ಗುಂಡ್ಲುಪೇಟೆ : ಡಾ. ರಾಜ್‍ಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ ಶಿಬಿರ

ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟು ಹಬ್ಬ ಅಂಗವಾಗಿ ರಕ್ತದಾನ ಶಿಬಿರವು ಗುಂಡ್ಲುಪೇಟೆಯ ಗುರುಭವನದಲ್ಲಿ ನಡೆಯಿತು. ಶಾಸಕ ನಿರಂಜನಕುಮಾರ್ ಚಾಲನೆ ನೀಡಿದರು. ಗುಂಡ್ಲುಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ನಿರಂಜನಕುಮಾರ್ ಮಾತಾನಾಡಿ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿ ಮತ್ತೊಬ್ಬ ಜೀವ ಉಳಿಸುವುದು ಪುಣ್ಯದ ಕೆಲಸವಾಗಿದೆ.ಈ ನಿಟ್ಟಿನಲ್ಲಿ ತಾಲೂಕು ಪತ್ರಕರ್ತರು ವಿವಿಧ ಕಾರ್ಯಕ್ರಮವನ್ನು ಮಾಡಿ ಇತರರಿಗೆ ಮಾದರಿಯಾಗಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಗುಂಡ್ಲುಪೇಟೆ ಎಸಿಎಫ್ ರವೀಂದ್ರ ನೇತ್ರದಾನ ಪತ್ರ ನೀಡಿ ಇತರರಿಗೆ ಮಾದರಿಯಾದರು. ಇದೇ ಸಂದರ್ಭದಲ್ಲಿ ಕಣ್ಣಿನ ತಪಾಸಣೆ ಶಿಬಿರ ,ನೇತ್ರದಾನ ಶಿಬಿರ ಏರ್ಪಡಿಸಿದರು.

Related Posts

Leave a Reply

Your email address will not be published.

How Can We Help You?