ಮಂಜೇಶ್ವರ: ಬೇಕರಿಗೆ ನುಗ್ಗಿ ನಗದನ್ನು ದೋಚಿದ ಕಳ್ಳರು

ಮಂಜೇಶ್ವರ: ತೂಮಿನಾಡು ಎಂ ಎಫ್ ಪ್ಲಾಜಾದಲ್ಲಿ ಕಾರ್ಯಾಚರಿಸುತ್ತಿರುವ ಹನಿ ಬೇಕರಿಗೆ ನುಗ್ಗಿದ ಕಳ್ಳರು ಡ್ರಾವರಿನೊಳಗೆ ಇಟ್ಟಿದ್ದ ನಗದನ್ನು ದೋಚಿ ಪರಾರಿಯಾಗಿದ್ದಾರೆ. ಬೇಕರಿಯೊಳಗೆ ಕಳವು ಗೈಯುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಎರಡು ಬೈಕುಗಳಲ್ಲಾಗಿ ಆಗಮಿಸಿದ ಕಳ್ಳರ ಪೈಕಿ ಒಬ್ಬ ಬೇಕರಿಯ ಬಲ ಭಾಗದ ಗಾಜಿನ ಮೇಲ್ಬಾಗದಿಂದ ಹತ್ತಿ ಛಾವಣಿಯ ಮೂಲಕ ಇಳಿದು ನೇರವಾಗಿ ಡ್ರಾವರಿನ ಬಳಿ ಬಂದು ಡ್ರಾವರಿನೊಳಗೆ ಇಟ್ಟಿದ್ದ 1200 ರೂ. ವನ್ನು ದೋಚಿದ್ದಾನೆ.
ಸಂಪೂರ್ಣವಾಗಿ ಪರಿಚಯವಿರುವ ರೀತಿಯಲ್ಲಿಯೇ ಮೊದಲೇ ಅಂದಾಜಿಸಿ ಕಳವು ನಡೆದಂತೆ ಅಂಗಡಿ ಮಾಲಕ ಸತ್ತಾರ್ ತಿಳಿಸಿದ್ದಾರೆ.
ಬೇಕರಿಯ ಹತ್ತಿರದಲ್ಲೇ ಫ್ಯಾನ್ಸಿಯೊಂದರ ಮುಂಬಾಗದಲ್ಲಿ ಸಾಮಾಗ್ರಿಗಳನ್ನು ಇಡಲು ಒಂದು ಸ್ಟ್ಯಾಂಡನ್ನು ಇಡಲಾಗಿದ್ದು ಇದರಲ್ಲಿ ರಾತ್ರಿ ಕಾಲದಲ್ಲಿ ಹಲವು ಮಂದಿ ಕೂರುತ್ತಿರುವುದಾಗಿಯೂ ಕೆಲವೊಂದು ಅದನ್ನೇ ರಾತ್ರಿಕಾಲದ ಅಡ್ಡೆಯನ್ನಾಗಿಸುತ್ತಿರುವುದಾಗಿಯೂ ಅಲ್ಲಿಂದಲೇ ಬೇಕರಿಯ ಬಗ್ಗೆ ನಿಗಾ ಇರಿಸಿದ ತಿಂಡ ಕಳವು ನಡೆಸಿರಬಹುದಾಗಿಯೂ ಪರಿಸರವಾಸಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಲಿರುವುದಾಗಿ ಡಿ ವೈ ಎಸ್ಪಿ ಯವರು ಕೂಡಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಬೇಕರಿಯಲ್ಲಿ ಕಳವು ನಡೆಯುತ್ತಿರುವುದು ಇದು ಮೊದಲೇನಲ್ಲ. ಇದಕ್ಕಿಂತ ಮೊದಲು ಕೂಡಾ ಕಳವು ನಡೆದಿತ್ತು. ಅಂಗಡಿ ಮಾಲಕ ಸತ್ತಾರ್ ಮಂಜೇಶ್ವರ ಪೆÇಲೀಸರಿಗೆ ನೀಡಿದ ದೂರಿನಂತೆ ಪೆÇಲೀಸರು ಸಿಸಿ ಟಿವಿ ದೃಶ್ಯವನ್ನು ಕೇಂದ್ರೀಕರಿಸಿ ತನಿಖೆ ಆರಂಭಿಸಿದ್ದಾರೆ.