ಕಟಪಾಡಿಯಲ್ಲಿ ಪ್ರತಿದಿನ ಟ್ರಾಫಿಕ್ ಜಾಮ್ : ಅಂಡರ್ ಪಾಸ್ ನಿರ್ಮಾಣದ ಬೇಡಿಕೆಗೆ ದೊರಕದ ಮನ್ನಣೆ

ಕಟಪಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ಬ್ಲಾಕ್ ಆಗಿ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವಂತ್ತಾಗಿದ್ದು, ವಾಹನ ಸಾಲು ಮೈಲುದ್ಧ ಬೆಳೆದಿರುತ್ತದೆ.
ಕಟಪಾಡಿ ಪೇಟೆಭಾಗದಲ್ಲೇ ಶಿರ್ವ-ಮಟ್ಟು, ಮಂಗಳೂರು- ಉಡುಪಿ ಸಂಧಿಸುವ ನಾಲ್ಕು ರಸ್ತೆಗಳಿದ್ದು, ಇಲ್ಲಿ ನಿರಂತರ ಹೆದ್ದಾರಿ ತಡೆ ಆಗುತ್ತಿದೆ. ಈ ನಿಟ್ಟಿನಲ್ಲಿ ಅಂಡರ್ ಪಾಸ್ ಬೇಕೆಂಬ ಬಹು ಹಿಂದಿನ ಬೇಡಿಕೆಯಾಗಿದ್ದರೂ ಈ ವರೆಗೂ ಬೇಡಿಕೆಗೆ ಮನ್ನಣೆ ದೊರಕದ ಹಿನ್ನಲೆಯಲ್ಲಿ ಜನ ನಿತ್ಯ ಸಮಸ್ಯೆ ಅನುಭವಿಸುವಂತ್ತಾಗಿದೆ. ಬ್ಲಾಕ್ ಸಮಸ್ಯೆ ಇತ್ಯಾರ್ಥಗೊಳಿಸಲು ಪೆÇಲೀಸರೊಂದಿಗೆ ಸ್ಥಳೀಯ ಯುವಕರು ಕೈ ಜೋಡಿಸಿ ಕರ್ತವ್ಯ ನಿರ್ವಾಹಣೆ ಮಾಡುವ ವೇಳೆ ಕೆಲ ಅಟೋ ರಿಕ್ಷಾ ಚಾಲಕರು ಅಡ್ಡಾದಿಡ್ಡ ಅಟೋ ಚಲಾಯಿಸಿ ಸಮಸ್ಯೆ ಮತ್ತಷ್ಟು ಕಠಿಣಗೊಳಿಸುವ ಸಂದರ್ಭ ಅನಿವಾರ್ಯವಾಗಿಯೇ ಪೆÇಲೀಸರ ಕೆಂಗಣ್ಣಿಗೆ ಗುರಿಯಾದ ಘಟನೆಯೂ ನಡೆದಿದೆ.

Related Posts

Leave a Reply

Your email address will not be published.

How Can We Help You?