ಕಟೀಲು : ಸೀಯಾಳ ವಿಚಾರದಲ್ಲಿ ಹಲ್ಲೆ ಆರೋಪ :  ಮೊಹಿಯುದ್ದಿನ್ ಬಾವ ಪ್ರತಿಭಟನೆ ಎಚ್ಚ​ರಿ​ಕೆ

ಎಳನೀರು ಸರಬರಾಜು ಮಾಡುತ್ತಿದ್ದಾಗ ವ್ಯಾಪಾರಕ್ಕೆ ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ್ದು, ಮಾತ್ರವಲ್ಲದೆ ಸಮಾಜದಲ್ಲಿ ಜಾತಿಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಅಶಾಂತಿ ಸ್ರಷ್ಟಿಸಿ ಗಲಭೆಗೆ ಕಾರಣವಾಗುತ್ತಿದ್ದ ದುಷ್ಟ ಶಕ್ತಿಗಳ ವಿರುದ್ದ ನಿರ್ಧಾಕ್ಷೀಣವಾಗಿ ಕಾನೂನು ಕ್ರಮ ಕೈಗೊಂಡದನ್ನು ನೆಪವಾಗಿಟ್ಟುಕೊಂಡು ಬಿಜೆಪಿ ಪ್ರೇರಿತ ಸಂಘಪರಿವಾರ ಸಂಘಟನೆಗಳು ಬಜ್ಪೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ನ್ಯಾಯಯುತವಾಗಿ ತನಿಖೆ ನಡೆಸಿದ ಪೊಲಿಸ್ ಇನ್ಸ್ಪೆಕ್ಟರನ್ನು,ಮತ್ತು ಸಿಬ್ಬಂದಿಗಳನ್ನು ಸರಕಾರ ಇಲಾಖೆಯ ಮೂಲಕ ಅಮಾನತು ಮಾಡಿದೆ .ಇದು ಸಮಾಜದಲ್ಲಿ ಅರಾಜಕತೆ ಸ್ರಷ್ಳಿಸುವ ಗೂಂಡಾಗಳಿಗೆ ಸರಕಾರ ಪರೋಕ್ಷ ಬೆಂಬಲ ನೀಡಿದಂತಾಗಿದೆ ಹಾಗೂ ಇಂತಹ ರಾಜಕೀಯ ಪ್ರೇರಿತ ಅಮಾನತುಗಳಿಂದ ಪೊಲೀಸ್ ಇಲಾಖೆಯ ಆತ್ಮಸ್ಥೈರ್ಯ ಕುಗ್ಗಿದಂತಾಗುತ್ತದೆ, ಪೊಲೀಸ್ ಇಲಾಖೆಯ ಅಧಿಕಾರಿಗಳು , ಸಿಬ್ಬಂದಿಗಳು ನೆಮ್ಮದಿಯಿಂದ ಕೆಲಸ ನಿರ್ವಹಿಸಲು ಸರಕಾರ ಮತ್ತು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಅವಕಾಶವನ್ನು ಮಾಡಿಕೊಡಬೇಕು,ಈ ವಿಷಯದ ಬಗ್ಗೆ ಈಗಾಗಲೇ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತರಲಾಗಿದ್ದು, ಸರಕಾರದ ಮೇಲೆ ಒತ್ತಡ ತಂದು ಪೊಲೀಸರು ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ವಾತಾವರಣ ಸೃಷ್ಟಿಸಲು ಒತ್ತಾಯಿಸಿರುವುದಾಗಿ ಬಾವಾ ತಿಳಿಸಿದ್ದಾರೆ,

ಪ್ರತಿಭಟನೆ : ಮೊಹಿಯುದ್ದಿನ್ ಬಾವ ಎಚ್ಚ​ರಿ​ಕೆ

ಘಟನೆಗೆ ಸಂಬಂಧಿಸಿದಂತೆ ಬಜಪೆ ಠಾಣೆಯ ದಕ್ಷ ಅಧಿಕಾರಿ ಸಂದೇಶ್ ಮತ್ತು ಸಿಬ್ಬಂದಿಗಳನ್ನು ಕರ್ತವ್ಯಲೋಪದ ಆರೋಪ ಹೊರಿಸಿ ಅಮಾನತು ಮಾಡಿರುವುದು ಖಂಡನೀಯ. ಇಲಾಖೆಯ ಈ ಅಮಾನವೀಯ ಕ್ರಮವನ್ನು ಮಾಜಿ ಶಾಸಕ ಡಾ. ಮೊಹಿಯುದ್ದಿನ್ ಬಾವ ಖಂಡಿಸಿರುತ್ತಾರೆ. ಅವರ ಅಮಾನತು ಆದೇಶವನ್ನು ಹಿಂತೆಗೆದುಕೊಳ್ಳದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Related Posts

Leave a Reply

Your email address will not be published.

How Can We Help You?