ ಕಾರ್ಯಕ್ರಮದಲ್ಲಿ ವಿಶೇಷ ನ್ರತ್ಯ ಪ್ರದರ್ಶನ ನೀಡಲಿದ್ದಾರೆ . ಬ್ರಹ್ಮಶ್ರೀ ನಾರಯಣಗುರುಗಳನ್ನು ಸ್ತುತಿಸುವ ಪ್ರಾರ್ಥನೆಯೊಂದರಲ್ಲಿ ಸುಮಾರು ನೂರು ಮಹಿಳೆಯರು ಏಕಕಾಲದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದ್ವೀಪರಾಷ್ಟ್ರದ ಹಾಗು ಭಾರತೀಯ ಮೂಲದ ಗಣ್ಯರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಕಾರ್ಯಕ್ರಮಕ್ಕೆ ಎಲ್ಲಾ ಭಾರತೀಯರಿಗೂ ಮುಕ್ತ ಅವಕಾಶವಿದೆ.

Related Posts

Leave a Reply

Your email address will not be published.

How Can We Help You?