ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ ಸೇವಾರ್ಪಣೆ

ಕಾರ್ಕಳ: ಬಾಲಿವುಡ್ ರಂಗದಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಶಿವಾ’ಸ್ ಹೇರ್ ಡಿಝೈನರ್ಸ್‍ನ ಆಡಳಿತ ನಿರ್ದೇಶಕ ಡಾ| ಶಿವರಾಮ ಕೃಷ್ಣ ಭಂಡಾರಿ ರವರ ಮಾತೃಶ್ರೀ ಹೆಸರಿನಲ್ಲಿ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಲೋಕಾರ್ಪನ ಕಾರ್ಯಕ್ರಮ ಕಾರ್ಕಳ ಮಿಯಾರು ಸೈಂಟ್ ಡೋಮಿನಿಕ್ ಚರ್ಚ್‍ನ ಸಮುದಾಯ ಭವನದಲ್ಲಿ ನಡೆಯಿತು.

ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ (ರಿ.) ಉದ್ಘಾಟನೆ ಪ್ರಯುಕ್ತ ,ಎ.ಜೆ ಹಾಸ್ಪಿಟಲ್-ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮಂಗಳೂರು, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಅಂಧತ್ವ ನಿವಾರಣಾ ಸಂಘ ಸಹಯೋಗದೊಂದಿಗೆ ಧರ್ಮಾರ್ಥ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ತುಳು ಸಂಘ ಬರೋಡಾ ಇದರ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ ,ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್‍ನ ಲಾಂಛನ ಅನಾವರಣ ಗೊಳಿಸಿದರು.
ನಂತರ ಮಾತನಾಡಿದ ಅವರು ಹುಟ್ಟು ಹಬ್ಬವನ್ನು ನಾವು ಹೇಗೂ ಆಚರಿಸಬಹುದು. ಆದರೆ ಸೇವೆಯೊಂದಿಗೆ ಆಚರಿಸಿ ಜನಮೆಚ್ಚುಗೆ ಪಾತ್ರವಾಗುವುದು ಆದರ್ಶದಾಯತ್ವವಾಗಿದೆ ಎಂದು ಹೇಳಿದರು.

ಭಂಡಾರಿ ಮಹಾ ಮಂಡಲದ ಸ್ಥಾಪಕಾಧ್ಯಕ್ಷ ಕಡಂದಲೆ ಸುರೇಶ್ ಎಸ್.ಭಂಡಾರಿ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು ಸಮಾಜ ಸೇವೆಯ ಸಂಕಲ್ಪ ಪಾವಿತ್ರ್ಯತಾವಾದುದು. ಸಮಾಜದ ಕಟ್ಟಕಡೆಯ ಸಾಲಿನಲ್ಲಿ ಜನ್ಮ ತಾಳಿದ ಶಿವರಾಮ ಭಂಡಾರಿ ಇಂದು ನಿತ್ಯೋತ್ಸವದ ರೂವಾರಿ. ದೇಶಕ್ಕೊಂದು ಸಂವಿಧಾನ ಇದ್ದಂತೆ ಬದುಕಿಗೊಂದು ಸಂವಿಧಾನವನ್ನಿರಿಸಿ ಬದುಕು ಬಂಗಾರವಾಗಿಸಿ ಮಾದರಿ ಆಗಿದ್ದಾರೆ ಎಂದರು. ಗುಲಾಬಿ ಕೃಷ್ಣ ಚಾರಿಟೇಬಲ್ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷÀ ಡಾ| ಶಿವರಾಮ ಕೆ.ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.

ಸೈಂಟ್ ಡೊಮಿನಿಕ್ ಚರ್ಚ್ ಮಿಯಾರು ಇದರ ಪ್ರಧಾನ ಗುರು ರೆ| ಫಾ| ಪಾವ್ಲ್ ರೆಗೋ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‍ನ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಮುನಿಯಾಲ್,ಎ.ಜೆ ಹಾಸ್ಪಿಟಲ್ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‍ನ ಸಹ ಪ್ರಾಧ್ಯಾಪಕಿ ಡಾ| ಪ್ರಣಮ್ಯ ಜೈನ್ ಮಿಯಾರು ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ಅಮೀನ್, ಬ್ರಹ್ಮಶ್ರೀ ಮೊಗೇರ ದೈವಸ್ಥಾನ ಸಮಿತಿ ಅಧ್ಯಕ್ಷ ದಿನೇಶ್ ಮೊಗೇರ ಮುಖ್ಯ ಅತಿಥಿಗಳಾಗಿದ್ದರು.
ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್. ಪತ್ರಕರ್ತ ರೋನ್ಸ್ ಬಂಟ್ವಾಳ್. ಗುಲಾಬಿ ಕೃಷ್ಣ ಟ್ರಸ್ಟ್‍ನ ಸದಸ್ಯೆಯರಾದ ಅನುಶ್ರೀ ಎಸ್.ಭಂಡಾರಿ, ಶ್ವೇತಾ ರಘು ಭಂಡಾರಿ ಉಪಸ್ಥಿತರಿದರು.

Related Posts

Leave a Reply

Your email address will not be published.

How Can We Help You?